ETV Bharat / health

ಈ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಕಾಡುತ್ತೆ ಆರೋಗ್ಯದ ಸಮಸ್ಯೆ - Dont Do These Things After Meals - DONT DO THESE THINGS AFTER MEALS

Dont Do These Things After Meals: ನಾವು ಆರೋಗ್ಯವಾಗಿರಲು ಸರಿಯಾದ ಊಟ ಮಾಡುವುದು ಅತ್ಯಗತ್ಯ. ಪ್ರಮುಖವಾಗಿ ಊಟದ ನಂತರ ಈ ಕೆಲಸಗಳನ್ನು ಮಾಡದಂತೆ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ, ಅದರಿಂದ ನಿಮ್ಮ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚಿರುತ್ತದೆ. ಇದೀಗ ಊಟದ ನಂತರ ಏನು ಮಾಡಬಾರದು ಎಂದು ತಿಳಿಯೋಣ.

AVOID THESE HABITS AFTER MEALS  NEVER DO THESE THINGS AFTER MEALS  WHAT NOT TO DO AFTER EATING  THINGS NOT TO DO AFTER EATING
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Sep 11, 2024, 5:30 AM IST

Avoid These Habits After Meals: ಆರೋಗ್ಯವೇ ವರದಾನ ಎಂದು ಹಿರಿಯರು ಹೇಳುತ್ತಾರೆ. ಆದರೆ, ನಾವು ಆರೋಗ್ಯವಾಗಿರಬೇಕಾದರೆ ಸರಿಯಾದ ಆಹಾರ ಸೇವಿಸಬೇಕು ಮತ್ತು ಕೆಲವು ಅಭ್ಯಾಸಗಳನ್ನು ತ್ಯಜಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಯಾಕೆಂದರೆ.. ದಿನನಿತ್ಯದ ಜೀವನದಲ್ಲಿ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಅದರಲ್ಲೂ ಊಟದ ನಂತರ ಗೊತ್ತಿದ್ದೋ ಅಥವಾ ತಿಳಿಯದೆಯೋ ಈ ಚಟುವಟಿಕೆಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ ಕೆಲವರಲ್ಲಿ ಇಲ್ಲದ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತವೆ ಎನ್ನಲಾಗಿದೆ. ಹಾಗಾದ್ರೆ.. ಈ ಸ್ಟೋರಿಯಲ್ಲಿ ಊಟ ಮಾಡಿದ ತಕ್ಷಣ ಮಾಡಬಾರದ ಕೆಲಸಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಊಟದ ತಕ್ಷಣವೇ ಸ್ನಾನ ಮಾಡಬೇಡಿ: ಕೆಲವರಿಗೆ ಊಟವಾದ ನಂತರ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಅಂತಹವರು ಈ ಅಭ್ಯಾಸದಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ತಜ್ಞರು. ಏಕೆಂದರೆ ಹೊಟ್ಟೆಗೆ ಸರಿಯಾದ ಪ್ರಮಾಣದ ರಕ್ತ ಪರಿಚಲನೆ ಮತ್ತು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಶಕ್ತಿಯ ಅಗತ್ಯವಿರುತ್ತದೆ. ಅದಕ್ಕಾಗಿ.. ಊಟದ ನಂತರ ಸ್ನಾನ ಮಾಡಿದರೆ ರಕ್ತ ಪರಿಚಲನೆ ಚರ್ಮದ ಕಡೆಗೆ ಹೋಗಿ ತಾಪಮಾನವನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ಆಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಜೀರ್ಣದಂತಹ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ, ಊಟವಾದ 30 ಅಥವಾ 40 ನಿಮಿಷಗಳ ನಂತರ ಸ್ನಾನ ಮಾಡುವುದು ಉತ್ತಮ ಎನ್ನುತ್ತಾರೆ.

ಊಟದ ನಂತರ ಹೆಚ್ಚು ನೀರು ಕುಡಿಯಬೇಡಿ: ಅನೇಕ ಜನರು ತಿಂದ ತಕ್ಷಣ ಸಾಕಷ್ಟು ನೀರು ಕುಡಿಯುತ್ತಾರೆ. ಆದರೆ, ಹಾಗೆ ಕುಡಿಯುವುದರಿಂದ ಜೀರ್ಣಾಂಗವ್ಯೂಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ತಿಂದ ತಕ್ಷಣವೇ ಹೆಚ್ಚು ನೀರು ಕುಡಿದರೆ, ಆಹಾರವನ್ನು ಜೀರ್ಣಿಸಿಕೊಳ್ಳಲು ನೆರವಾಗುವ ಕಿಣ್ವಗಳು ಮತ್ತು ಜೀರ್ಣರಸಗಳು ಹೊಟ್ಟೆಯಲ್ಲಿ ಬಿಡುಗಡೆಯಾಗುವುದು ಕಡಿಮೆಯಾಗುತ್ತದೆ. ಪರಿಣಾಮವಾಗಿ, ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಆದರೆ, ವಿಷಕಾರಿ ಅಂಶವು ದೇಹದಲ್ಲಿ ವಿಪರೀತವಾಗಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಊಟವಾದ ಒಂದು ಗಂಟೆಯ ನಂತರ ನೀರು ಕುಡಿಯುವುದು ಉತ್ತಮ ಎಂದು ಹೇಳಲಾಗುತ್ತದೆ.

ಈ ಅಭ್ಯಾಸಗಳನ್ನು ಮೊದಲು ತಪ್ಪಿಸಿ: ತಿಂದ ತಕ್ಷಣ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಆದರೆ, ಈ ಅಭ್ಯಾಸದಿಂದ ದೂರವಿರುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಏಕೆಂದರೆ.. ತಿಂದ ನಂತರ ಕಾಫಿ, ಟೀ ಕುಡಿದರೆ ಅವುಗಳಲ್ಲಿರುವ ಟ್ಯಾನಿನ್ ಮತ್ತು ಕೆಲವು ಬಗೆಯ ಆಮ್ಲಗಳು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ತಿಂದ ತಕ್ಷಣ ಸೇವಿಸುವ ಬದಲು ಒಂದು ಗಂಟೆಯ ನಂತರ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ತೊಂದರೆ ಇಲ್ಲ ಎನ್ನುತ್ತಾರೆ ವೈದ್ಯರು.

2000 ರಲ್ಲಿ 'ಜರ್ನಲ್ ಆಫ್ ನ್ಯೂಟ್ರಿಷನ್'ನಲ್ಲಿ ಪ್ರಕಟವಾದ ಅಧ್ಯಯನವು ಊಟದ ಜೊತೆಗೆ ಕಾಫಿ ಸೇವಿಸುವ ಜನರು ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಕಂಡುಹಿಡಿದಿದೆ. ಇಟಲಿಯ ಖ್ಯಾತ ಪೌಷ್ಟಿಕತಜ್ಞ ಡಾ.ಎಂ. ಮಾರಾಗೊ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಊಟವಾದ ಬಳಿಕ ನೀವು ಹಣ್ಣು ತಿನ್ನುತ್ತಿದ್ದೀರಾ?: ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಊಟದ ತಕ್ಷಣ ಹಣ್ಣುಗಳನ್ನು ತಿನ್ನದೇ ಇರುವುದು ಉತ್ತಮ ಎನ್ನುತ್ತಾರೆ ತಜ್ಞರು. ಏಕೆಂದರೆ... ಊಟದ ನಂತರ ತೆಗೆದುಕೊಂಡರೆ ಅದು ಇತರ ಪದಾರ್ಥಗಳೊಂದಿಗೆ ಬೆರೆತು ಅವುಗಳಲ್ಲಿರುವ ಪೋಷಕಾಂಶಗಳೊಂದಿಗೆ ದೇಹಕ್ಕೆ ಸೇರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅದಕ್ಕಾಗಿಯೇ ಹಣ್ಣುಗಳನ್ನು ತಿಂದ ತಕ್ಷಣ ಊಟ ಮಾಡುವುದು ಉತ್ತಮ.

ಊಟದ ತಕ್ಷಣ ಮಲಗುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದರೆ.. ಹೀಗೆ ಮಾಡುವುದರಿಂದ ದೇಹದಲ್ಲಿ ಕೊಬ್ಬು ಶೇಖರಣೆಗೊಂಡು ತೂಕ ಹೆಚ್ಚುತ್ತದೆ. ಮೇಲಾಗಿ.. ಜೀರ್ಣಕ್ರಿಯೆಗೆ ತೊಂದರೆಯಾಗುವ ಸಂಭವವಿದೆ. ಹಾಗಾಗಿ.. ಊಟದ ನಂತರ ಈ ಚಟುವಟಿಕೆಗಳಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ:

ಅಜೀರ್ಣಕ್ಕೆ ಆಯುರ್ವೇದದ ಮನೆ ಮದ್ದು; ಇದನ್ನು 1 ಚಮಚ ಸೇವಿಸಿ ಸಾಕು, ಸಮಸ್ಯೆಯಿಂದ ಮುಕ್ತಿ! - Ayurvedic Treatment For Indigestion

ಕಾಲು ಸೆಳೆತದಿಂದ ಬಳಲುತ್ತಿದ್ದೀರಾ? ಹೀಗೆ ಮಾಡಿದರೆ ಸೆಕೆಂಡ್​ಗಳಲ್ಲಿ ನೋವು ಮಾಯ! - Leg Cramps Prevention

ETV Bharat Logo

Copyright © 2024 Ushodaya Enterprises Pvt. Ltd., All Rights Reserved.