ಬಂಡೀಪುರದ ಪ್ರವೇಶದ್ವಾರ ಬಳಿ ಕೆಟ್ಟು ನಿಂತ ಕಂಟೈನರ್; ವೀಕೆಂಡ್ ಖುಷಿಯಲ್ಲಿದ್ದ ಪ್ರವಾಸಿಗರಿಗೆ ಟ್ರಾಫಿಕ್ ಬಿಸಿ - Mysore Ooty National Highway
🎬 Watch Now: Feature Video
ಚಾಮರಾಜನಗರ: ವೀಕೆಂಡ್ ಖುಷಿಯಲ್ಲಿ ಊಟಿಯತ್ತ ತೆರಳುತ್ತಿದ್ದ ಪ್ರವಾಸಿಗರು ಟ್ರಾಫಿಕ್ನಲ್ಲಿ ಗಂಟೆಗಟ್ಟಲೇ ಸಿಲುಕಿ ಪರದಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಪ್ರವೇಶದ್ವಾರದ ಬಳಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿ ಇರುವ ಪ್ರವೇಶ ದ್ವಾರದ ಮುಂದೆ ಬೃಹತ್ ಗಾತ್ರದ ಕಂಟೈನರ್ ವಾಹನ ಕೆಟ್ಟು ನಿಂತ ಪರಿಣಾಮ ಊಟಿ, ಗೂಡಲೂರು, ಬಂಡೀಪುರದತ್ತ ತೆರಳುತ್ತಿದ್ದವರು ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕಿದರು.
ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ವೀಕೆಂಡ್ ಸಮಯದಲ್ಲಿ ಸಾವಿರಾರು ವಾಹನಗಳ ಸಂಚಾರ ಇರುತ್ತದೆ. ಪ್ರವೇಶದ್ವಾರದ ಬಳಿಯೇ ವಾಹನ ಕೆಟ್ಟು ನಿಂತಿರುವ ಕಾರಣ ಕಿ.ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹಿಂದಕ್ಕೂ ಹೋಗಲಾರದೇ ಮುಂದೆಯೂ ಸಾಗಲಾರದೇ ಪ್ರಯಾಣಿಕರು ಟ್ರಾಫಿಕ್ನಲ್ಲಿ ಲಾಕ್ ಆಗಿದ್ದರು. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಟ್ರಾಫಿಕ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
ಊಟಿ ಗಿರಿಧಾಮ: ತಮಿಳುನಾಡಿನ ಸುಂದರವಾದ ಗಿರಿಧಾಮಗಳಲ್ಲಿ ಊಟಿ ಕೂಡ ಒಂದು. ಊಟಿ ತನ್ನ ಆಹ್ಲಾದಕರ ವಾತಾವರಣಕ್ಕೆ ಹೆಚ್ಚು ಜನಪ್ರಿಯವಾಗಿದೆ. ಊಟಿಯಲ್ಲಿ ಅನೇಕ ಸುಂದರವಾದ ಪ್ರವಾಸಿ ಸ್ಥಳಗಳಿವೆ. ಅವು ಒಂದಕ್ಕಿಂತ ಒಂದು ಮನೋಹರವಾಗಿದೆ. ಮೈಸೂರು ಮತ್ತು ಬೆಂಗಳೂರು ಮಂದಿಯ ಹಾಟ್ ಫೇವರೆಟ್ ತಾಣಗಳಲ್ಲಿ ಊಟಿ ಗಿರಿಧಾಮವು ಒಂದು.
ಇದನ್ನೂಓದಿ:ಚಾಮರಾಜನಗರದಲ್ಲಿ ವರುಣನ ಆರ್ಭಟ: ಧರೆಗುರುಳಿದ ಮರ, ನೆಲಕಚ್ಚಿದ ಬಾಳೆ - heavy rain