ಚಾಮರಾಜನಗರ: ಇವಿಎಂ ಹೊತ್ತು ಬರುತ್ತಿದ್ದ ವಾಹನ ಅಡ್ಡಹಾಕಿದ ಕಾಡಾನೆ ಹಿಂಡು - ವಿಡಿಯೋ ನೋಡಿ - vehicle blocked by elephant - VEHICLE BLOCKED BY ELEPHANT

🎬 Watch Now: Feature Video

thumbnail

By ETV Bharat Karnataka Team

Published : Apr 27, 2024, 12:32 PM IST

ಚಾಮರಾಜನಗರ: ಚುನಾವಣಾ ಕರ್ತವ್ಯ ಮುಗಿಸಿ ಇವಿಎಂಗಳನ್ನು ಹೊತ್ತು ಬರುತ್ತಿದ್ದ ಚುನಾವಣಾ ಸಿಬ್ಬಂದಿಯಿದ್ದ ವಾಹನವನ್ನು ಕಾಡಾನೆ ಹಿಂಡು ಅಟ್ಟಾಡಿಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ವಾಪಸ್​​​ ಬರುವಾಗ ಅರಣ್ಯದ ರಸ್ತೆಯಲ್ಲಿ ಕಾಡಾನೆಯೊಂದು ಚುನಾವಣಾ ಸಿಬ್ಬಂದಿ ವಾಹನವನ್ನು ಅಟ್ಟಾಡಿಸಿಕೊಂಡು ಬಂದಿದೆ. ದಿಗಿಲುಗೊಂಡ ಚುನಾವಣಾ ಸಿಬ್ಬಂದಿ ಅರ್ಧದಾರಿಗೆ ವಾಪಸ್​ ಮತಗಟ್ಟೆಯತ್ತ ತೆರಳಿದ್ದಾರೆ. ನಂತರ, ಪ್ರಯಾಸಪಟ್ಟು ಅರಣ್ಯ ಇಲಾಖೆ ಎಸ್ಕಾರ್ಟ್ ಜೊತೆಗೆ ಪ್ರಾಣಭೀತಿಯಲ್ಲೇ ಅರಣ್ಯ ಪ್ರದೇಶದಿಂದ ಹೊರಬಂದು ನಿಟ್ಟುಸಿರು ಬಿಟ್ಟಿದ್ದಾರೆ‌. 

ಇತ್ತೀಚಿನ ಘಟನೆ, ಕಾಡಾನೆಯಿಂದ ಪಾರಾದ ಬೈಕ್ ಸವಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಕಾಡಾನೆಯೊಂದು ಇತ್ತೀಚೆಗೆ ಕಾಣಿಸಿಕೊಂಡಿತ್ತು. ಅಚ್ಚರಿ ವಿಷಯವೇನೆಂದರೆ, ತಿರುವಿನಲ್ಲಿ ರಸ್ತೆ ದಾಟಲು ಮುಂದಾಗಿದ್ದ ಕಾಡಾನೆಯನ್ನು ಗಮನಿಸದೇ ಮುಂದೆ ಬಂದ ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದನು. ಚಾರ್ಮಾಡಿಯ ಬಂಜಾರು ಮಲೆ ಕಡೆಯಿಂದ ಬಂದಿದ್ದ ಕಾಡಾನೆ ಕೆಲವು ಹೊತ್ತು ರಸ್ತೆ ಬದಿಯಲ್ಲಿ ನಿಂತುಕೊಂಡು ನಂತರ ಅಲ್ಲಿಂದ ಹೋಗಿತ್ತು. ರಸ್ತೆ ಬದಿ ಆನೆಯನ್ನು ಕಂಡಿದ್ದ ವಾಹನ ಸವಾರರು ಆನೆ ದಾಟಿ ಹೋಗುವವರೆಗೆ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. 

ಇದನ್ನೂ ಓದಿ: ಶ್ರೀ ಕ್ಷೇತ್ರ ಕಟೀಲಿನಲ್ಲಿ ಪ್ರಸಿದ್ಧ 'ತೂಟೆದಾರ' ಸೇವೆ: ವಿಡಿಯೋ ನೋಡಿ - Kateel Thootedhara Seva 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.