ಮಾರುಕಟ್ಟೆಗೆ ಅತಿ ವೇಗವಾಗಿ ನುಗ್ಗಿದ ಕಾರು; ಮಹಿಳೆ ಸಾವು, 10 ಮಂದಿಗೆ ಗಾಯ - car accident
🎬 Watch Now: Feature Video
Published : Mar 14, 2024, 12:15 PM IST
ನವದೆಹಲಿ: ಅತಿ ವೇಗವಾಗಿ ಬಂದ ಕಾರೊಂದು ಇಲ್ಲಿನ ಮಾರುಕಟ್ಟೆಯೊಳಗೆ ನುಗ್ಗಿ ಜನರಿಗೆ ಗುದ್ದಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಾರಿನ ಚಾಲಕ ಕೂಡ ಗಾಯಗೊಂಡಿದ್ದಾನೆ. ಭೀಕರ ದುರ್ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೂರ್ವ ದಿಲ್ಲಿಯ ಮಯೂರ್ ವಿಹಾರ್ ಪ್ರದೇಶದ ಮಾರುಕಟ್ಟೆಯಲ್ಲಿ ವೇಗವಾಗಿ ಬಂದ ಕಾರೊಂದು ಜನರನ್ನು ಗುದ್ದಿದೆ. ಬಳಿಕ ಚಾಲಕ ಕಾರನ್ನು ಮತ್ತೆ ವೇಗವಾಗಿ ಓಡಿಸಿಕೊಂಡು ಹೋಗಿದ್ದಾನೆ. ಜನರು ಆತನನ್ನು ಹಿಡಿಯಲು ಪ್ರಯತ್ನಿಸಿದರೂ, ಕಾರು ನಿಲ್ಲಸದೇ ಪರಾಗಿಯಾಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಸ್ವಲ್ಪ ದೂರದ ಬಳಿಕ ಕಾರು ಮಗುಚಿ ಬಿದ್ದಿದೆ. ಇದರಿಂದ ಚಾಲಕನೂ ಗಾಯಗೊಂಡಿದ್ದಾನೆ.
ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಅಪಘಾತದ ಸಿಸಿಟಿವಿ ವಿಡಿಯೋ ಹೊರಬಿದ್ದಿದೆ. ಕಾರು ಚಾಲಕ ಸೇರಿದಂತೆ ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿ ವೇಗ ಮತ್ತು ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೂರ್ವ ದೆಹಲಿಯ ಡಿಸಿಪಿ ಅಪೂರ್ವ ಗುಪ್ತಾ ಮಾಹಿತಿ ನೀಡಿದರು.
ಅಪಘಾತದ ಮಾಹಿತಿ ತಿಳಿದ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಬಗ್ಗೆ ವಿಚಾರಿಸಿದರು. ದೆಹಲಿಯಲ್ಲಿ ಅತಿವೇಗದ ಚಾಲನೆಯಿಂದ ಅನಾಹುತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಜನರ ಪ್ರಾಣಕ್ಕೆ ಕುತ್ತು ಉಂಟಾಗುತ್ತಿದೆ. ಇದನ್ನು ತಡೆಯಲು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತ: ಆಟೋ ಚಾಲಕನಿಗೆ ಗಾಯ