ಲೋಕಾಯುಕ್ತ ಪೊಲೀಸರ ಹೆಸರು ಬಳಸಿ ಲಂಚಕ್ಕೆ ಬೇಡಿಕೆ: ಇಬ್ಬರ ಬಂಧನ - CHEATING CASE
🎬 Watch Now: Feature Video
Published : Oct 9, 2024, 3:37 PM IST
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಎಂಜಿನಿಯರ್ ವಿಲಾಸ್ ಎಂಬವರಿಗೆ ಲೋಕಾಯುಕ್ತ ಪೊಲೀಸರ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಜೀವ ಬೆದರಿಕೆ ಹಾಕಿದ ಆರೋಪಡಿ ಇಬ್ಬರು ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಕಾನೂನು ಸುವ್ಯಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.
ನಗರದಲ್ಲಿಂದು ಮಾಹಿತಿ ನೀಡಿದ ಅವರು, ''ಸತ್ತೂರು ನಿವಾಸಿಗಳಾದ ಶರಣು ಪಾಟೀಲ್ ಮತ್ತು ಜಾಕೀರ್ ಮುಲ್ಲಾ ಬಂಧಿತರು. ಇವರು ಲೋಕಾಯುಕ್ತ ಪೊಲೀಸರೆಂದು ಹೇಳಿಕೊಂಡು ಪಾಲಿಕೆ ಇಂಜಿನಿಯರ್ ವಿಲಾಸ್ ಅವರಿಗೆ ಫೋನ್ ಕರೆ ಮಾಡಿ ನಿಮ್ಮ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ, ಅದನ್ನು ಸರಿಪಡಿಸಿಕೊಳ್ಳುವ ವಿಚಾರವಾಗಿ 1.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಸತ್ತೂರಿನಲ್ಲಿರುವ ಕಚೇರಿಗೂ ಬಂದು ಇತ್ಯರ್ಥ ಮಾಡಿಕೊಳ್ಳಲು ಹೇಳಿದ್ದರು. ಈ ವೇಳೆ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅನುಮಾನಗೊಂಡ ಎಂಜಿನಿಯರ್ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಆಧಾರದ ಮೇಲೆ ಶರಣು ಪಾಟೀಲ್ ಹಾಗೂ ಜಾಕೀರ್ ಮುಲ್ಲಾ ಎಂಬಿಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದು ಈ ರೀತಿ ಬೇರೆ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು'' ಎಂದು ಹೇಳಿದರು.
ಇದನ್ನೂ ಓದಿ: ನಕಲಿ ಜಾತಿ ಪ್ರಮಾಣ ಪತ್ರದಿಂದ ಉದ್ಯೋಗ ಪಡೆದ ಆರೋಪ: ನಿವೃತ್ತ BSNL ನೌಕರನ ವಿರುದ್ಧ ತನಿಖೆಗೆ ಆದೇಶ