ಅಡುಗೆಗಾಗಿ ಹಚ್ಚಿದ್ದ ಬೆಂಕಿಯಿಂದ ಹೊತ್ತಿ ಉರಿದ ಬೋರ್ವೆಲ್ ಲಾರಿ - ವಿಡಿಯೋ - ದಾವಣಗೆರೆ
🎬 Watch Now: Feature Video
Published : Feb 26, 2024, 10:09 AM IST
ದಾವಣಗೆರೆ : ಬೋರ್ವೆಲ್ ಲಾರಿ ಧಗಧಗನೆ ಹೊತ್ತಿ ಉರಿದಿರುವ ಘಟನೆ ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕುಕ್ಕವಾಡ ಗ್ರಾಮದ ಧರ್ಮರಾಯ ಎಂಬ ರೈತನ ಜಮೀನಿನಲ್ಲಿ ಬೋರ್ವೆಲ್ ಕೊರೆಯಲು ಬೋರ್ವೆಲ್ ಲಾರಿ ಆಗಮಿಸಿತ್ತು. ಬೋರೆವೆಲ್ ಕೊರೆಯುವ ವೇಳೆ ಹಸಿದದ್ದರಿಂದ ಲಾರಿ ಪಕ್ಕದಲ್ಲೇ ಕಾರ್ಮಿಕರು ಅಡುಗೆ ಮಾಡಿಕೊಂಡು ಊಟ ಮಾಡಲು ಸಿದ್ಧರಾಗಿದ್ದರು. ದುರದೃಷ್ಟವಶಾತ್ ಅಡುಗೆಗೆ ಹಚ್ಚಿದ್ದ ಬೆಂಕಿ ತಿಳಿಯದೇ ನಿಧಾನವಾಗಿ ಅಲ್ಲಿದ್ದ ಕಬ್ಬಿನ ಒಣ ಹುಲ್ಲಿಗೆ ಹಬ್ಬಿದೆ. ಆ ಬೆಂಕಿ ನೋಡ ನೋಡುತ್ತಿದ್ದಂತೆಯೆ ಬೊರ್ವೆಲ್ ಲಾರಿಗೆ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಲಾರಿಯೇ ಧಗಧಗನೇ ಹತ್ತಿ ಉರಿದಿದೆ. ಇದರಿಂದ ಮತ್ತೊಂದು ಲಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾರ್ಮಿಕರು ತಕ್ಷಣವೇ ಬೆಂಕಿಯನ್ನು ತಡೆದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ವಲ್ಪ ಹೊತ್ತಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದರು. ಈ ಘಟನೆ ದಾವಣಗೆರೆ ಜಿಲ್ಲೆಯ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ.
ಇದನ್ನೂ ಓದಿ :ಪಟಾಕಿ ಕಾರ್ಖಾನೆಗೆ ಬೆಂಕಿ; ಏಳು ಮಂದಿ ಸಾವು, ಅನೇಕರಿಗೆ ಗಾಯ