ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್ ದಂಪತಿ: ವಿಡಿಯೋ - Actor Sudeep - ACTOR SUDEEP
🎬 Watch Now: Feature Video
Published : May 27, 2024, 6:29 PM IST
ಮೈಸೂರು : ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ನಟ ಕಿಚ್ಚ ಸುದೀಪ್ ದಂಪತಿ ಸೋಮವಾರ ಬೆಳಗ್ಗೆ ಆಗಮಿಸಿ, ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ನಟ ಕಿಚ್ಚ ಸುದೀಪ್ ಹೆಂಡತಿ ಪ್ರಿಯಾ ಸೋಮವಾರ ಬೆಳಗ್ಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ದೇವಾಲಯದಿಂದ ಹೊರ ಬರುತ್ತಿದ್ದಂತೆ ನಟ ಕಿಚ್ಚ ಸುದೀಪ್ಗೆ ಅಭಿಮಾನಿಗಳು ಜೈಕಾರ ಹಾಕಿದರು. ಜತೆಗೆ ಸುದೀಪ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ದೇವಾಲಯದ ಮುಂಭಾಗದಲ್ಲಿದ್ದ ಕಾರಿನಿಂದ ನಿಂತು ಅಭಿಮಾನಿಗಳಿಗೆ ಕೈ ಬೀಸಿ ಹೊರಟು ಹೋದರು.
ರಾಯಚೂರಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ : ಬಿಸಿಲೂರು ರಾಯಚೂರಿಗೆ ಏಪ್ರಿಲ್ 27 ರಂದು ನಟ ಕಿಚ್ಚ ಸುದೀಪ್ ಭೇಟಿ ಕೊಟ್ಟಿದ್ದರು. ಹೈದರಾಬಾದ್ ಮೂಲಕ ನಗರಕ್ಕೆ ಆಗಮಿಸಿದ್ದ ಸುದೀಪ್ ದಂಪತಿ ಗಾಂಧಿ ಚೌಕ್ ಬಳಿ ಇರುವ ಶ್ರೀ ಹನುಮಾನ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ನೆರವೇರಿಸಿದ್ದರು. ಹನುಮಾನ್ ದೇವರ ದರ್ಶನ ಪಡೆದು, ಪೂಜೆ ನೆರವೇರಿಸಿದ್ದರು. ಅರ್ಚಕರ ಆಶೀರ್ವಾದ ಪಡೆದುಕೊಂಡು ಬಳಿಕ ಮಂತ್ರಾಲಯಕ್ಕೆ ತೆರಳಿದ್ದರು.
ಇದನ್ನೂ ಓದಿ : ರಾಯಚೂರಿನ ಹನುಮಾನ್ ದೇವಸ್ಥಾನದಲ್ಲಿ ಸುದೀಪ್ ದಂಪತಿಯಿಂದ ವಿಶೇಷ ಪೂಜೆ - Sudeep