ಹುಬ್ಬಳ್ಳಿ: ಕೀ ಮ್ಯಾನ್ ಸಮಯ ಪ್ರಜ್ಞೆಯಿಂದ ತಪ್ಪಿತು ರೈಲು ದುರಂತ - ವಿಡಿಯೋ - train wreck missed

🎬 Watch Now: Feature Video

thumbnail

By ETV Bharat Karnataka Team

Published : Feb 11, 2024, 10:21 PM IST

ಹುಬ್ಬಳ್ಳಿ: ಕೀ ಮ್ಯಾನ್ ಸಮಯ ಪ್ರಜ್ಞೆಯಿಂದ ರೈಲು ದುರಂತವೊಂದು ತಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಸಂಶಿ ರೈಲು ನಿಲ್ದಾಣದ ಸಮೀಪದಲ್ಲಿ ದೇಸೂರು ಬಿಟಿಪಿಎನ್ ರೈಲಿನ ಚಕ್ರ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಆಗ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಕೀ ಮ್ಯಾನ್ ಬಾಲಚಂದ್ರ ರೆಡ್ಡಿ ಇದನ್ನು ಗಮನಿಸಿದ್ದಾರೆ. ಕೂಡಲೇ ಕಾರ್ಬನ್ ಡ್ರೈ ಪೌಡರ್ ಬಳಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಈ ರೈಲು ಸಂಚರಿಸುತ್ತಿತ್ತು. 54 ಬೋಗಿಗಳನ್ನು ಹೊಂದಿದ್ದ ಗೂಡ್ಸ್​ ರೈಲು ಇದಾಗಿದೆ. 

ಈ ಹಿಂದಿನ ಘಟನೆ(ಗಂಗಾವತಿ): ಕೆಲ ತಿಂಗಳ ಹಿಂದೆ ಕಾರಟಗಿ - ಯಶವಂತರಪುರ ರೈಲು ಹಳಿ ತಪ್ಪಿದ ಘಟನೆ ಕಾರಟಗಿ ರೈಲ್ವೆ ನಿಲ್ದಾಣದ ಸಮೀಪ ನಡೆದಿತ್ತು. ಚಾಲಕನ ಸಮಯ ಪ್ರಜ್ಞೆಯಿಂದಾಗಿ ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ತಾಂತ್ರಿಕ ಕಾರಣದಿಂದ ಎಂಜಿನ್ ಮುಂಭಾಗದಲ್ಲಿನ ಚಕ್ರ ಹಳಿ ತಪ್ಪಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ತಕ್ಷಣ ಎಚ್ಚೆತ್ತುಕೊಂಡ ಲೋಕೋ ಪೈಲಟ್ ಕೂಡಲೇ ವೇಗವನ್ನು ಶೂನ್ಯಕ್ಕೆ ಇಳಿಸಿ ಅಪಾಯ ತಪ್ಪಿಸಿದ್ದರು. 

ಇದನ್ನೂ ಓದಿ: ಹಳಿ ತಪ್ಪಿದ ಗೂಡ್ಸ್​ ರೈಲು: ರೈಲು ಸಂಚಾರದಲ್ಲಿ ವ್ಯತ್ಯಯ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.