ಅಪರೂಪದ ಚಿಪ್ಪು ಹಂದಿ ರಕ್ಷಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ: ವಿಡಿಯೋ - Pangolin Rescued - PANGOLIN RESCUED

🎬 Watch Now: Feature Video

thumbnail

By ETV Bharat Karnataka Team

Published : May 24, 2024, 1:20 PM IST

ದೊಡ್ಡಬಳ್ಳಾಪುರ: ಇಲ್ಲಿನ ಅಗ್ನಿಶಾಮಕ ಠಾಣೆ ಸಮೀಪ ಕಾಣಿಸಿಕೊಂಡಿದ್ದ ಅಪರೂಪದ ಚಿಪ್ಪು ಹಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅಂದಾಜು 10ರಿಂದ 12 ವರ್ಷದ ವಯಸ್ಸಿನ ಚಿಪ್ಪು ಹಂದಿ ಇದಾಗಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಲು ಅಪರೂಪ.

ಸಾಮಾನ್ಯವಾಗಿ ಉಷ್ಣವಲಯದ ಆಫ್ರಿಕಾ ದೇಶಗಳಲ್ಲಿ ಚಿಪ್ಪು ಹಂದಿಗಳು ಹೆಚ್ಚು ಕಾಣಸಿಗುತ್ತವೆ. ಇವುಗಳ ಚರ್ಮದ ಮೇಲೆ ಅಗಲ ಚಿಪ್ಪುಗಳನ್ನು ನೋಡಬಹುದು. ಮರದ ಪೊಟರೆಗಳು ಮತ್ತು ಮಣ್ಣಿನಲ್ಲಿ ಜೀವಿಸುವ ಇವುಗಳು ಉದ್ದ ನಾಲಗೆ ಹೊಂದಿದ್ದು, ಇರುವೆ ಮತ್ತು ಗೆದ್ದಲುಗಳೇ ಆಹಾರ. ಒಂದು ಬಾರಿಗೆ 1ರಿಂದ 3 ಮರಿಗಳಿಗೆ ಜನ್ಮ ನೀಡುತ್ತವೆ.

ದೇಹ ಗಟ್ಟಿಯಾಗಿದ್ದು, ಮೊನಚಾಗಿದೆ. ಇವುಗಳ ತಲೆ ಸಣ್ಣದಾಗಿದ್ದು, ಚೂಪಾದ ಮುಖ ಹೊಂದಿದೆ. ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ. ಕಣ್ಣು ಹಾಗೂ ಮೂಗು ಸಣ್ಣದು. ಕೈ, ಕಾಲುಗಳಲ್ಲಿ ಬಲವಾದ ಬಾಗಿದ ಉಗುರುಗಳಿವೆ. ಮುಂದಿನ ಉಗುರುಗಳನ್ನು ಬಿಲ ತೋಡಲು ಹಾಗೂ ಗೆದ್ದಲು ಗೂಡುಗಳನ್ನು ನಾಶಪಡಿಸಲು ಉಪಯೋಗಿಸುತ್ತವೆ. ಬೇರೆ ಪ್ರಾಣಿಗಳಿಂದ ದಾಳಿ ನಡೆದಾಗ ಚೆಂಡಿನ ಆಕಾರ ತಾಳಿ ತಮ್ಮನ್ನು ರಕ್ಷಿಸಿಕೊಳ್ಳುತ್ತವೆ.

ಇದನ್ನೂ ಓದಿ: ಗ್ರಾಮದ ಮಧ್ಯೆ ಬಿಂದಾಸ್ ವಾಕ್ ಮಾಡಿದ ಒಂಟಿ ಸಲಗ: ವಿಡಿಯೋ - elephant moment

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.