ಬೈಕ್ಗೆ ಡಿಕ್ಕಿ ಹೊಡೆದು, ಸವಾರನ ಸಮೇತ 2 ಕಿ.ಮೀ ಎಳೆದೊಯ್ದ ಲಾರಿ ಚಾಲಕ: ವಿಡಿಯೋ ನೋಡಿ - lorry driver dragged bike rider - LORRY DRIVER DRAGGED BIKE RIDER
🎬 Watch Now: Feature Video
Published : Apr 18, 2024, 9:06 AM IST
ಹೈದರಾಬಾದ್ : ನಗರದಲ್ಲಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದುದ್ದಲ್ಲದೇ , ಸವಾರನ ಸಮೇತ 2 ಕಿಲೋಮೀಟರ್ ಎಳೆದೊಯ್ದಿರುವ ಘಟನೆ ನಡೆದಿದೆ. ಲಾರಿ ಚಾಲಕ ತನ್ನ ಮುಂದೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ತಕ್ಷಣ ನಿಲ್ಲಿಸಬೇಕಿದ್ದ ಲಾರಿ ಚಾಲಕ ಮುಂಭಾಗ ಇದ್ದ ಬೈಕ್ ಹಾಗೂ ಸವಾರನನ್ನು ಎಳೆದುಕೊಂಡೇ ಹೋಗಿದೆ. ಅದೃಷ್ಟವಶಾತ್ ಬೈಕ್ ಸವಾರ ಲಾರಿಯ ಫುಟ್‌ರೆಸ್ಟ್ ಮೇಲೆ ಹತ್ತಿ ನಿಂತ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೈಕ್ ಸವಾರ ಲಾರಿ ನಿಲ್ಲಿಸುವಂತೆ ಚಾಲಕನಿಗೆ ಎಷ್ಟೇ ಬಾರಿ ಹೇಳಿ ಕಿರುಚಿದರು ನಿಲ್ಲಿಸದೇ ಎಲ್ಬಿ ನಗರದ ಕಡೆ 2 ಕಿಲೋಮೀಟರ್ ಸಾಗಿದ್ದಾನೆ. ಈ ಮಧ್ಯೆ ಬೈಕ್ ಲಾರಿಯ ಮುಂಭಾಗದಿಂದ ಕಿತ್ತುಕೊಂಡು ಬಿಸಾಡಿ ಹೋಗಿದೆ. ಈ ಘಟನೆಯನ್ನು ಲಾರಿಯ ಹಿಂಭಾಗದಿಂದ ಬರುತ್ತಿದ್ದ ಇತರ ಸವಾರರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕೊನೆಗೆ ಚಾಲಕ ತನ್ನ ಲಾರಿಯನ್ನು ವನಸ್ಥಲಿಪುರಂನಲ್ಲಿ ನಿಲ್ಲಿಸಿ ವನಸ್ಥಲಿಪುರಂ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಬೈಕ್ ಸವಾರನ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :ಗುಜರಾತ್: ಎಕ್ಸ್‌ಪ್ರೆಸ್‌ವೇನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ, ಮಗು ಸೇರಿ 10 ಮಂದಿ ಸಾವು - Car Rams Into Truck