ಪ್ರತ್ಯೇಕ ಪ್ರಕರಣ: ಒಂದೇ ದಿನ ಎರಡು ಚಿರತೆ ಸೆರೆ - leopard captured - LEOPARD CAPTURED
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/02-07-2024/640-480-21849444-thumbnail-16x9-sanjuuu.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jul 2, 2024, 4:12 PM IST
ಮೈಸೂರು : ಒಂದೇ ದಿನ ಬೇರೆ ಬೇರೆ ಕಡೆ ಎರಡು ಚಿರತೆಗಳು ಸೆರೆಯಾಗಿದ್ದು, ಗ್ರಾಮಸ್ಥರಿಗೆ ಇದ್ದ ಆತಂಕವನ್ನು ದೂರ ಮಾಡಿದೆ. ನಂಜನಗೂಡಿನ ಹಂಬಳೆ ಗ್ರಾಮದ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದು, ವಾರದೊಳಗೆ ಎರಡನೇ ಬಾರಿಗೆ ಚಿರತೆ ಸೆರೆಯಾಗಿರುವುದು ಗ್ರಾಮಸ್ಥರಿಗೆ ಅಚ್ಚರಿ ತಂದಿದೆ. ಗ್ರಾಮಸ್ಥರ ಸಹಕಾರದಿಂದ ಸೆರೆ ಹಿಡಿದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ.
ಹುಣಸೂರಿನಲ್ಲಿ ಹಬ್ಬನಕುಪ್ಪೆ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ : ಸಮೀಪದ ಕಳ್ಳ ಬೆಟ್ಟ ಅರಣ್ಯ ಪ್ರದೇಶದಿಂದ ಬರುತ್ತಿದ್ದ ಚಿರತೆಗಳು, ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ಹೋಗುತ್ತಿದ್ದವು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ರೈತ ಲೋಕೇಶ್ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸೆರೆ ಸಿಕ್ಕ ಚಿರತೆಯನ್ನು ಅರಣ್ಯದ ಮಧ್ಯ ಭಾಗದಲ್ಲಿ ಬಿಡುವಂತೆ ಮನವಿ ಮಾಡಿದ್ದು, ಇಲ್ಲವಾದರೆ ಮತ್ತೆ ಚಿರತೆ ಗ್ರಾಮಕ್ಕೆ ಬರುವ ಆತಂಕ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ : ಮೈಸೂರು: ಏಕಾಏಕಿ ಮನೆಯೊಳಗೆ ನುಗ್ಗಿ ಲಾಕ್ ಆದ ಚಿರತೆ