ಮಂತ್ರಾಲಯದಲ್ಲಿ 36 ಅಡಿ ಏಕಶಿಲಾ ಅಭಯರಾಮನ ಮೂರ್ತಿ ಪ್ರತಿಷ್ಠಾಪನೆ - ಪುಣ್ಯಕ್ಷೇತ್ರ ಮಂತ್ರಾಲಯ
🎬 Watch Now: Feature Video
Published : Jan 21, 2024, 4:16 PM IST
ರಾಯಚೂರು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ತುಂಗಭದ್ರಾ ನದಿ ತೀರದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನೆಲೆಸಿದ್ದ ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಏಕಶಿಲಾ ಅಭಯರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಪುಣ್ಯಕ್ಷೇತ್ರದ ಮಂತ್ರಾಲಯದ ಅಭಯ ಆಂಜನೇಯ ಸ್ವಾಮಿ ಮಂದಿರದ ಎದುರಿಗಿರುವ ಆರು ಎಕರೆ ಪ್ರದೇಶದಲ್ಲಿ ಅಭಯ ಶ್ರೀರಾಮನ ಮಂದಿರ ನಿರ್ಮಿಸಲಾಗುತ್ತಿದೆ. ಆ ಮಂದಿರದ ಮುಂಭಾಗದಲ್ಲಿ ಶನಿವಾರ ಮಠದ ಪೀಠಾಧಿಪತಿ ಡಾ ಸುಬುಧೇಂದ್ರ ತೀರ್ಥರು ನವ ಧಾನ್ಯಗಳನ್ನ ಇರಿಸಿ ಪೂಜೆ ಮಾಡಿದ ಬಳಿಕ 36 ಅಡಿ ಎತ್ತರದ ಅಭಯ ಶ್ರೀರಾಮನ ಏಕಶಿಲಾ ಮೂರ್ತಿಯನ್ನು ಕಮಲ ಪೀಠದ ಮೇಲೆ ಪ್ರತಿಷ್ಠಾಪಿಸಲಾಯಿತು.
9 ಅಡಿ ಕಮಲಪೀಠದ ಮೇಲೆ 36 ಅಡಿ ಎತ್ತರದ ಗ್ರೇ ಗ್ರಾನೈಟ್‌ನಲ್ಲಿ ಏಕಶಿಲೆ ಅಭಯರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಜನವರಿ 22ರಂದು ಜರುಗಲಿದ್ದು, ಆ ದಿನದಂದು ಮಂತ್ರಾಲಯದದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಅಭಯರಾಮ ಮೂರ್ತಿ ಅನಾವರಣ ನಡೆಯಲಿದೆ ಎಂದು ಮಂತ್ರಾಲಯದ ಅಭಯರಾಮ ಸೇವಾ ಸಮಿತಿ ತಿಳಿಸಿದೆ.
ಅಂದು ಏಕಶಿಲೆಯ ಅಭಯರಾಮ ಮೂರ್ತಿ ಅನಾವರಣ ಕಾರ್ಯಕ್ರಮ ನಿಮಿತ್ತ ಧಾರ್ಮಿಕ ಕೈಂಕರ್ಯಗಳು ಹಾಗೂ ವಿಶೇಷ ಪೂಜೆಗಳು ಪೀಠಾಧಿಪತಿ ಪೀಠಾಧಿಪತಿ ಡಾ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ನೆರವೇರಲಿವೆ. ಅಭಯರಾಮ ಸೇವಾ ಸಮಿತಿಯಡಿ ರಾಯರ ಭಕ್ತರು ಅಭಯರಾಮನ ಮಂದಿರ ನಿರ್ಮಿಸಲು ನಿರ್ಧರಿಸಿದ್ದಾರೆ.
ಇದನ್ನೂಓದಿ: ಅಯೋಧ್ಯೆಗೂ ಬಾಗಲಕೋಟೆಗೂ ಇದೆ ನಂಟು: ಸೀತಿಮನಿ ಗ್ರಾಮದಲ್ಲಿದೆ ದೇಶದ ಏಕೈಕ ಸೀತಾಮಾತೆಯ ದೇವಸ್ಥಾನ