LIVE​: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ - Aradhana Mahotsava

🎬 Watch Now: Feature Video

thumbnail

By ETV Bharat Karnataka Team

Published : Aug 21, 2024, 9:24 AM IST

Updated : Aug 21, 2024, 12:36 PM IST

ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯದಲ್ಲಿಂದು ಗುರು ರಾಯರ ಮಧ್ಯಾರಾಧನೆ ಸಂಭ್ರಮ ಜೋರಾಗಿದೆ. ಗುರು ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 353 ವರ್ಷ ತುಂಬಿದೆ. ಬೆಳಗ್ಗೆಯಿಂದಲೇ ಮಠದಲ್ಲಿ ಪೂಜಾ ಕೈಂಕರ್ಯಗಳು ಭರದಿಂದ ಜರುಗುತ್ತಿದೆ. ಹಾಗೇ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ನೇತೃತ್ವದಲ್ಲಿ ಪೂಜೆ, ವೃಂದಾವನಕ್ಕೆ ಮಠದ ಶ್ರೀಗಳಿಂದ ವಿಶೇಷ ಮಹಾಪಂಚಾಮೃತ ಅಭಿಷೇಕ ನಡೆಯಲಿದೆ. ಆರಾಧನಾ ಮಹೋತ್ಸವಕ್ಕೆ ಸ್ವರ್ಣ ಕವಚ ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಮಠದ ಪ್ರಾಕಾರದಲ್ಲಿ ಗಜ, ರಜತ, ಚಿನ್ನದ ರಥೋತ್ಸವ ನಡೆಯಲಿದೆ.ಇನ್ನು ನಿನ್ನೆ ಮಠದ ಪ್ರಾಕಾರದಲ್ಲಿ ರಜತ ಸಿಂಹ ವಾಹನೋತ್ಸವ ನಡೆದಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನಿನ್ನೆ ಸಂಜೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾದ ಪೂರ್ವ ದಿನವನ್ನು ರಾಯರ ಪೂರ್ವಾಧನೆಯನ್ನಾಗಿ ಮಾಡಲಾಗುತ್ತಿದೆ. ಈ ಹಿನ್ನೆಲೆ ದೇಶ, ವಿದೇಶ, ಅಂತಾರಾಜ್ಯ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌ - Raghavendra Swami
Last Updated : Aug 21, 2024, 12:36 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.