YouTube Premium Lite subscription: ಯೂಟ್ಯೂಬ್ ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್. ಈಗ ಪೂರ್ಣ ಪ್ರಮಾಣದ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಅನ್ನು ಅರ್ಧದಷ್ಟು ಬೆಲೆಗೆ ಇಳಿಸಿ ಕಡಿಮೆ ಜಾಹೀರಾತುಗಳೊಂದಿಗೆ ಹೊಸ ಪ್ರೀಮಿಯಂ ಲೈಟ್ ಚಂದಾದಾರಿಕೆ ಪರೀಕ್ಷಿಸುತ್ತಿದೆ.
ಜೊನಾಹ್ಮಂಜಾನೊ ಹೆಸರಿನ ಬಳಕೆದಾರರ ಥ್ರೆಡ್ ಪೋಸ್ಟ್ ಪ್ರಕಾರ, ಯೂಟ್ಯೂಬ್ ಪ್ರೀಮಿಯಂ ಲೈಟ್ ತಿಂಗಳಿಗೆ $8.99 ವೆಚ್ಚವಾಗುತ್ತದೆ. ಇದು $16.99 ಬೆಲೆಯ ಸಾಮಾನ್ಯ ಪ್ರೀಮಿಯಂ ಯೋಜನೆಗಿಂತ ಸುಮಾರು 50 ಪ್ರತಿಶತ ಅಗ್ಗವಾಗಿದೆ. ಯೂಟ್ಯೂಬ್ ಪ್ರೀಮಿಯಂ ಲೈಟ್ ವಾರ್ಷಿಕ ಸಬ್ಸ್ಕ್ರಿಪ್ಷನ್ ಪ್ಲಾನ್ ಬಗ್ಗೆ ಸದ್ಯ ಯಾವುದೇ ದೃಢೀಕರಣವಿಲ್ಲ ಎಂದು ಹೇಳಿದ್ದಾರೆ.
ಚಂದಾದಾರಿಕೆ ಭಾರತದಲ್ಲಿ ಅಗ್ಗವಾಗುತ್ತಾ?: ಸದ್ಯಕ್ಕೆ ಯೂಟ್ಯೂಬ್ ಪ್ರೀಮಿಯಂ ಲೈಟ್ ಚಂದಾದಾರಿಕೆ ಭಾರತದಲ್ಲಿ ಲಭ್ಯವಾಗುತ್ತದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ನಿಯಮಿತ ಪ್ರೀಮಿಯಂ ಯೋಜನೆಯು ತಿಂಗಳಿಗೆ 149 ರೂ.ಗಳಾಗಿದೆ. ಒಂದು ವೇಳೆ ಯೂಟ್ಯೂಬ್ ಪ್ರೀಮಿಯಂ ಲೈಟ್ ಅನ್ನು ದೇಶದಲ್ಲಿ ಪ್ರಾರಂಭಿಸಿದರೆ ಸುಮಾರು 75 ರೂ.ಗೆ ಲಭ್ಯವಾಗಬಹುದಾಗಿದೆ.
ಚಂದಾದಾರಿಕೆ ಪಡೆದರೆ ಕಡಿಮೆ ಜಾಹೀರಾತು: YouTube ಪ್ರೀಮಿಯಂ ಚಂದಾದಾರಿಕೆಯಲ್ಲಿನ ಇತ್ತೀಚಿನ ಬೆಲೆ ಏರಿಕೆ ಪರಿಗಣಿಸಿ YouTube ಪ್ರೀಮಿಯಂ ಲೈಟ್ ಚಂದಾದಾರಿಕೆ ಕಡಿಮೆ ಜಾಹೀರಾತುಗಳೊಂದಿಗೆ ಹೊರ ತರುತ್ತಿದೆ. The Verge ನ ವರದಿಯ ಪ್ರಕಾರ, YouTube ಪ್ರಸ್ತುತ ಜರ್ಮನಿ, ಥಾಯ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಆಯ್ದ ಮಾರುಕಟ್ಟೆಗಳಲ್ಲಿ ಈ ಚಂದಾದಾರಿಕೆ ಪರೀಕ್ಷಿಸುತ್ತಿದೆ ಎಂದು ತಿಳಿದು ಬಂದಿದೆ.
YouTube ಪ್ರೀಮಿಯಂ ಲೈಟ್ ಹೆಚ್ಚಿನ ವಿಡಿಯೋಗಳಲ್ಲಿ ಜಾಹೀರಾತು - ಮುಕ್ತ ಬಳಕೆದಾರ ಅನುಭವವನ್ನು ನೀಡುತ್ತದೆ. ಆದರೆ, ಬಳಕೆದಾರರು ಮ್ಯೂಸಿಕ್ ಕಂಟೆಂಟ್ ಮತ್ತು ಶಾರ್ಟ್ ವಿಡಿಯೋಗಳಲ್ಲಿ ಕೆಲವು ಜಾಹೀರಾತುಗಳನ್ನು ನೋಡುತ್ತಾರೆ. ಆದರೂ YouTube Premium Lite ಚಂದಾದಾರರು YouTube Music ನಲ್ಲಿ ಜಾಹೀರಾತು - ಮುಕ್ತ ಸ್ಟ್ರೀಮಿಂಗ್, ಆಫ್‌ಲೈನ್ ಡೌನ್‌ಲೋಡ್‌ಗಳು ಮತ್ತು ಬ್ಯಾಕ್ಗ್ರೌಂಡ್ ಪ್ಲೇಯಂತಹ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ.
ಯುರೋಪಿಯನ್ ಮಾರುಕಟ್ಟೆಗಾಗಿ 2021 ರಲ್ಲಿ YouTube ಪ್ರೀಮಿಯಂ ಲೈಟ್ ಚಂದಾದಾರಿಕೆ ಪರೀಕ್ಷಿಸಲು ಪ್ರಾರಂಭಿಸಿತು, ಆದರೆ, ಅಧಿಕೃತವಾಗಿ ಹೊರ ತರುವ ಮೊದಲು ಈ ಸೇವೆಯನ್ನು ನಿಲ್ಲಿಸಲಾಯಿತು.
ಓದಿ: ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು; 47.1 ಮಿಲಿಯನ್ ಯೂನಿಟ್ ರವಾನೆ!