ETV Bharat / technology

ಮಸ್ಕ್​ ಒಡೆತನದ Xನಲ್ಲಿ ಡಿಸ್​ಲೈಕ್​​ ಬಟನ್; ಒಡೆದ ಹೃದಯದ ಇಮೋಜಿಗೆ ಚಿಂತನೆ - X Developing Dislike Button

author img

By ETV Bharat Karnataka Team

Published : Jul 12, 2024, 1:43 PM IST

ಸದ್ಯ ಅಮೆರಿಕದ ಸಾಮಾಜಿಕ ಜಾಲತಾಣ ರೆ​ಡಿಟ್​ನಲ್ಲಿ ಡೌನ್​ವೋಟ್​ ಐಕಾನ್​ ಇದೆ. ಅದೇ ರೀತಿಯಲ್ಲಿ ಎಕ್ಸ್​ಗೆ ಡಿಸ್​ಲೈಕ್​ ಅಂದರೆ, ಪೋಸ್ಟ್​ ಇಷ್ಟವಾಗಿಲ್ಲ ಎಂಬ ಬಟನ್​ ತರಲು ಎಕ್ಸ್​ ಮುಂದಾಗಿದೆ.

X is developing a downvoting feature  for improve the ranking of replies
ಸಾಂದರ್ಭಿಕ ಚಿತ್ರ (IANS)

ಹೈದರಾಬಾದ್​: ಎಕ್ಸ್​ ಮೈಕ್ರೋಬ್ಲಾಗಿಂಗ್​ ಸೈಟ್​ ಅನ್ನು ಮತ್ತಷ್ಟು ಬಳಕೆದಾರಸ್ನೇಹಿ ಹಾಗೂ ಅಭಿವ್ಯಕ್ತಿ ತಾಣವಾಗಿ ರೂಪಿಸಲು ಮುಂದಾಗಿರುವ ಎಲೋನ್​ ಮಸ್ಕ್​ ಇದೀಗ ಡಿಸ್​ಲೈಕ್​ ಬಟನ್​ ಪರಿಚಯಿಸಲು ಮುಂದಾಗಿದ್ದಾರೆ.

ಸದ್ಯ ಎಕ್ಸ್​ನಲ್ಲಿ ಕೇವಲ ಲೈಕ್​ ಬಟನ್​ ಇದ್ದು, ಅದನ್ನು ಒತ್ತುವ ಮೂಲಕ ಮಾತ್ರ ಪೋಸ್ಟ್​ ಕುರಿತು ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಂದು ಪೋಸ್ಟ್​​ಗೆ ಇಷ್ಟ ಮತ್ತು ಕಷ್ಟದ ಎರಡು ಬಳಕೆದಾರರು ಇರುತ್ತಾರೆ. ಇದನ್ನು ಮನಗಂಡು ಈ ರೀತಿಯ ಪ್ರಯೋಗಕ್ಕೆ ಇದೀಗ ಬಿಲಿಯನೇರ್​ ಮುಂದಾಗಿದ್ದಾರೆ.

ಈ ಸಂಬಂಧ ಸಂಸ್ಥೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ ಇತ್ತೀಚಿಗೆ ಡಿಸ್​ಲೈಕ್​ ರೀತಿಯಲ್ಲಿಯೇ ಡೌನ್​ವೋಟಿಂಗ್​ ಫೀಚರ್​ ಬಳಕೆ ಮಾಡಲು ಪ್ರಸ್ತಾಪ ಹೊಂದಿದೆ ಎನ್ನಲಾಗಿದೆ.

ಸದ್ಯ ಅಮೆರಿಕದ ಸಾಮಾಜಿಕ ಜಾಲತಾಣ ರೆಡ್​​ಡಿಟ್​ನಲ್ಲಿ ಡೌನ್​ವೋಟ್​ ಐಕಾನ್​ ಇದೆ. ಅದೇ ರೀತಿಯಲ್ಲಿ ಇದೀಗ ಎಕ್ಸ್​ಗೆ ಡಿಸ್​ಲೈಕ್​ ಅಂದರೆ, ಪೋಸ್ಟ್​ ಇಷ್ಟವಾಗಿಲ್ಲ ಎಂಬ ಬಟನ್​ ತರಲು​ ಮುಂದಾಗಿದೆ ಎಂದು ಟೆಕ್​ಕ್ರಂಚ್​ ವರದಿ ಮಾಡಿದೆ.

ಎಕ್ಸ್​ನ ಐಒಎಸ್​ ಆ್ಯಪ್​ನ ಪತ್ತೆಯಾದ ಕೋಡ್​ ಪರಿಶೀಲನೆ ಪ್ರಕಾರ, ಇದೀಗ ಎಕ್ಸ್​ನಲ್ಲಿ ಲೈಕ್​ಗೆ ಹೃದಯದ ಆಕಾರದ ಬಟನ್​ ನೀಡಲಾಗಿದೆ. ಮುಂದಿನ ದಿನದಲ್ಲಿ ಡಿಸ್​ಲೈಕ್​ ಒಡೆದ ಹೃದಯಾಕಾರದ ಬಟನ್​ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ತಿಂಗಳ ಮುಂದೆ ಎಕ್ಸ್​ನ ರಿವರ್ಸ್​​ ಇಂಜಿನಿಯರ್​ ಅರೋನ್​ ಪೆರ್ರಿಸ್​​ ತಮ್ಮ ಎಕ್ಸ್​ ಜಾಲತಾಣದಲ್ಲಿ ಈ ಡೌನ್​ವೋಟ್​​ ಅಭಿವೃದ್ಧಿ ಕುರಿತು ಸುಳಿವು ನೀಡಿದ್ದರು. ಇದೀಗ ಒಡೆದ ಹೃದಯಾಕಾರದ ಇಮೋಜಿ​​ ಕಂಡುಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.

ಆರಂಭದಲ್ಲಿ ಸಂಸ್ಥೆ, ಅಪ್​ವೋಟಿಂಗ್​ ಮತ್ತು ಡೌನ್​ವೋಟಿಂಗ್​ ಎರಡು ಬಟನ್​ ಅನ್ನು ಎಲ್ಲಾ ಪೋಸ್ಟ್‌ಗಳಲ್ಲಿ ಬಳಕೆ ಮಾಡಿದೆ. ಈ ಕುರಿತು ಅಂತಿಮ ನಿರ್ಣಯವನ್ನು ಸಂಸ್ಥೆ ನಡೆಸಲಿದೆ.

ಇತ್ತೀಚೆಗಷ್ಟೇ ಎಕ್ಸ್​ನಲ್ಲಿನ ಎಲ್ಲಾ ಪೋಸ್ಟ್​​ಗಳಲ್ಲಿ ಲೈಕ್​ ಬಟನ್​ ಅನ್ನು ಡಿಫಾಲ್ಟ್​​ ಆಗಿ ಹೈಡ್​ ಹೊಸ ಫೀಚರ್​ ಪರಿಚಯಿಸಲಾಗಿದೆ. ಬಳಕೆದಾರರ ಖಾಸಗಿತನವನ್ನು ರಕ್ಷಿಸುವ ಉದ್ದೇಶದಿಂದ 'ಲೈಕ್'​ ಮರೆಮಾಚಲಾಗಿದೆ. ಇದೀಗ ಬಳಕೆದಾರರು ಮಾತ್ರ ತಾವು ಲೈಕ್​ ಮಾಡಿದ ಪೋಸ್ಟ್​ ನೋಡಬಹುದು. ಆದರೆ, ಇತರರು ನೋಡಲು ಸಾಧ್ಯವಿಲ್ಲ. ಬಳಕೆದಾರರ ಪ್ರೊಫೈಲ್​ ಪೇಜ್​ನಲ್ಲಿ ಮಾತ್ರ ಲೈಕ್​ ಟ್ಯಾಬ್ ಕಾಣಿಸುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ:ನನ್ನ ಕಂಪನಿಗಳಿಂದ ಆ್ಯಪಲ್​ನ ಎಲ್ಲ ಸಾಧನಗಳನ್ನು ನಿಷೇಧಿಸಲಾಗುವುದು": ಎಲೋನ್​ ಮಸ್ಕ್​ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.