ಪ್ಯಾರಿಸ್ (ಫ್ರಾನ್ಸ್): ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಶನಿವಾರ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ನಲ್ಲಿ ಮಹಿಳಾ ಆರ್ಚರಿ ಸಿಂಗಲ್ಸ್ ವಿಭಾಗದ 1/8 ಎಲಿಮಿನೇಷನ್ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದರು. ಮತ್ತೊಂದೆಡೆ, ಭಾರತ ದೇಶದವರೇ ಆದ ಭಜನ್ ಕೌರ್ ಶೂಟೌಟ್‌ನಲ್ಲಿ ಇಂಡೋನೇಷ್ಯಾದ ಎದುರಾಳಿ ವಿರುದ್ಧ ಸೋತು ಹೊರಬಿದ್ದರು.
ದೀಪಿಕಾ ಅವರು ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರನ್ನು 6-4 ಅಂತರದಿಂದ ಸೋಲಿಸಿದರೆ, ಇಂಡೋನೇಷ್ಯಾದ ಡಿಯಾನಂದಾ ಚೊಯ್ರುನಿಸಾ ಅವರು ಭಜನ್ ಕೌರ್ ವಿರುದ್ಧ 5-6 ಅಂತರದಿಂದ ಗೆಲುವು ಸಾಧಿಸಿದರು. 30ರ ಹರೆಯದ ದೀಪಿಕಾ ಮೊದಲ ಸೆಟ್ ಅನ್ನು 27-24 ಅಂಕಗಳಿಂದ ಗೆದ್ದುಕೊಂಡರು. ಬಳಿಕ ಎರಡನೇ ಸೆಟ್ನಲ್ಲಿ ದೀಪಿಕಾ ಮತ್ತು ಮಿಚೆಲ್ ಕ್ರೊಪ್ಪೆನ್ ಇಬ್ಬರೂ 27-27 ಸ್ಕೋರ್ ಗಳಿಸಿ ಡ್ರಾ ಸಾಧಿಸಿದರು. ನಂತರ ಮೂರನೇ ಸೆಟ್ನಲ್ಲಿ ದೀಪಿಕಾ 26-25 ಮತ್ತು ನಾಲ್ಕನೇ ಸೆಟ್ನಲ್ಲಿ 29-27 ಅಂಗಳ ಕಲೆ ಹಾಕಿ ಮುನ್ನಡೆ ಕಾಯ್ದುಕೊಂಡರು.
Women's Individual Recurve, 1/8 Elimination Round
— SAI Media (@Media_SAI) August 3, 2024
In a display of dominant archery, Deepika Kumari beats Germany’s🇩🇪 Michelle Kroppen 6-4.
She will face the winner between Romania's 🇷🇴 Madalina Amaistroaie and South Korea's 🇰🇷 Nam Su-Hyeon in the quarterfinal at 4.30 pm IST.… pic.twitter.com/15MP6b7kwD
ಬಳಿಕ 5ನೇ ಮತ್ತು ಅಂತಿಮ ಸುತ್ತಿನಲ್ಲೂ 27-27 ಗಳಿಸುವ ಮೂಲಕ ಈ ಸುತ್ತು ಡ್ರಾ ಆಯಿತು. ಇದರೊಂದಿಗೆ ಮುನ್ನಡೆ ಸಾಧಿಸಿದ್ದ ದೀಪಿಕಾ ಅವರು ಕ್ರೋಪೆನ್ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದರು.
ಮತ್ತೊಂದೆಡೆ, ಭಜನ್ ಕೌರ್ ಶೂಟೌಟ್‌ನಲ್ಲಿ ಇಂಡೋನೇಷ್ಯಾದ ಪ್ರತಿಸ್ಪರ್ಧಿ ವಿರುದ್ಧ ಸೋಲನ್ನು ಕಂಡಿದ್ದಾರೆ. ಭಜನ್ ಕೌರ್ ಇಂಡೋನೇಷ್ಯಾದ ದಿಯಾನಂದ ಚೊಯಿರುನಿಸಾ ವಿರುದ್ಧ 5-6 ಅಂತರದಿಂದ ಸೋಲನುಭವಿಸಿದರು. ಈ ಪಂದ್ಯದಲ್ಲಿ ಭಜನ್ ಕೌರ್ ಉತ್ತಮ ಆರಂಭವನ್ನು ಪಡೆದಿದ್ದರು. ಪ್ರತಿಸ್ಪರ್ಧಿಗೆ ಕಠಿಣ ಸವಾಲೊಡ್ಡಿದ ಪರಿಣಾಮ ಐದು ಸೆಟ್‌ಗಳ ನಂತರ ಸ್ಕೋರ್ 5-5 ರಲ್ಲಿ ಸಮಗೊಂಡಿತು. ನಂತರ ಪಂದ್ಯವು ಶೂಟ್-ಆಫ್ ತಲುಪಿತು. ಇಲ್ಲಿ ಇಂಡೋನೇಷ್ಯಾದ ನಿಸಾ 9 ಅಂಕ ಗಳಿಸಿದರೇ ಭಜನ್ 8 ಅಂಕಗಳನ್ನು ಮಾತ್ರ ಕಲೆ ಹಾಕಿ ಸ್ಪರ್ಧೆಯಿಂದ ಹೊರಬಿದ್ದರು.