ETV Bharat / state

ಕಾವೇರಿ 2.0 ತಂತ್ರಾಂಶ ಸಂಪೂರ್ಣ ಪುನಃಸ್ಥಾಪನೆ, ಎಂದಿನಂತೆ ಕಾರ್ಯನಿರ್ವಹಣೆ: ಕೃಷ್ಣಬೈರೇಗೌಡ - KAVERI SOFTWARE

ತಂತ್ರಾಂಶದ ಮೇಲೆ ಅನಿರೀಕ್ಷಿತ ದಾಳಿಗಳನ್ನು ಪರಿಹರಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯ ತಗ್ಗಿಸಲು ವರ್ಧಿತ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

Minister Krishna Byre Gowda
ಸಚಿವ ಕೃಷ್ಣಬೈರೇಗೌಡ (ETV Bharat)
author img

By ETV Bharat Karnataka Team

Published : Feb 5, 2025, 9:17 PM IST

ಬೆಂಗಳೂರು: "ಕಳೆದ ಒಂದು ವಾರದಿಂದ DDoS ದಾಳಿಯಿಂದ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶವನ್ನು ಈಗ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ. ಮತ್ತು ಈ ತಂತ್ರಾಂಶ ಇದೀಗ ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

"ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತು EC/CC ಸೇವೆಗಳ ಮೇಲೆ ಪರಿಣಾಮ ಬೀರಿತ್ತು. ಇದು ಆದಾಯ ಸಂಗ್ರಹವನ್ನು ಮತ್ತಷ್ಟು ಕಡಿಮೆ ಮಾಡಿತ್ತು. ಇಂತಹ ಅನಿರೀಕ್ಷಿತ ದಾಳಿಗಳನ್ನು ಪರಿಹರಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ತಗ್ಗಿಸಲು ವರ್ಧಿತ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಮತ್ತು ಅರ್ಜಿಯನ್ನು ರಕ್ಷಿಸಲು ಇ-ಆಡಳಿತ ಇಲಾಖೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ" ಎಂದು ಹೇಳಿದರು.

"ತಾಂತ್ರಿಕ ದಾಳಿಯ ಕಾರಣಕ್ಕೆ ಫೆಬ್ರವರಿ 1 ರಂದು ತಂತ್ರಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ಪರಿಣಾಮ ನೋಂದಣಿಗಳ ಸಂಖ್ಯೆ 556ಕ್ಕೆ ಇಳಿದಿತ್ತು. ಸಹಿ ಮಾಡಿದ ಇಸಿ (ಋಣಭಾರ ಪ್ರಮಾಣ ಪತ್ರ) ಸಂಖ್ಯೆ 1649 ಮತ್ತು ನೀಡಲಾದ ಸಿಸಿ ಸಂಖ್ಯೆ 405 ಆಗಿದ್ದು, 15,18,72,565.45 ರೂ. ಆದಾಯ ಸಂಗ್ರಹವಾಗಿದೆ. ನೋಂದಣಿ ಚಟುವಟಿಕೆಗಳು ಸಾಮಾನ್ಯ ಮಟ್ಟಕ್ಕೆ ಮರಳಿದೆ" ಎಂದು ತಿಳಿಸಿದರು.

"ಫೆ.3 ರಂದು ಮಧ್ಯಂತರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಹೀಗಾಗಿ ನೋಂದಣಿಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಸುಧಾರಿಸಿತು. ಪರಿಣಾಮ 5,243 ನೋಂದಣಿಗಳಾಗಿದ್ದರೆ, 3,525 ಇಸಿಗಳನ್ನು ಸಹಿ ಮಾಡಿದ್ದು, 652 ಸಿಸಿಗಳನ್ನು ನೀಡಲಾಗಿತ್ತು. ರೂ. 52,24,42,289.78 ಆದಾಯ ಸಂಗ್ರಹವಾಗಿತ್ತು. ಫೆಬ್ರವರಿ 4 ರಂದು, ಅರ್ಜಿಗಳ ಸಂಖ್ಯೆ ಮತ್ತೊಮ್ಮೆ ಕಡಿಮೆಯಾಗಲಾರಂಭಿಸಿತ್ತು. ವಿವರವಾದ ವಿಶ್ಲೇಷಣೆಯ ನಂತರ ಅರ್ಜಿಗಳನ್ನು ಪುನಃಸ್ಥಾಪಿಸಲು ಅಗತ್ಯ ಕ್ರಮಗಳನ್ನು ಜಾರಿಗೆ ತರಲಾಯಿತು. ಪರಿಣಾಮ ತಂತ್ರಾಂಶದ ಕಾರ್ಯಕ್ಷಮತೆ ಸುಧಾರಿಸಿದೆ. 1,657 ನೋಂದಣಿಗಳು ದಾಖಲಾಗಿದ್ದು, ಇಸಿ 7,327 ಮತ್ತು ನೀಡಲಾದ ಸಿಸಿಗಳು 977 ಆಗಿದೆ. 17,13,86,591.75 ರೂ. ಆದಾಯ ಸಂಗ್ರಹವಾಗಿದೆ" ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದರು

ಪ್ರಸ್ತುತ ಅಂಕಿಅಂಶಗಳು (ಫೆಬ್ರವರಿ 5, 2025 ರಂದು ಸಂಜೆ 4:00 ಗಂಟೆಗೆ):

  • ಒಟ್ಟು ನೋಂದಣಿಗಳು: 7,225
  • EC : 3903
  • CC : 753
  • ಒಟ್ಟು ಆದಾಯ ಸಂಗ್ರಹ: 62,59,69,340 ರೂ.

ಡಿಸೆಂಬರ್ 2024 ರ ತಿಂಗಳಲ್ಲಿ ಸರಾಸರಿ ಅಂಕಿಅಂಶಗಳ ಪ್ರಕಾರ 7,721 ನೋಂದಣಿಗಳು ದಾಖಲಾಗಿತ್ತು. 62,93,54,917 ರೂ. ಆದಾಯ ಸಂಗ್ರಹವಾಗಿತ್ತು.

ಇದನ್ನೂ ಓದಿ: ಅರಣ್ಯ ಅಪರಾಧಗಳ ನಿರ್ವಹಣೆಗಾಗಿ ಗರುಡಾಕ್ಷಿ ಆನ್​ಲೈನ್ ಎಫ್ಐಆರ್ ತಂತ್ರಾಂಶ ಅಭಿವೃದ್ಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.