ಬೆಂಗಳೂರು: ಫೆ.10ರಿಂದ 14ರವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ರಾಜಧಾನಿ ಬೆಂಗಳೂರು ಸಜ್ಜುಗೊಂಡಿದೆ. ಪ್ರತಿಷ್ಠಿತ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ (SKAT) ಸಹ ಈ ಬಾರಿಯ ಏರೋ ಇಂಡಿಯಾ ಶೋನಲ್ಲಿ ಪ್ರೇಕ್ಷಕರನ್ನು ವಿಸ್ಮಯಗೊಳಿಸಲು ಸಿದ್ಧವಾಗಿದೆ.
ಆರಂಭದಿಂದಲೂ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ತನ್ನ ನಿಖರತೆ, ಕೌಶಲ್ಯ ಮತ್ತು ತಂಡದ ಕೆಲಸಕ್ಕೆ ಹೆಸರುವಾಸಿಯಾಗಿದೆ. ಕೆಂಪು ಮತ್ತು ಬಿಳಿ ಹಾಕ್ MK-132 ಜೆಟ್‌ಗಳನ್ನು ಹಾರಿಸುವ ಸೂರ್ಯ ಕಿರಣ್ ಟೀಂ, ಆಕರ್ಷಕವಾದ ಲೂಪ್, ಬ್ಯಾರೆಲ್ ರೋಲ್, ಗುರುತ್ವಾಕರ್ಷಣೆಯನ್ನು ಧಿಕ್ಕರಿಸಿದ ತಲೆಕೆಳಗಾದ ಹಾರಾಟದ ಮೂಲಕ ಪೈಲೆಟ್‌ಗಳ ಅಪ್ರತಿಮ ಪರಿಣತಿ ಮತ್ತು ಸಮನ್ವಯಕ್ಕೆ ಸಾಕ್ಷಿಯಾಗಿದೆ.
The first-ever #AeroIndia took off in 1996! ✈️🔥 With 12 countries, 100 foreign & 50 Indian companies, and 25,000-30,000 visitors daily, it was a grand debut. 🇮🇳 The highlight?
— Defence PRO Bengaluru (@Prodef_blr) February 5, 2025
" the spectacular first performance of the suryakiran aerobatic team"! #AeroIndiaCountdown… pic.twitter.com/uHt3BP0z61
ಹಾಕ್ ಎಂಕೆ 132 ವಿಮಾನದೊಂದಿಗೆ ಕಲರ್ಡ್ ಸ್ಮೋಕ್ ಪಾಡ್‌ಗಳನ್ನು ಇತ್ತೀಚೆಗೆ ಸಂಯೋಜಿಸಲಾಗಿದ್ದು, ಇದು ಇಂಡಿಯನ್ ಏರ್ ಫೋರ್ಸ್ ನೆಲೆಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಗಮನಾರ್ಹ ಮಾರ್ಪಾಡಾಗಿದೆ. ಮತ್ತು ವೈಮಾನಿಕ ಪ್ರದರ್ಶನಗಳ ಸಮಯದಲ್ಲಿ ಆಕಾಶದಾದ್ಯಂತ ರಾಷ್ಟ್ರಧ್ವಜದ ಮೂರು ಬಣ್ಣಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಿದೆ.
1996ರಲ್ಲಿ ಸ್ಥಾಪನೆಯಾದ ಸೂರ್ಯ ಕಿರಣ್ ಏರೋಬ್ಯಾಟಿಕ್, ವಿಶ್ವದ ಕೆಲವೇ ಕೆಲವು ಗಣ್ಯ ಹಾಗೂ ಏಷ್ಯಾದಲ್ಲಿನ 9 ಏರೋಬ್ಯಾಟಿಕ್ ತಂಡಗಳ ಪೈಕಿ ಒಂದು ಎನಿಸಿದೆ. ಹಾಗೂ ಭಾರತದಾದ್ಯಂತ 700ಕ್ಕೂ ಅಧಿಕ ಮತ್ತು ಚೀನಾ, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್, ಸಿಂಗಪುರ್, ಯುಎಇಗಳಲ್ಲಿ ಅಂತರರಾಷ್ಟ್ರೀಯ ವಾಯು ಪ್ರದರ್ಶನಗಳಲ್ಲಿ IAFನ ವೃತ್ತಿಪರತೆಯನ್ನು ಪ್ರತಿನಿಧಿಸಿದೆ.
ಸೂರ್ಯ ಕಿರಣ್ ಏರೋಬ್ಯಾಟಿಕ್ ಟೀಂ ಕುರಿತು: ಸೂರ್ಯ ಕಿರಣ್ ತಂಡವು ಭಾರತದಲ್ಲಿ ನಿರ್ಮಾಣಗೊಂಡ 9 ಹಾಕ್ MK 132 ವಿಮಾನಗಳ ಪರವಾನಗಿ ಪಡೆದಿದ್ದು, ಅವುಗಳು ಒಂದಕ್ಕೊಂದು 5 ಮೀಟರ್‌ಗಿಂತ ಕಡಿಮೆ ಅಂತರದಲ್ಲಿ ಹಾರುವ ಸಾಮರ್ಥ್ಯ ಹೊಂದಿವೆ. ತಂಡದಲ್ಲಿ 14 ಪೈಲಟ್‌ಗಳಿದ್ದಾರೆ.
ತಂಡದ ನಾಯಕರಾಗಿ ಗ್ರೂಪ್ ಕ್ಯಾಪ್ಟನ್ ಅಜಯ್ ದಶರಥಿ - Su-30 MKI ಪೈಲಟ್, ಉಪ ನಾಯಕರಾಗಿ ಗ್ರೂಪ್ ಕ್ಯಾಪ್ಟನ್ ಸಿದ್ಧೇಶ್ ಕಾರ್ತಿಕ್, ಹಾಗೂ ಇತರ ಪೈಲಟ್‌ಗಳಾದ ಸ್ಕ್ವಾಡ್ರನ್ ಲೀಡರ್ ಜಸ್ ದೀಪ್ ಸಿಂಗ್, ಸ್ಕ್ವಾಡ್ರನ್ ಲೀಡರ್ ಹಿಮಖುಷ್ ಚಾಂಡೆಲ್, ಸ್ಕ್ವಾಡ್ರನ್ ಲೀಡರ್ ಅಂಕಿತ್ ವಶಿಷ್ಠ, ಸ್ಕ್ವಾಡ್ರನ್ ಲೀಡರ್ ವಿಷ್ಣು, ಸ್ಕ್ವಾಡ್ರನ್ ಲೀಡರ್ ದಿವಾಕರ್ ಶರ್ಮಾ, ಸ್ಕ್ವಾಡ್ರನ್ ಲೀಡರ್ ಗೌರವ್ ಪಟೇಲ್, ಸ್ಕ್ವಾಡ್ರನ್ ಲೀಡರ್ ಎಡ್ವರ್ಡ್ ಪ್ರಿನ್ಸ್, ಸ್ಕ್ವಾಡ್ರನ್ ಲೀಡರ್ ಲಲಿತ್ ವರ್ಮಾ, ವಿಂಗ್ ಕಮಾಂಡರ್ ರಾಜೇಶ್ ಕಜ್ಲಾ, ವಿಂಗ್ ಕಮಾಂಡರ್ ಅರ್ಜುನ್ ಪಟೇಲ್, ವಿಂಗ್ ಕಮಾಂಡರ್ ಕುಲದೀಪ್ ಹೂಡಾ ಮತ್ತು ವಿಂಗ್ ಕಮಾಂಡರ್ ಅಲೆನ್ ಜಾರ್ಜ್ ಇರಲಿದ್ದಾರೆ.
ತಾಂತ್ರಿಕ ತಂಡವನ್ನು ವಿಂಗ್ ಕಮಾಂಡರ್ ಅಭಿಮನ್ಯು ತ್ಯಾಡಿ, ಸ್ಕ್ವಾಡ್ರನ್ ಲೀಡರ್ ಸಂದೀಪ್ ಧಯಾಲ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಮಣಿಲ್ ಶರ್ಮಾ ಮುನ್ನಡೆಸಲಿದ್ದಾರೆ. ತಂಡದ ವ್ಯಾಖ್ಯಾನಕಾರ ಮತ್ತು ಆಡಳಿತಾಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಕನ್ವಾಲ್ ಸಂಧು, ಮತ್ತು ತಂಡದ ವೈದ್ಯರಾಗಿ ಸ್ಕ್ವಾಡ್ರನ್ ಲೀಡರ್ ಸುದರ್ಶನ್ ಇರಲಿದ್ದಾರೆ.
ಇದನ್ನೂ ಓದಿ: ಏರೋ ಇಂಡಿಯಾ ಶೋ: ವಾಯಪ್ರದೇಶ ಮುಚ್ಚುವ ಅವಧಿ ಪ್ರಕಟ, ವಿಮಾನ ವೇಳಾಪಟ್ಟಿ ಪರಿಶೀಲಿಸಿ