ETV Bharat / technology

ಡೆಸ್ಕ್​ಟಾಪ್​ ಬಳಕೆದಾರರಿಗೆ ಎಐ ಆಧಾರಿತ ಗೂಗಲ್​ ಲೆನ್ಸ್​​ ಪರಿಚಯಿಸಲು ಸಜ್ಜಾದ ಗೂಗಲ್​ ಕ್ರೋಮ್​ - Google Chrome browser

author img

By ANI

Published : Aug 3, 2024, 4:07 PM IST

ಈ ಹಿಂದಿನ ಗೂಗಲ್​ಲೆನ್ಸ್​ ಅನ್ನು ಮತ್ತಷ್ಟು ಅಭಿವೃದ್ಧಿ ಜೊತೆಗೆ ಎಐ ಚಾಲಿತ ವೈಶಿಷ್ಟ್ಯವನ್ನು ಗೂಗಲ್​ ಕ್ರೋಮ್​ನಲ್ಲಿ ಪರಿಚಯಿಸಲಾಗಿದೆ.

google-chrome-browser-with-a-new-ai-driven-feature
ಸಾಂದರ್ಭಿಕ ಚಿತ್ರ (Representative image)

ವಾಷಿಂಗ್ಟನ್​: ಡೆಸ್ಕ್​​ಟಾಪ್ ಕ್ರೋಮ್​​ ಬಳಕೆದಾರರಿಗೆ​ ಹೊಸ ಎಐ ಚಾಲಿತ ಗೂಗಲ್​ ಲೆನ್ಸ್​ ವೈಶಿಷ್ಟ್ಯವನ್ನು ತರಲು ಗೂಗಲ್​ ಸಜ್ಜಾಗಿದೆ. ನೇರವಾಗಿ ಸರ್ಚ್​ ಬಾರ್​ನಲ್ಲಿಯೇ ಈ ಗೂಗಲ್​ ಲೆನ್ಸ್​​ ಅನ್ನು ಬಳಕೆದಾರರು ಪಡೆಯಬಹುದಾಗಿದೆ. ಇಮೇಜ್​ ಮತ್ತು ಟೆಕ್ಸ್ಟ್​​ ಎರಡನ್ನೂ ಬಳಕೆ ಮಾಡಿಕೊಂಡು ಸುಗಮ ಮತ್ತು ಪರಿಣಾಮಕಾರಿಯಾಗಿ ಈ ಸೇವೆ ಪಡೆಯಬಹುದಾಗಿದೆ ಎಂದು ಗೂಗಲ್​ ತಿಳಿಸಿದೆ.

ಈ ಕುರಿತು ಮಾತನಾಡಿರುವ ಕ್ರೋಮ್​ನ ಉಪಾಧ್ಯಕ್ಷ ಪರಿಸ ಟಬ್ರಿಜ್​, ಈ ಹೊಸ ಫೀಚರ್​ ಅನ್ನು ಬಳಕೆದಾರರು, ಸರ್ಚ್​ ಬಾಕ್ಸ್​ನಲ್ಲಿಯೇ ಗೂಗಲ್​ ಲೆನ್ಸ್​ ಐಕಾನ್​ ಕ್ಲಿಕ್​ ಮಾಡುವ ಮೂಲಕ ಪಡೆಯಬಹುದು. ಪ್ರಸ್ತುತ ಟ್ಯಾಬ್​ಗಳಲ್ಲಿನ ಸೈಡ್ ​ಬಾರ್​ನಲ್ಲಿ ಇದನ್ನು ಸಕ್ರಿಯಗೊಳಿಸಬೇಕು. ಇದರಿಂದ ಬಳಕೆದಾರರು ಗೂಗಲ್​ ಲೆನ್ಸ್​ ಮೂಲಕ ಟೈಕ್ಸ್ಟ್​​ ಜೊತೆಗೆ ಇಮೇಜ್​ ಫೀಚರ್​​ ಮೂಲಕ ಮಲ್ಟಿ ಸರ್ಚ್​ ಹುಡುಕಾಟವನ್ನು ನಡೆಸಬಹುದು. ಹುಡುಕಾಟದ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದ್ದು, ಈ ಹಿಂದೆ ಇದ್ದ ಹೊಸ ಟ್ಯಾಬ್​ಗಳ ಮೂಲಕ ಹುಡುಕಾಡುವ ಯತ್ನವನ್ನು ತೆಗೆದುಹಾಕಲಾಗುವುದು ಎಂದರು.

ಈ ಹಿಂದೆ ಗೂಗಲ್​ ಲೆನ್ಸ್​​ ಅನ್ನು ರೈಟ್ ​ಕ್ಲಿಕ್​ ಅಥವಾ ಕ್ರೋಮ್​ನಲ್ಲಿರುವ ಮೂರು ಚುಕ್ಕಿಗಳ ಮೆನು ಜೊತೆಗೆ ಸೈಡ್​ಬಾರ್​​ಗಳ ಮೂಲಕ ಸಕ್ರಿಯಗೊಳಿಸಬೇಕಿತ್ತು. ಆದರೆ, ಇದೀಗ ಹೊಸ ಅಭಿವೃದ್ಧಿಯಲ್ಲಿ ನೇರವಾಗಿ ಬ್ರೌಸಿಂಗ್​ ವೇಳೆಯೇ ಸುಲಭವಾಗಿ ಇದರ ಲಭ್ಯತೆ ಪಡೆದು ಉತ್ತಮ ಪ್ರದರ್ಶನ ನಡೆಸಬಹುದಾಗಿದೆ. ಈ ಹೊಸ ಫೀಚರ್​ ಶೀಘ್ರದಲ್ಲೇ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಿದೆ ಎಂದು ತಿಳಿಸಲಾಗಿದೆ.

ಈ ಕುರಿತು ಹೇಳಿಕೆ ಪ್ರಕಟಿಸಿರುವ ಗೂಗಲ್​ ವಕ್ತಾರ ಜೊಸುಹಾ ಕ್ರುಜ್​​, ಯುನೈಟೆಡ್​ ಸ್ಟೇಟ್​ನ ಬಳಕೆದಾರರು ಲೆನ್ಸ್​​ ಹೆಚ್ಚುವರಿ ಹುಡುಕಾಟದ ಸಂದರ್ಭದಲ್ಲಿ ಎಐ ಅಭಿವೃದ್ಧಿಯ ಲಭ್ಯತೆ ಪಡೆಯಲಿದ್ದಾರೆ. ಇದು ಅಮೆರಿಕ ಬಳಕೆದಾರರಿಗೆ ಎಕ್ಸುಕ್ಲೂಸಿವ್​ ಆಗಿದೆ ಎಂದು ತಿಳಿಸಿದ್ದಾರೆ.

ಬ್ರೌಸಿಂಗ್​ ಹಿಸ್ಟರಿ ಹುಡುಕಾಟವೂ ಸುಲಭ: ಹೆಚ್ಚುವರಿ ಗೂಗಲ್​ ಲೆನ್ಸ್​ ಅಪ್ಡೇಟ್​​ನಲ್ಲಿ, ಗೂಗಲ್​ ಕ್ರೋಮಾ ಬಳಕೆದಾರರಿಗೆ ಮತ್ತೊಂದು ಎಐ ಪವರ್ಡ್​​ ಫೀಚರ್​ ಪರಿಚಯಿಸಿದೆ. ಈ ಹೊಸ ಸಾಧನದಲ್ಲಿ ಬಳಕೆದಾರರು ಸ್ವಭಾವಿಕ ಭಾಷೆಯ ಬಳಕೆಯೊಂದಿಗೆ ಹುಡುಕಾಟದ ಇತಿಹಾಸದ ಮಾಹಿತಿ ಪಡೆಯಬಹುದು.

ಇದರ ಜೊತೆಗೆ ಗೂಗಲ್​ ಆನ್‌ಲೈನ್ ಉತ್ಪನ್ನಗಳನ್ನು ಹೋಲಿಸಲು ಬಳಕೆದಾರರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಹೊಸ ವೈಶಿಷ್ಟ್ಯದೊಂದಿಗೆ ಗೂಗಲ್​ ಶಾಪಿಂಗ್ ಅನುಭವವನ್ನು ನೀಡಲಿದೆ. ಇದು ಕ್ರೋಮ್​ ಬ್ರೌಸರ್‌ನ ಕಾರ್ಯಶೀಲತೆ ಮತ್ತು ಉಪಯುಕ್ತತೆಯನ್ನು ಸುಧಾರಿಸಲು ಗೂಗಲ್​ ಬದ್ಧವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: TikTokನಿಂದ ಮಕ್ಕಳ ಸುರಕ್ಷತೆಗೆ ಅಪಾಯ: ಅಮೆರಿಕ ಸರ್ಕಾರ ಸಲ್ಲಿಸಿದ ಮೊಕದ್ದಮೆಯಲ್ಲಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.