ETV Bharat / technology

ವಾಟ್ಸಾಪ್​ನಲ್ಲಿ ಮತ್ತೊಂದು ಇನ್ಟ್ರೆಸ್ಟಿಂಗ್​ ಫೀಚರ್- ಇನ್ಮುಂದೆ ಗ್ರೂಪ್​ ಚಾಟ್​ನಲ್ಲಿ ನೋ ಕನ್ಫೂಷನ್​! - WHATSAPP TYPING INDICATOR FEATURE

WhatsApp New Feature: ವಾಟ್ಸಾಪ್​ನಲ್ಲಿ ಮತ್ತೊಂದು ಹೊಸ ಫೀಚರ್​ ಅನ್ನು ಪರಿಚಯಿಸಲಾಗಿದೆ. ಇದು ಗ್ರೂಪ್ ಚಾಟ್​ಗೆ ಸಂಬಂಧಿಸಿದ್ದಾಗಿದ್ದು, ಬಹಳ ಉಪಯುಕ್ತವಾಗಿದೆ.

WHATSAPP TYPING INDICATOR  WHATSAPP LATEST NEWS  WHATSAPP NEW UPDATE  WHATSAPP NEW FEATURE
ವಾಟ್ಸಾಪ್​ನಲ್ಲಿ ಮತ್ತೊಂದು ಇನ್ಟ್ರೆಸ್ಟಿಂಗ್​ ಫೀಚರ್ (IANS)
author img

By ETV Bharat Tech Team

Published : Dec 7, 2024, 11:12 AM IST

WhatsApp New Feature: ವಾಟ್ಸಾಪ್​ ಬಳಕೆದಾರರಿಗೆ ಸಿಹಿ ಸುದ್ದಿ. ಜನಪ್ರಿಯ ಇನ್​ಸ್ಟಂಟ್​ ಮೆಸೇಜಿಂಗ್​ ಆ್ಯಪ್​ ವಾಟ್ಸಾಪ್​ ಮತ್ತೊಂದು ಹೊಸ ವೈಶಿಷ್ಟ್ಯವನ್ನು ತಂದಿದೆ. 'ಟೈಪಿಂಗ್ ಇಂಡಿಕೇಟರ್' ಎಂಬ ಈ ಫೀಚರ್​ ಬಳಕೆದಾರರಿಗೆ ರಿಯಲ್​ ಟೈಂ ಚಾಟ್ ಅನ್ನು ಹೆಚ್ಚು ಸುಲಭಗೊಳಿಸುತ್ತದೆ. ವಿಶೇಷವಾಗಿ ಈ ವೈಶಿಷ್ಟ್ಯದ ಸಹಾಯದಿಂದ ಗ್ರೂಪ್​ ಚಾಟ್‌ನಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಕಂಪನಿಯು ಈ ಅಪ್​ಡೇಟ್​ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದೆ.

ಟೈಪಿಂಗ್ ಇಂಡಿಕೇಟರ್ ಎಂದರೇನು? ಮೆಟಾ-ಮಾಲೀಕತ್ವದ ವಾಟ್ಸಾಪ್​ ಈ ಅಪ್​ಡೇಟ್​ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ.. ಇನ್ನು ಮುಂದೆ ವಾಟ್ಸಪ್​ನಲ್ಲಿ ಮೆಸೇಜ್​ ಟೈಪ್ ಮಾಡುವಾಗ ಟೈಪಿಂಗ್ ಇಂಡಿಕೇಟರ್ ವೈಶಿಷ್ಟ್ಯವು '...' ಎಂಬ ವಿಜುವಲ್​ ಇಂಡಿಕೇಟರ್ ಜೊತೆಗೆ ಕಾಣಿಸಿಕೊಳ್ಳುತ್ತದೆ. ಅದು ಟೈಪಿಂಗ್ ಮಾಡುತ್ತಿರುವ ಬಳಕೆದಾರರ ಪ್ರೊಫೈಲ್ ಇಮೇಜ್‌ನೊಂದಿಗೆ ಚಾಟ್ ಸ್ಕ್ರೀನ್​ನ ಕೆಳಗೆ ಕಾಣಿಸಿಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಫೀಚರ್​ನಿಂದ ಏನು ಉಪಯೋಗ? ಈ ಫೀಚರ್ ಮೂಲಕ ಸಕ್ರಿಯವಾಗಿ ಚಾಟ್ ಮಾಡುವ ವ್ಯಕ್ತಿ ಯಾವಾಗ ಟೈಪ್ ಮಾಡುತ್ತಿದ್ದಾನೆ ಎಂಬುದನ್ನು ಬಳಕೆದಾರರು ಸುಲಭವಾಗಿ ತಿಳಿದುಕೊಳ್ಳಬಹುದು. ಅಂದರೆ ಈಗ ಯಾರಾದರೂ ಸಂದೇಶವನ್ನು ಟೈಪ್ ಮಾಡುತ್ತಿದ್ದರೆ.. ವಿಜುವಲ್​ ಇಂಡಿಕೇಟರ್ ಜೊತೆಗೆ ಟೈಪಿಂಗ್ ಇಂಡಿಕೇಟರ್ ಕೂಡ ಚಾಟ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ, ಬಳಕೆದಾರರು ಯಾರು ಸಂದೇಶವನ್ನು ಟೈಪ್ ಮಾಡುತ್ತಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹೀಗಾಗಿ ಇತರರು ಸಹ ಸುಲಭವಾಗಿ ಚಾಟ್ ಮಾಡಬಹುದಾಗಿದೆ.

ಈ ವೈಶಿಷ್ಟ್ಯವು ಬಳಕೆದಾರರ ಪ್ರೊಫೈಲ್ ಇಮೇಜ್ ಅನ್ನು ಸಹ ತೋರಿಸುತ್ತದೆ. ಇದು ಗ್ರೂಪ್​ ಚಾಟ್ ಬಳಕೆದಾರರಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ಇದರೊಂದಿಗೆ ಗ್ರೂಪ್ ಚಾಟ್‌ನಲ್ಲಿ ಒಂದೇ ಬಾರಿಗೆ ಎಷ್ಟು ಮಂದಿ ಚಾಟ್ ಮಾಡಿದರೂ ಗೊಂದಲ ಇರುವುದಿಲ್ಲ. ಮೊದಲು ಸಕ್ರಿಯ ಚಾಟ್‌ನಲ್ಲಿ ಯಾರು ಟೈಪ್ ಮಾಡುತ್ತಿದ್ದಾರೆ ಎಂದು ತಿಳಿಯಲು ಮೇಲಿನ ಬ್ಯಾನರ್‌ನಲ್ಲಿ 'ಟೈಪಿಂಗ್' ಮಾತ್ರ ಗೋಚರಿಸುತ್ತಿತ್ತು.

ಯಾರಿಗೆ ಲಭ್ಯ? ಈ ವೈಶಿಷ್ಟ್ಯದ ಮೊದಲ ಅಪ್​ಡೇಟ್​ ಅನ್ನು ಅಕ್ಟೋಬರ್ ತಿಂಗಳಲ್ಲಿ ಮಾಡಲಾಗಿತ್ತು. ಆ ಸಮಯದಲ್ಲಿ ಇದು ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿತ್ತು. ಆದರೂ ಈ 'ಟೈಪಿಂಗ್ ಇಂಡಿಕೇಟರ್' ವೈಶಿಷ್ಟ್ಯವು ಈಗ ಎಲ್ಲಾ iOS ಮತ್ತು Android ಬಳಕೆದಾರರಿಗೆ ವಾಟ್ಸಾಪ್​ನಲ್ಲಿ ಲಭ್ಯವಿದೆ ಎಂದು ಕಂಪನಿಯು ಘೋಷಿಸಿದೆ.

ಓದಿ: ಡಿಸ್​ಪ್ಲೇ ಗ್ರೀನ್​ ಲೈನ್​ ಸಮಸ್ಯೆ: ಲೈಫ್​ಟೈಂ ವಾರೆಂಟಿ ಘೋಷಿಸಿದ ಒನ್​ಪ್ಲಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.