ETV Bharat / technology

ಗ್ರೂಪ್​ ಸೇರ್ಪಡೆಗೆ ಮತ್ತೊಂದು ಸುರಕ್ಷತಾ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್ - WhatsApp New Feature

ಬಳಕೆದಾರರನ್ನು ಹೊಸ ಗ್ರೂಪ್​ಗೆ ಸೇರಿಸಿದಾಗ ಗ್ರೂಪ್​ನ ಸಂಪೂರ್ಣ ಮಾಹಿತಿಯನ್ನು ನೀಡುವ ಹೊಸ ವೈಶಿಷ್ಟ್ಯವನ್ನು ವಾಟ್ಸ್​ಆ್ಯಪ್​ ಪರಿಚಯಿಸಿದೆ.

ಗ್ರೂಪ್​ ಸೇರ್ಪಡೆಗೆ ಮತ್ತೊಂದು ಸುರಕ್ಷತಾ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್
ವಾಟ್ಸ್​ಆ್ಯಪ್ (IANS)
author img

By ETV Bharat Karnataka Team

Published : Jul 10, 2024, 2:29 PM IST

ನವದೆಹಲಿ: ಮೆಟಾ ಮಾಲೀಕತ್ವದ ವಾಟ್ಸ್​ಆ್ಯಪ್ ಮಂಗಳವಾರ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಗ್ರೂಪ್ ಮೆಸೇಜಿಂಗ್​​ನಲ್ಲಿ ಬಳಕೆದಾರರಿಗೆ ಮತ್ತಷ್ಟು ಸುರಕ್ಷತೆಯನ್ನು ಒದಗಿಸುವ ವೈಶಿಷ್ಟ್ಯ ಇದಾಗಿದೆ. ಹೊಸ ಫೀಚರ್​ ಈಗಾಗಲೇ ಹಲವಾರು ಬಳಕೆದಾರರಿಗೆ ಲಭ್ಯವಾಗಲಾರಂಭಿಸಿದ್ದು, ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಏನಿದು ಹೊಸ ವೈಶಿಷ್ಟ್ಯ?: ನಿಮಗೆ ಗೊತ್ತಿಲ್ಲದ ಯಾರಾದರೂ ನಿಮ್ಮನ್ನು ಹೊಸ ಗ್ರೂಪ್​ಗೆ ಸೇರಿಸಿದಾಗ ಆ ಗ್ರೂಪ್​​ನ ಸಂಪೂರ್ಣ ಮಾಹಿತಿಯನ್ನು ನೀಡುವುದೇ ಹೊಸ ವೈಶಿಷ್ಟ್ಯವಾಗಿದೆ. ನಿಮ್ಮನ್ನು ಯಾರಾದರೂ ಹೊಸ ಗ್ರೂಪ್​ಗೆ ಸೇರಿಸಿದಾಗ ಆ ಗ್ರೂಪ್​ನ ಎಲ್ಲ ಮಾಹಿತಿಯನ್ನೊಳಗೊಂಡ ಕಾರ್ಡ್​ ಒಂದು ನಿಮಗೆ ಕಾಣಿಸುತ್ತದೆ. ನಿಮ್ಮನ್ನು ಯಾರು ಗ್ರೂಪ್​ಗೆ ಸೇರಿಸಿದ್ದಾರೆ, ಗ್ರೂಪ್​​ ಅನ್ನು ಯಾವಾಗ ರಚಿಸಲಾಗಿದೆ ಮತ್ತು ಅದನ್ನು ಯಾರು ರಚಿಸಿದ್ದಾರೆ ಎಂಬ ಮಾಹಿತಿಗಳು ಇದರಲ್ಲಿರುತ್ತವೆ ಎಂದು ವಾಟ್ಸ್​ಆ್ಯಪ್ ಹೇಳಿದೆ.

ಈ ಎಲ್ಲ ಮಾಹಿತಿಗಳನ್ನು ನೋಡಿದ ಮೇಲೆ ಗ್ರೂಪ್​ನಲ್ಲಿ ಇರಬೇಕಾ ಅಥವಾ ಎಕ್ಸಿಟ್​ ಆಗಬೇಕಾ ಎಂಬ ಬಗ್ಗೆ ನೀವು ನಿರ್ಧರಿಸಬಹುದು. ಅಲ್ಲದೆ ವಾಟ್ಸ್​ಆ್ಯಪ್​ನಲ್ಲಿ ಸುರಕ್ಷಿತ ಮತ್ತು ಸುಭದ್ರವಾಗಿರಲು ಲಭ್ಯವಿರುವ ಕೆಲ ಸುರಕ್ಷತಾ ಸಾಧನಗಳನ್ನು ಪರಿಶೀಲಿಸಬಹುದು ಎಂದು ಅದು ಹೇಳಿದೆ.

ಕಾಂಟ್ಯಾಕ್ಟ್​ ಸೇವ್ ಇಲ್ಲದವರು ಗ್ರೂಪ್​ಗೆ ಸೇರಿಸಿದಾಗ ಏನು ಮಾಡುವುದು?: ಯಾರೋ ಒಬ್ಬ ವ್ಯಕ್ತಿಯನ್ನು ಅಥವಾ ಜನರ ಗುಂಪನ್ನು ನೀವು ಯಾವಾಗಲೋ ಒಮ್ಮೆ ಭೇಟಿಯಾಗಿರಬಹುದು. ಆದರೆ ಅವರ ಫೋನ್​ ನಂಬರ್​ ನಿಮ್ಮ ಕಾಂಟ್ಯಾಕ್ಟ್​ ಲಿಸ್ಟ್​ ನಲ್ಲಿ ಸೇವ್ ಆಗಿಲ್ಲದಿರಬಹುದು. ಅಂಥವರಾರೋ ನಿಮ್ಮನ್ನು ಹೊಸ ಗ್ರೂಪ್​ಗೆ ಸೇರಿಸುತ್ತಾರೆ. ಅಂಥ ಸಂದರ್ಭಗಳಲ್ಲಿ ಗ್ರೂಪ್​​ನಲ್ಲಿರುವವರು ಯಾರು, ಇದರಲ್ಲಿ ಮುಂದುವರಿಯುವುದಾ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಹೊಸ ಫೀಚರ್ ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.

"ಈ ಹೊಸ ಅಪ್ಡೇಟ್​ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಮತ್ತೊಂದು ಹಂತದ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುತ್ತದೆ. ಅಪರಿಚಿತ ಕರೆಗಳನ್ನು ಸೈಲೆಂಟ್​ ಮಾಡುವುದು, ಚಾಟ್ ಲಾಕ್, ಇನ್-ಅಪ್ಲಿಕೇಶನ್ ಗೌಪ್ಯತೆ ಪರಿಶೀಲನೆ ಮತ್ತು ನಿಮ್ಮನ್ನು ಗುಂಪುಗಳಿಗೆ ಯಾರು ಸೇರಿಸಬಹುದು ಎಂಬುದನ್ನು ನಿಯಂತ್ರಿಸುವಂತಹ ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳಿಗೆ ಹೆಚ್ಚುವರಿ ಸುರಕ್ಷತೆಯನ್ನು ನೀಡುತ್ತದೆ" ಎಂದು ಕಂಪನಿ ಹೇಳಿದೆ.

ಅಲ್ಲದೆ ನಿಮಗೆ ಗೊತ್ತಿಲ್ಲದ ಯಾರಾದರೂ ವೈಯಕ್ತಿಕ ಮೆಸೇಜ್ ಕಳುಹಿಸಿದ ಸಂದರ್ಭದಲ್ಲಿ ಕೂಡ ಅವರ ಬಗ್ಗೆ ನಿಮಗೆ ಹೊಸ ಫೀಚರ್ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ವಾಟ್ಸ್​ಆ್ಯಪ್​ ಇದೊಂದು ಉಚಿತ ಮೆಸೆಂಜರ್​ ಅಪ್ಲಿಕೇಶನ್ ಆಗಿದೆ. ಇದನ್ನು ಬಳಸಿ ಇಂಟರ್​ನೆಟ್​ ಮೂಲಕ ಸಂದೇಶಗಳು, ಚಿತ್ರಗಳು, ಆಡಿಯೋ ಅಥವಾ ವೀಡಿಯೊಗಳನ್ನು ಕಳುಹಿಸಬಹುದು.

ಇದನ್ನೂ ಓದಿ : 50 ಎಂಪಿ ಕ್ಯಾಮೆರಾ ಹೊಂದಿರುವ ನಥಿಂಗ್​​ನ CMF Phone 1 ಬಿಡುಗಡೆ: ಬೆಲೆ ಎಷ್ಟು ಅಂತಾ ನಿಮಗೆ ಗೊತ್ತಾ? - Nothing CMF Phone 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.