Easy Contact Management: ಪ್ರಮುಖ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಮತ್ತೊಂದು ಹೊಸ ಫೀಚರ್ ಅನ್ನು ಹೊರತರಲು ಕಸರತ್ತು ನಡೆಸುತ್ತಿದೆ. ಈ ವೈಶಿಷ್ಟ್ಯ ಸಹಾಯದಿಂದ ಹೊಸಬರ ಕಾಂಟ್ಯಾಕ್ಟ್ ಅನ್ನು ಪ್ರತ್ಯೇಕವಾಗಿ ವಾಟ್ಸಾಪ್ನಲ್ಲೇ ಸೇವ್ ಮಾಡಿಕೊಳ್ಳಬಹುದು.
ಇನ್ನು ಈ ಹೊಸ ನಂಬರ್ ಅನ್ನು ವಾಟ್ಸ್ಆ್ಯಪ್ನಲ್ಲಿ ಸೇವ್ ಮಾಡುವ ಮೊದಲು ನಿಮಗೆ ಎರಡು ಆಪ್ಷನ್ ಕಾಣಿಸುತ್ತವೆ. ಒಂದು ಕೇವಲ ವಾಟ್ಸ್ಆ್ಯಪ್ನಲ್ಲೇ ಸೇವ್ ಮಾಡಿಕೊಳ್ಳಬೇಕಾ ಅಥವಾ ಮೊಬೈಲ್ನಲ್ಲಿಯೂ ಸೇವ್ ಮಾಡಿಕೊಳ್ಳಬೇಕಾ? ಎಂಬ ಆಯ್ಕೆಗಳು ನಿಮಗೆ ಗೋಚರಿಸುತ್ತವೆ. ಅದರಲ್ಲಿ ನಮಗೆ ಬೇಕಾದ ಆಪ್ಷನ್ ಅನ್ನು ಆಯ್ದುಕೊಳ್ಳಬಹುದಾಗಿದೆ.
ಇದರಿಂದ ಏನು ಲಾಭ?: ಇನ್ನು ಇದರ ಮತ್ತೊಂದು ಲಾಭವೆಂದ್ರೆ.. ಒಂದು ವೇಳೆ ನಮ್ಮ ಮೊಬೈಲ್ ಕಳುವಾದರೂ ಅಥವಾ ಹಾಳಾದ್ರೂ ಸಹ ವಾಟ್ಸ್ಆ್ಯಪ್ನಲ್ಲಿ ಸೇವ್ ಮಾಡಿರುವ ನಂಬರ್ಗಳು ಡಿಲಿಟ್ ಆಗದೇ ಆಗಿಯೇ ಉಳಿದುಕೊಳ್ಳುತ್ತವೆ. ಹಾಗಾದರೆ ಈ ಫೀಚರ್ ಇನ್ನು ಅಭಿವೃದ್ಧಿ ಹಂತದಲ್ಲೇ ಇದೆ. ಈ ಫೀಚರ್ ಅನ್ನು ಹೊರ ತರಲು ಕೆಲಸ ನಡೆಯುತ್ತಿದೆ ಎಂದು ವಾಬಿಟಾ ಇನ್ಫೋ ತನ್ನ ಬ್ಲಾಗ್ನಲ್ಲಿ ಹೇಳಿದೆ. ಇದರ ಕುರಿತು ಸ್ಕ್ರೀನ್ ಶಾಟ್ ಸಹ ಹಂಚಿಕೊಂಡಿದೆ. ಆದಷ್ಟು ಬೇಗ ಈ ಹೊಸ ವೈಶಿಷ್ಟ್ಯವನ್ನು ವಾಟ್ಸ್ಆ್ಯಪ್ ವೆಬ್, ವಿಂಡೋಸ್ ಬಳಕೆದಾರರಿಗೆ ಲಭ್ಯವಾಗಲಿದೆ.
ಇದಕ್ಕೂ ಮುನ್ನ ವಾಟ್ಸ್ಆ್ಯಪ್ನಲ್ಲಿ ಚಾಟ್ ಹೆಸರಿನಲ್ಲಿ ಕಾಣಿಸುವಂತಹ ಪ್ರೈಮರಿ ಡಿವೈಸ್ನಲ್ಲಿಯೇ ಕಾಂಟ್ಯಾಕ್ಟ್ ಅನ್ನು ಸೇವ್ ಮಾಡಿಕೊಳ್ಳಬಹುದಾಗಿತ್ತು. ಲಿಂಕ್ಡ್ ಡಿವೈಸಸ್ನಲ್ಲಿ ಸೇವ್ ಮಾಡುವ ಅವಕಾಶ ಇರಲಿಲ್ಲ. ಹೀಗಾಗಿ ಒಂದಕ್ಕಿಂತ ಹೆಚ್ಚು ಇರುವ ಡಿವೈಸ್ನಲ್ಲಿ ವಾಟ್ಸ್ಆ್ಯಪ್ ಉಪಯೋಗಿಸುವವರು ಪ್ರತಿಬಾರಿ ಪ್ರೈಮರಿ ಡಿವೈಸ್ಗೆ ಹೋಗಬೇಕಾಗಿತ್ತು. ಈಗ ಈ ಸಮಸ್ಯೆಗೆ ವಾಟ್ಸ್ಆ್ಯಪ್ ಗುಡ್ಬೈ ಹೇಳುತ್ತಿದೆ.
ಹೌದು, ಲಿಂಕ್ ಮಾಡಿದ ಡಿವೈಸ್ನಲ್ಲಿ ಕಾಂಟ್ಯಾಕ್ಟ್ ಅನ್ನು ಸೇವ್ ಮಾಡುವ ಸೌಲಭ್ಯವನ್ನು ಬಳಕೆದಾರರಿಗೆ ಪರಿಚಯಿಸಲು ಸಿದ್ಧವಾಗಿದೆ. ಹೀಗಾಗಿ ಹೊಸ ಕಾಂಟ್ಯಾಕ್ಟ್ ಅನ್ನು ಪ್ರತ್ಯೇಕವಾಗಿ ವಾಟ್ಸ್ಆ್ಯಪ್ನಲ್ಲಿ ಸೇವ್ ಮಾಡಿಕೊಳ್ಳುವಂತಹ ಫೀಚರ್ ಹೊರತರಲು ಕಸರತ್ತು ಆರಂಭಿಸಿದೆ.
ಇದರೊಂದಿಗೆ ವಾಟ್ಸ್ಆ್ಯಪ್ ಚಾಟ್ ಮೆಮೊರಿ ಫೀಚರ್ ಅನ್ನು ಹೊರತರಲು ಮೆಸೇಜಿಂಗ್ ಆ್ಯಪ್ ಕಸರತ್ತು ಮಾಡುತ್ತಿದೆ. ಇದು ಮೆಟಾ ಎಐ ಜೊತೆ ಹಂಚಿಕೊಂಡ ವೈಯಕ್ತಿಕ ಮಾಹಿತಿಯನ್ನು ರಿಕಾರ್ಡ್ ಮಾಡಲು ಇದನ್ನು ಬಳಸಲಾಗುತ್ತದೆ. ಆ ಬಳಿಕ ನಮಗೆ ಅವಶ್ಯಕತೆಯಿದ್ದಾಗ ಬೇಕಾದ ಸಮಾಚಾರ ಮತ್ತು ಸೂಚನೆಗಳನ್ನು ನೀಡುತ್ತದೆ. ಅಂದ್ರೆ ಇದು ನಮಗೆ ಪರ್ಸನಲ್ ಅಸಿಸ್ಟಂಟ್ ಆಗಿ ಉಪಯೋಗವಾಗುತ್ತದೆ.
ಓದಿ: ಭಾರತೀಯ ಸಂಖ್ಯೆಗಳಂತೆ ಕಾಣುವ ಅಂತಾರಾಷ್ಟ್ರೀಯ ಕರೆಗಳನ್ನು ನಿರ್ಬಂಧಿಸಲು ಬಂದಿದೆ ಸ್ಪ್ಯಾಮ್ ಟ್ರ್ಯಾಕಿಂಗ್ ವ್ಯವಸ್ಥೆ!