Vivo X200 Series Global Launch: ಪ್ರಮುಖ ಸ್ಮಾರ್ಟ್ಫೋನ್ ಕಂಪನಿ ವಿವೋ ತನ್ನ ಹ್ಯಾಂಡ್ಸೆಟ್ ಅನ್ನು ಚೀನಾದಲ್ಲಿ ಪ್ರಾರಂಭಿಸಿದ ತಿಂಗಳ ಬಳಿಕ ವಿವೋ ಎಕ್ಸ್200 ಸಿರೀಸ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿದೆ. ಇದು ಮಲೇಷಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಈ ವಿವೋ ಎಕ್ಸ್200 ಸಿರೀಸ್ನಲ್ಲಿ ಮೂರು ಮಾಡೆಲ್ ಮೊಬೈಲ್ಗಳನ್ನು ಒಳಗೊಂಡಿದೆ. ಇದರಲ್ಲಿ ಜೀಸ್ ಆಫ್ಟಿಕ್ಸ್ ಕೋ-ಇಂಜನಿರ್ಡ್ ಕ್ಯಾಮೆರಾ ಸಿಸ್ಟಮ್ ಇವೆ. ವಿವೋ ಎಕ್ಸ್200 ಲೈನ್ಅಪ್ ಈ ತಿಂಗಳ ಕೊನೆಯಲ್ಲಿ ಅಥವಾ ಡಿಸೆಂಬರ್ ಮೊದಲ ವಾರ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತಾದ ಮಾಹಿತಿ ಇಲ್ಲಿದೆ..
ವಿವೋ ಎಕ್ಸ್200 ಸಿರೀಸ್ ಮಾಡೆಲ್ಗಳು:
- Vivo X200
- Vivo X200 Pro
- Vivo X200 Pro Mini
ವಿವೋ ತನ್ನ ಮಲೇಷಿಯಾ ಫೇಸ್ಬುಕ್ ಪೇಜ್ನಲ್ಲಿ ವಿವೋ ಎಕ್ಸ್200 ಸಿರೀಸ್ ಅನ್ನು ಶುಕ್ರವಾರ ಪರಿಚಯಿಸಿದೆ. ಆದ್ರೆ ಮಲೇಷಿಯಾದಲ್ಲಿ ಈ ಸಿರೀಸ್ ಯಾವಾಗ ಪ್ರಾರಂಭಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಇನ್ನು ಟೀಸರ್ ಪೋಸ್ಟ್ನಲ್ಲಿ ಈ ಸ್ಮಾರ್ಟ್ಫೋನ್ನ ಡಿಸೈನ್ ಕುರಿತು ಮಾಹಿತಿ ನೀಡಿದೆ. ಇದು ವಿವೋ ಎಕ್ಸ್200, ವಿವೋ ಎಕ್ಸ್200 ಮಿನಿ ಮಾಡೆಲ್ಗಳು ಟೈಟಾನಿಯಂ ಮತ್ತು ಟೈಟಾನಿಯಂ ಗ್ರೀನ್ ಕಲರ್ ಆಪ್ಷನ್ಗಳು ಇವೆ.
ವಿವೋ ಎಕ್ಸ್200 ಸಿರೀಸ್ ವಿಶೇಷತೆಗಳು: ಅಕ್ಟೋಬರ್ನಲ್ಲಿ ಚೈನಾದಲ್ಲಿ ವಿವೋ ಎಕ್ಸ್200 ಸಿರೀಸ್ 12ಜಿಬಿ+256ಜಿಬಿ ಸ್ಟೋರೇಜ್ ವೆರಿಯಂಟ್ ಸಿಎನ್ವೈ 4,300 (ಸುಮಾರು 51 ಸಾವಿರ) ಆರಂಭಿಕ ದರದಲ್ಲಿ ಲಾಚ್ ಆಯಿತು. ವಿವೋ ಎಕ್ಸ್200 ಲೈನ್ಅಪ್ನಲ್ಲಿನ ಎಲ್ಲ ಮಾಡೆಲ್ಗಳು MediaTek Dimensity 9400 ಪ್ರೊಸೆಸರ್ ಅನ್ನು ಒಳಗೊಂಡಿದೆ.
ಇವು 50 ಮೆಗಾಪಿಕ್ಸಲ್ ಪ್ರೈಮರಿ ಕ್ಯಾಮೆರಾ ಜೊತೆ Zeiss-ಬ್ರಾಂಡೆಡ್ ಟ್ರಿಪುಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಅವುಗಳು OriginOS 5 ಮೇಲೆ ರನ್ ಆಗುತ್ತವೆ. ಇದರಲ್ಲಿ ವನಿಲ್ಲಾ ವಿವೋ ಎಕ್ಸ್200 5800mAh ಬ್ಯಾಟರಿ 90W ವೈರ್ಡ್ ಚಾರ್ಜಿಂಗ್ಗೆ ಸಪೋರ್ಟ್ ಮಾಡುತ್ತದೆ.
ಮೊತ್ತೊಂದೆಡೆ ವಿವೋ ಎಕ್ಸ್200 ಪ್ರೋ, ಎಕ್ಸ್200 ಪ್ರೋ ಮಿನಿ ಕ್ರಮವಾಗಿ 6,000mAh, 5,800mAh ಬ್ಯಾಟರಿಯನ್ನು ಒಳಗೊಂಡಿದೆ. ಇವು 90W ವೈರ್ಡ್ ಚಾರ್ಜಿಂಗ್ಗೆ ಸಪೋರ್ಟ್ ಮಾಡುತ್ತವೆ. ವಿವೋ ಎಕ್ಸ್200 ಸಿರೀಸ್ಗಳು ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಓದಿ: ಹ್ಯಾಕರ್ಗಳ ಕಾಟವೇ? ನಿಮ್ಮ ಮೊಬೈಲ್ ಫೋನ್ ಸುಮ್ನೆ ಸ್ವಿಚ್ ಮಾಡಿ ಅಂತಾರೆ ತಜ್ಞರು