ಹೈದರಾಬಾದ್: ವಿವೋ ಪ್ರಿಯರಿಗೊಂದು ಸಂತಸದ ಸುದ್ದಿ ಬಂದಿದೆ. ಹೌದು, Vivo V30e ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. 120Hz ರಿಫ್ರೆಶ್ ರೇಟ್‌ನೊಂದಿಗೆ 6.78-ಇಂಚಿನ ಪೂರ್ಣ-HD+ 3D ಕರ್ವ್ ಡಿಸ್‌ಪ್ಲೇಯೊಂದಿಗೆ ಸ್ಮಾರ್ಟ್‌ಫೋನ್ ಜಗತ್ತನ್ನು ರಾಕ್ ಮಾಡಲು ಇದು ಸಿದ್ಧಗೊಂಡಿದೆ. ಗಮನ ಸೆಳೆಯುತ್ತಿರುವ Vivo V30e ನ ವೈಶಿಷ್ಟ್ಯಗಳು, ಬೆಲೆ ಮತ್ತು ಎಲ್ಲದರ ಮಾಹಿತಿ ಈ ಕೆಳಕಂಡಂತಿದೆ.
Vivo V30e ಮೊಬೈಲ್ನ ವೈಶಿಷ್ಟ್ಯಗಳು
- Vivo V30 ಸರಣಿಯು 4nm ಸ್ನಾಪ್‌ಡ್ರಾಗನ್ 6 Gen 1 SoC ನಿಂದ ಚಾಲಿತವಾಗಿದೆ.
- Vivo V30e ನೀರು ಮತ್ತು ಧೂಳು ಪ್ರೂಫ್ ಹೊಂದಿದ್ದು, IP64-ರೇಟೆಡ್ ಬಿಲ್ಡ್ ಇದಾಗಿದೆ .
- Vivo V30e ಮುಂಭಾಗದಲ್ಲಿ 50 MP ಕ್ಯಾಮೆರಾ ಹೊಂದಿರುವುದು ಈ ಫೋನ್ನ ವಿಶೇಷತೆಯಾಗಿದೆ.
- ಇದು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕದೊಂದಿಗೆ ಹೊರ ತರಲಾಗಿದೆ.
- OIS ಬೆಂಬಲದೊಂದಿಗೆ IMX882 ಸಂವೇದಕ ಮತ್ತು 8 MP ಅಲ್ಟ್ರಾ-ವೈಡ್-ಆಂಗಲ್ ಸಂವೇದಕವಿದೆ.
- ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 4K ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿರುವುದನ್ನ ಗಮನಿಸಬಹುದಾಗಿದೆ
- Vivo V30e 44W ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿ ಇದೆ
- Vivo V30e ಆಂಡ್ರಾಯ್ಡ್ 14 ಆಧಾರಿತ Funtouch OS 14 ನೊಂದಿಗೆ ಬರುತ್ತದೆ.
- Vivo V30e ಫೋನ್ ಸಿಲ್ಕ್ ಬ್ಲೂ ಮತ್ತು ವೆಲ್ವೆಟ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ.
- Vivo V30e ಆನ್‌ಬೋರ್ಡ್ RAM ಅನ್ನು 16GB ವರೆಗೆ ವಿಸ್ತರಿಸಬಹುದು. ಇದು 256GB ವರೆಗಿನ ಅಂತರ್ಗತ ಸಂಗ್ರಹಣ ಸಾಮರ್ಥ್ಯವನ್ನು ಹೊಂದಿದೆ.
- Vivo V30e 120Hz ರಿಫ್ರೆಶ್ ದರ ಮತ್ತು 93.3 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 1,300 nits ಗರಿಷ್ಠ ಹೊಳಪನ್ನು ಪ್ರತಿಬಿಂಬಿಸಲಿದೆ.
- Vivo V30e 5G, 4G, WiFi, GLONASS, Bluetooth, GPS, BeiDou ಮತ್ತು USB Type-C ಸಂಪರ್ಕ ಹೊಂದಿದೆ.
ಭಾರತದಲ್ಲಿ Vivo V30e ಬೆಲೆ ಎಷ್ಟಿದೆ? : Vivo V30e ಬೆಲೆ 8GB RAM + 128GB ರೂಪಾಂತರಕ್ಕೆ 27,999 ರೂ. ಬೆಲೆ ಇದೆ. 8GB RAM + 256GB ಗಾಗಿ 29,999 ರೂ. ದರ ನಿಗದಿ ಮಾಡಲಾಗಿದೆ. ನೀವು ಈ ಮೊಬೈಲ್ ಖರೀದಿಸಲು ಯೋಜಿಸುತ್ತಿದ್ದರೆ, ಮೇ 9 ರಿಂದ ಫ್ಲಿಪ್‌ಕಾರ್ಟ್, ವಿವೋದ ಇಂಡಿಯಾ ಇ-ಸ್ಟೋರ್ ಮತ್ತು ಇತರ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು. ನೀವು ರಿಯಾಯಿತಿಯ ಲಾಭವನ್ನು ಪಡೆಯಲು ಬಯಸಿದರೆ ICICI, SBI, IndusInd, IDFC ಮತ್ತು ಇತರ ಬ್ಯಾಂಕ್‌ಗಳ ಮೂಲಕ 10 ಪ್ರತಿಶತದವರೆಗೆ ರಿಯಾಯಿತಿ ಸೌಲಭ್ಯವನ್ನೂ ಪಡೆದುಕೊಳ್ಳಬಹುದು.
ಇದನ್ನು ಓದಿ: ನಿಯಮ ಉಲ್ಲಂಘನೆ: ಪ್ಲೇಸ್ಟೋರ್ನಿಂದ 20 ಲಕ್ಷ ಆ್ಯಪ್ ತೆಗೆದುಹಾಕಿದ ಗೂಗಲ್ - Google Banned Apps