ETV Bharat / technology

ಈ ಸೆಪ್ಟೆಂಬರ್​ನಲ್ಲಿ ಭಾರತದ ದ್ವಿಚಕ್ರ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಬೈಕ್​ಗಳಿವು! - Top 5 Bikes Launch In Sept - TOP 5 BIKES LAUNCH IN SEPT

Five New Two Wheelers: ಈ ಸೆಪ್ಟೆಂಬರ್‌ ತಿಂಗಳಲ್ಲಿ ಭಾರತದಲ್ಲಿ ಹೊಸ ದ್ವಿಚಕ್ರ ವಾಹನಗಳು ಬಿಡುಗಡೆಯಾಗಲಿವೆ. ಜಾವಾ 42, ಹೀರೋ ಡೆಸ್ಟಿನಿ 125, ಬಜಾಜ್‌ನ ಎಥೆನಾಲ್ ಬೈಕ್, ಬಿಎಂಡಬ್ಲ್ಯು ಎಫ್900 ಜಿಎಸ್ ಮತ್ತು ಅಡ್ವೆಂಚರ್ ಮಾರುಕಟ್ಟೆ ಪ್ರವೇಶಿಸಲಿವೆ.

INDIAN TWO WHEELER MARKET  BIKES LAUNCHED IN SEPTEMBER  MOTORCYCLE COMPANY
ಸೆಪ್ಟೆಂಬರ್​ನಲ್ಲಿ ಭಾರತದ ದ್ವಿಚಕ್ರ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಬೈಕ್​ಗಳು (bmwmotorcycles.com)
author img

By ETV Bharat Tech Team

Published : Sep 3, 2024, 10:09 AM IST

Five New Two Wheelers: ಈ ತಿಂಗಳಲ್ಲಿ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಹಲವು ಪ್ರಮುಖ ಕಂಪನಿಗಳು ತಮ್ಮ ಹೊಚ್ಚ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ಅಣಿಯಾಗುತ್ತಿವೆ. ಸ್ಟೈಲಿಶ್​ ರೆಟ್ರೊ-ಇನ್ಸ್​ಪೈರೆಡ್​ ಬೈಕ್‌ಗಳಿಂದ ಹಿಡಿದು ಪರಿಸರಸ್ನೇಹಿ ಮತ್ತು ಅಡ್ವೆಂಚರ್​ ಬೈಕ್​ಗಳನ್ನು ಖರೀದಿಸಲು ಕಾಯುತ್ತಿರುವ ಸವಾರರು ಈ ಸುದ್ದಿ ಓದಲೇಬೇಕು. ಈ ತಿಂಗಳು ದೇಶದ ಮಾರುಕಟ್ಟೆ ಪಾದಾರ್ಪಣೆ ಮಾಡಲಿರುವ ಐದು ಹೊಸ ದ್ವಿಚಕ್ರ ವಾಹನಗಳು ಇವು.

The Revamped Jawa 42: ಜಾವಾ ಮೋಟಾರ್‌ಸೈಕಲ್ಸ್ Revamped Jawa 42 ಅನ್ನು ಸೆಪ್ಟೆಂಬರ್ 3 ಅಂದ್ರೆ ಇಂದು ಅನಾವರಣಗೊಳಿಸಲು ಸಿದ್ಧವಾಗಿದೆ. ಹೊಸ ಮಾದರಿಯು ಪರಿಷ್ಕರಿಸಿದ ಬಾಡಿ ಶೈಲಿಯನ್ನು ಒಳಗೊಂಡಂತೆ ಗಮನಾರ್ಹ ಅಪ್​ಡೇಟ್​ಗಳ ಭರವಸೆ ನೀಡುತ್ತದೆ. ಇದು ರೂ. 2 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

Hero Destini 125 Gets an Update: Hero MotoCorp ತನ್ನ ಅಪ್​ಡೇಟ್​ ಮಾದರಿಯ ಡೆಸ್ಟಿನಿ 125 ಸ್ಕೂಟರ್ ಅನ್ನು ಸೆಪ್ಟೆಂಬರ್ 7ರಂದು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಹೊಸ ಮಾದರಿಯು ತಾಜಾ ವಿನ್ಯಾಸ, ಹೊಸ ಬಣ್ಣಗಳು, ವರ್ಧಿತ ವೈಶಿಷ್ಟ್ಯಗಳು ಮತ್ತು ಸುಧಾರಿತ ಫ್ಯೂಯಲ್​ ಎಕಾನಮಿಯನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ತನ್ನ 124.6cc ಎಂಜಿನ್ ಮತ್ತು CVT ಆಟೋಮೆಟಿಕ್​ ಟ್ರಾನ್ಸ್​ಮಿಷನ್​ ಒಳಗೊಂಡಿರುವ ಸಾಧ್ಯತೆ ಇದೆ.

Bajaj’s First Ethanol Bike: ಬಜಾಜ್ ಆಟೋ ತನ್ನ ಮೊದಲ ಎಥೆನಾಲ್‌ಚಾಲಿತ ಬೈಕ್‌ನೊಂದಿಗೆ ಪರಿಸರಸ್ನೇಹಿ ಜಾಗಕ್ಕೆ ಕಾಲಿಡುತ್ತಿದೆ. ವಿವರಗಳು ವಿರಳವಾಗಿದ್ದರೂ, ಗಮನಾರ್ಹವಾದ ಎಂಜಿನ್ ಮಾರ್ಪಡುಗಳನ್ನು ನಿರೀಕ್ಷಿಸಲಾಗಿದೆ. ಹೆಚ್ಚಿನ ಮಾಹಿತಿ ಬಿಡುಗಡೆಯ ನಂತರ ತಿಳಿದುಬರಲಿದೆ.

BMW F900 GS: Adventure Awaits: BMW Motorrad ಈ ತಿಂಗಳು F900 GS ಮತ್ತು F900 GS ಅಡ್ವೆಂಚರ್ ಬೈಕ್​ಗಳನ್ನು ಭಾರತಕ್ಕೆ ಪರಿಚಯಿಸುತ್ತಿದೆ. F850 GS ಮಾದರಿಗಳನ್ನು ಬದಲಿಸಿ, ಈ ಸಾಹಸ ಬೈಕ್‌ಗಳು ಅಪ್​ಡೇಟ್​ ಹೊಂದಿದ ಬಾಡಿವರ್ಕ್ ಮತ್ತು ಎಂಜಿನ್‌ಗಳನ್ನು ಇದು ಒಳಗೊಂಡಿದೆ. ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ. ಸೆಪ್ಟೆಂಬರ್ ಆರಂಭದಲ್ಲಿ ಅಧಿಕೃತ ಬಿಡುಗಡೆ ನಿರೀಕ್ಷಿಸಲಾಗಿದೆ.

F900 GS Adventure: Built for the Long Haul: F900 GS ಅಡ್ವೆಂಚರ್ ಅನ್ನು ಪ್ರವಾಸಿ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಒರಟು ನಿರ್ಮಾಣ, ಆಫ್-ರೋಡ್ ಟೈರ್‌ಗಳು, 23-ಲೀಟರ್ ಇಂಧನ ಟ್ಯಾಂಕ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ. F900 GS ಮತ್ತು F900 GS ಅಡ್ವೆಂಚರ್ ಎರಡೂ ರೂ 13 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ).

ಹೀಗಾಗಿ, ಭಾರತದಲ್ಲಿ ದ್ವಿಚಕ್ರ ವಾಹನ ಉತ್ಸಾಹಿಗಳಿಗೆ ಸೆಪ್ಟೆಂಬರ್ ರೋಮಾಂಚನಕಾರಿ ತಿಂಗಳಾಗಿ ರೂಪುಗೊಳ್ಳುತ್ತಿದೆ. Jawa, Hero MotoCorp, Bajaj Auto, ಮತ್ತು BMW Motorrad ನಂತಹ ಪ್ರಮುಖ ಬ್ರ್ಯಾಂಡ್‌ಗಳ ವಾಹನಗಳ ಬಿಡುಗಡೆಗಳೊಂದಿಗೆ ಮಾರುಕಟ್ಟೆಯು ವಿಭಿನ್ನ ಅಭಿರುಚಿ ಮತ್ತು ಆದ್ಯತೆಗಳನ್ನು ಪೂರೈಸುವ ವೈವಿಧ್ಯಮಯ ಶ್ರೇಣಿಯ ಹೊಸ ಮಾದರಿಗಳನ್ನು ನೋಡಲು ಸಿದ್ಧವಾಗಿದೆ.

ಇದನ್ನೂ ಓದಿ: ನೀರಿನ ರಭಸಕ್ಕೂ ಜಗ್ಗದ-ಬಗ್ಗದ ಟಾಪ್​ 5 ಎಸ್​ಯುವಿ ಕಾರುಗಳಿವು! - Highest Water Wading Capacity SUVs

ETV Bharat Logo

Copyright © 2025 Ushodaya Enterprises Pvt. Ltd., All Rights Reserved.