ETV Bharat / technology

ಭಾರತಕ್ಕೆ ಟೆಸ್ಲಾ ಪ್ರವೇಶ: ಮೂಲ ಸೌಕರ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ನಿರೀಕ್ಷೆ - Tesla

ಭಾರತದಲ್ಲಿ ಬಿಲಿಯನ್​ ಡಾಲರ್​ ಮೌಲ್ಯದ ಹೂಡಿಕೆ ಮಾಡಲಿರುವ ಟೆಸ್ಲಾ ಕಂಪೆನಿಯು ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.

Teslas entry would drive infrastructure development and job creation

author img

By ETV Bharat Karnataka Team

Published : Apr 19, 2024, 6:03 PM IST

ನವದೆಹಲಿ: ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸಲಿರುವ ಹಿನ್ನೆಲೆಯಲ್ಲಿ ಟೆಸ್ಲಾ ಕಂಪೆನಿ ಸಂಸ್ಥಾಪಕ ಎಲೋನ್​ ಮಸ್ಕ್​ ಇನ್ನೆರಡು ದಿನದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ. ಟೆಸ್ಲಾ ಎಲೆಕ್ಟ್ರಿಕ್​ ವಾಹನ (ಇವಿ) ಘಟಕ ಪ್ರವೇಶದಿಂದ ದೇಶದಲ್ಲಿ ಮೂಲಸೌಕರ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ಮೋದಿ ಅವರೊಂದಿಗೆ ಟೆಸ್ಲಾ ಮತ್ತು ಸ್ಪೇಸ್​​ ಎಕ್ಸ್​​ ಸಿಇಒ ಎಲೋನ್​ ಮಸ್ಕ್​ 2ರಿಂದ 3 ಬಿಲಿಯನ್​ ಡಾಲರ್ ಮೌಲ್ಯದ ಹೂಡಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಮಸ್ಕ್​ ಅವರ ಕೈಗೆಟುಕುವ ದರದ ಸಾಟಲೈಟ್​ ಇಂಟರ್​ನೆಟ್​​ ಸೇವೆ ಸ್ಟಾರ್​ಲಿಂಕ್​​ ಪ್ರವೇಶವನ್ನು ಘೋಷಿಸುವ ಸಾಧ್ಯತೆ ಇದೆ.

ಟೆಸ್ಲಾ ಪ್ರವೇಶವು ದೇಶಿಯ ಇವಿ ಉದ್ಯಮದಲ್ಲಿ ಹಲವು ಅವಕಾಶಗಳನ್ನು ಒದಗಿಸಲಿದೆ ಎಂದು ಇವಿ ಚಾರ್ಜಿಂಗ್​ ಮೂಲಸೌಕರ್ಯ ಒದಗಿಸುವ ಸ್ಟಟಿಕ್​ನ ಸಿಇಒ ಮತ್ತು ಸಂಸ್ಥಾಪಕರಾದ ಅಕ್ಷಿತ್​ ಬನ್ಸಾಲ್​ ತಿಳಿಸಿದ್ದಾರೆ. ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಯು ಟೆಕ್​ ಒಲವು ಹೊಂದಿರುವ ಗ್ರಾಹಕರನ್ನು ಸೆಳೆಯಲಿದೆ. ಇದರ ಜೊತೆಗೆ ಸುಸ್ಥಿರ ಸಾರಿಗೆ ಪರಿಹಾರವೂ ಹೆಚ್ಚಲಿದೆ ಎಂದು ಅವರು ವಿವರಿಸಿದರು.

ಇದಕ್ಕಿಂತ ಹೆಚ್ಚಾಗಿ ಟೆಸ್ಲಾ ಹೊಸ ಆವಿಷ್ಕಾರ ಮತ್ತು ಅಭಿವೃದ್ಧಿ ತಂತ್ರಜ್ಞಾನಗಳು ಗುಣಮಟ್ಟಗಳು ಭಾರತೀಯ ಗ್ರಾಹಕರನ್ನು ಸೆಳೆಯಲಿದೆ. ಭವಿಷ್ಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ 20 ಲಕ್ಷದಲ್ಲಿ ಟೆಸ್ಲಾ ಇವಿ ಲಭ್ಯವಾಗುವ ಸಾಧ್ಯತೆ ಇದೆ.

ದ್ವಿಚಕ್ರ ಉತ್ಪಾದಕರಾದ ಇಬೈಕ್​ಗೊ ಸಹ ಸಂಸ್ಥಾಪಕರಾದ ಹರಿ ಕಿರಣ್​ ಮಾತನಾಡಿ, ಟೆಸ್ಲಾ ಪ್ರವೇಶವು ದೇಶದ ಇವಿ ಉದ್ಯಮದ ಮೇಲೆ ಗಮನಾರ್ಹ ಪ್ರಾಮುಖ್ಯತೆ ಹೊಂದಿದೆ ಎಂದು ತಿಳಿಸಿದರು.

ಜಾಗತಿಕ ಬ್ರ್ಯಾಂಡ್​ ಭಾರತಕ್ಕೆ ಪ್ರವೇಶ ಮಾಡುವುದರಿಂದ ಇವಿ ಮಾರುಕಟ್ಟೆ ಮುನ್ನಡೆಸುವ ಜೊತೆಗೆ ವಿಸ್ತರಣೆಗೆ ಕಾರಣವಾಗಲಿದೆ. ಭಾರತದಲ್ಲಿ 2030ರ ಹೊತ್ತಿಗೆ ಮಾರುಕಟ್ಟೆ ಮೌಲ್ಯ ಶೇ.40ರಷ್ಟು ಹೆಚ್ಚಲಿದೆ. ಈ ಬದಲಾವಣೆಯ ಫಲಿತಾಂಶವು ಉತ್ಪಾದನೆ ಮತ್ತು ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಎದುರು ನೋಡುತ್ತಿದ್ದೇನೆ: ಟೆಸ್ಲಾ ಸಿಇಒ ಎಲೋನ್ ಮಸ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.