ಹೈದರಾಬಾದ್: ರಾಜ್ಯ ಸೇರಿದಂತೆ ದೇಶಾದ್ಯಂತ ಬಿಸಿಲಿನ ಝಳ ಹೆಚ್ಚಾಗಿದೆ. ಈ ರಣ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಬೇಸಿಗೆಯ ತಾಪದ ಪರಿಣಾಮ ಮನುಷ್ಯರಷ್ಟೇ ಅಲ್ಲ, ನಾವು ಬಳಸುವ ಸ್ಮಾರ್ಟ್ ಫೋನ್ ಮೇಲೂ ಬೀರುತ್ತದೆ. ಹೌದು, ಬೇಸಿಗೆ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ತುಂಬಾ ಬಿಸಿಯಾಗುತ್ತವೆ. ಹೆಚ್ಚು ಕಾಲ ಬ್ರೌಸ್ ಮಾಡಿದಾಗ ಅಥವಾ ಗೇಮ್ ಆಡಿದಾಗ ಫೋನ್‌ನ ಹಿಂಭಾಗದ ಫಲಕವು ಬಿಸಿಯಾಗುತ್ತದೆ. ಇದಲ್ಲದೇ, ಬೇಸಿಗೆಯಲ್ಲಿ ಸ್ಮಾರ್ಟ್‌ಫೋನ್ ಚಾರ್ಜಿಂಗ್ ವೇಗದಲ್ಲಿಯೂ ನಾವು ವ್ಯತ್ಯಾಸವನ್ನು ಗಮನಿಸಬಹುದು. ಬೇರೆ ಋತುವಿಗೆ ಹೋಲಿಸಿದರೆ ಬೇಸಿಗೆ ಕಾಲದಲ್ಲಿ ಚಾರ್ಜಿಂಗ್ ವೇಗವು ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಚಾರ್ಜಿಂಗ್ ವೇಗ ಏಕೆ ಕಡಿಮೆಯಾಗುತ್ತದೆ?. ಬೇಸಿಗೆ ಮತ್ತು ಚಾರ್ಜಿಂಗ್ ನಡುವಿನ ಸಂಬಂಧವೇನು? ಎಂಬ ಪ್ರಶ್ನಗೆ ಉತ್ತರ ಇಲ್ಲಿದೆ.
ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಸ್ಮಾರ್ಟ್ ಫೋನ್‌ಗಳಲ್ಲಿಯೂ ಹೊಸ ಹೊಸ ಫಿಚರ್ಸ್ಗಳು ಲಭ್ಯವಾಗುತ್ತಿವೆ. ಈ ಮೂಲಕ ಫೋನ್ಗಳು ಪವರ್ಫುಲ್ ಆಗುತ್ತಿವೆ. ಇದಲ್ಲದೇ, ಫೋನ್ಗಳಲ್ಲಿ ವೇಗ ಮತ್ತು ಕಾರ್ಯಕ್ಷಮತೆಯಲ್ಲಿಯೂ ಅನೇಕ ಬದಲಾವಣೆಗಳಿವೆ. ಡಿಸ್‌ಪ್ಲೇ ಬ್ರೈಟ್ನೆಸ್ ಕೂಡ ಉತ್ತಮವಾಗಿದೆ. ಈ ಹಿಂದೆ ಸನ್‌ಲೈಟ್‌ಗೆ ಮುಂದೆ ಸ್ಮಾರ್ಟ್‌ಫೋನ್ ತೆಗೆದರೆ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದರೆ, ಈಗ ಡಿಸ್‌ಪ್ಲೇ ಬ್ರೈಟ್ನೆಸ್ ಸುಧಾರಿಸಿದೆ. ಇವೆಲ್ಲವೂ ಸ್ಮಾರ್ಟ್ ಫೋನ್ಗಳು ಬಿಸಿಯಾಗುವಂತೆ ಮಾಡುತ್ತಿವೆ. ಇದರೊಂದಿಗೆ BGMI ನಂತಹ ಹೈ ಎಂಡ್ ಗೇಮ್‌ಗಳನ್ನು ಆಡುವುದು ಫೋನ್‌ನ ಬಿಸಿಯಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು ಬೇಸಿಗೆಯ ತಾಪದಿಂದ ಸ್ಮಾರ್ಟ್‌ಫೋನ್‌ಗಳು ವೇಗವಾಗಿ ಬಿಸಿಯಾಗುತ್ತವೆ.
ಚಾರ್ಜಿಂಗ್ ವೇಗ ಕಡಿಮೆಯಾಗುವುದೇಕೆ?: ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಯೊಂದಿಗೆ ಬ್ಯಾಟರಿ ಚಾರ್ಜಿಂಗ್ ವೇಗವು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಸದ್ಯ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡುವ ತಂತ್ರಜ್ಞಾನವೂ ಲಭ್ಯವಿದೆ. ಜೊತೆಗೆ ಶಾಖದಿಂದ ಫೋನ್ ಹಾಳಾಗುವುದನ್ನು ತಡೆಯಲು ಸಾಧ್ಯವಿದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಸೆನ್ಸರ್‌ಗಳು ಫೋನ್ ಬಿಸಿಯಾಗಿರುವುದನ್ನು ಪತ್ತೆ ಮಾಡುತ್ತದೆ. ಆ ಮೂಲಕ ಅವು ಫೋನ್ ಚಾರ್ಜಿಂಗ್ ವೇಗವನ್ನು ಕಡಿಮೆ ಮಾಡುತ್ತವೆ.
ಕೆಲವೊಮ್ಮೆ ತಾಪಮಾನವು ಸಾಮಾನ್ಯ ಸ್ಥಿತಿಗೆ ಮರಳುವವರೆಗೂ ಸ್ಮಾರ್ಟ್‌ಫೋನ್ ಸಂಪೂರ್ಣವಾಗಿ ಚಾರ್ಜ್ ಆಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಫೋನ್‌ನ ಶಾಖವನ್ನು ತಣ್ಣಗಾಗಿಸಲು ಬ್ಯಾಕ್ ಕೇಸ್ ಅನ್ನು ತೆಗೆದುಹಾಕಬೇಕು. ನೀವು ವೈರ್ ಲೆಸ್ ಚಾರ್ಜರ್ ಬಳಸುತ್ತಿದ್ದರೆ ವೈರ್ ಚಾರ್ಜಿಂಗ್ ಆಯ್ಕೆ ಮಾಡಿಕೊಳ್ಳುವುದು ಈ ಸಮಯದಲ್ಲಿ ಸೂಕ್ತ. ವಿಶೇಷವಾಗಿ ಫೋನ್ ಚಾರ್ಜ್ ಮಾಡುವಾಗ ಗೇಮ್ ಆಡಬಾರದು ಎಂದು ತಾಂತ್ರಿಕ ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಎಐ ತಂತ್ರಜ್ಞಾನ ಬಳಕೆಯಿಂದ ಸಮಯದ ಉಳಿತಾಯ: ಶೇ 94ರಷ್ಟು ವೃತ್ತಿಪರರ ಅಭಿಪ್ರಾಯ - AI in Workplace