ETV Bharat / technology

ಉಚಿತ ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ? ಇಲ್ಲಿದೆ ಸುಲಭ ವಿಧಾನ - Free e PAN Card

Free Instant e-PAN: ನೀವು ಹೊಸ ಪ್ಯಾನ್ ಕಾರ್ಡ್‌ಗಾಗಿ ಆಫ್‌ಲೈನ್‌ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಈಗ ಸುಲಭ. PAN ಕಾರ್ಡ್‌ಗೆ ಈ ರೀತಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಕುರಿತು ಹಂತ-ಹಂತವಾಗಿ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ. ಇದನ್ನು ಅನುಸರಿಸಿ ಪ್ಯಾನ್​ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಬಹುದು. ಮೊದಲಿಗೆ ಉಚಿತ Instant e-PAN ಪಡೆಯುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.

HOW TO APPLY EPAN CARD  EPAN APPLY DETAILS  EPAN APPLY FOR FREE  ONLINE EPAN CARD
ಇ-ಪ್ಯಾನ್ ಕಾರ್ಡ್‌ (ETV Bharat)
author img

By ETV Bharat Karnataka Team

Published : Sep 5, 2024, 10:23 AM IST

Updated : Sep 5, 2024, 10:52 AM IST

Free Instant e-PAN: ನೀವು ಪ್ಯಾನ್ ಕಾರ್ಡ್ ಮಾಡಲು ಯೋಚಿಸುತ್ತಿದ್ದರೆ ಅಥವಾ ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಆದಾಯ ತೆರಿಗೆ ಇಲಾಖೆ ಹೊಸ ಯೋಜನೆ ರೂಪಿಸುತ್ತಿದೆ. ಇದರಲ್ಲಿ ಬಳಕೆದಾರರು Instant e-PAN ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದು. ಈ Instant e-PAN ಯಾರಿಗೆಲ್ಲ ಉಚಿತವಾಗಿ ದೊರೆಯಲಿದೆ ಮತ್ತು ಇದನ್ನು ಹೇಗೆ ಅಪ್ಲೈ ಮಾಡುವುದು ಎಂಬುದನ್ನು ತಿಳಿಯೋಣ.

ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ ನೀವು Instant e-PANಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಉಚಿತ ಇ-ಪ್ಯಾನ್‌ನ ಪ್ರಯೋಜನವನ್ನು ಇನ್ನೂ ಪ್ಯಾನ್ ಹೊಂದಿಲ್ಲದ ಮತ್ತು ವಯಸ್ಕ ವೈಯಕ್ತಿಕ ತೆರಿಗೆದಾರರು ಮಾತ್ರ ಪಡೆಯಬಹುದು. Instant e-PAN ಕೇವಲ ಡಿಜಿಟಲ್ ಪ್ಯಾನ್ ಕಾರ್ಡ್ ಆಗಿದೆ. ನೀವು ಭೌತಿಕ ಪ್ಯಾನ್ ಕಾರ್ಡ್ ಪಡೆಯಲು ಬಯಸಿದರೆ NSDL ಅಥವಾ UTIITSL ವೆಬ್‌ಸೈಟ್ ಮೂಲಕ ಅನ್ವಯವಾಗುವ ಶುಲ್ಕ ಪಾವತಿಸಿ ಪಡೆಯಬೇಕಾಗುತ್ತದೆ.

Free Instant e-PAN ಅರ್ಜಿ ಸಲ್ಲಿಸುವ ವಿಧಾನ:

ಹಂತ 1: ಇ-ಫೈಲಿಂಗ್ ಪೋರ್ಟಲ್ ಪೇಜ್​ಗೆ ಭೇಟಿ ನೀಡಿ ಮತ್ತು Quick Links ವಿಭಾಗದಲ್ಲಿ "Instant e-PAN" ಮೇಲೆ ಕ್ಲಿಕ್ ಮಾಡಿ..

ಹಂತ 2: ಇ-ಪ್ಯಾನ್ ಪೇಜ್​ನಲ್ಲಿ 'Get New e-PAN' ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 3: Get New e-PAN ಪೇಜ್​ನಲ್ಲಿ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆ ನಮೂದಿಸಿ. ಆ ಚೆಕ್‌ಬಾಕ್ಸ್ ಅನ್ನು ನಾನು ದೃಢೀಕರಿಸುತ್ತೇನೆ ಆಯ್ಕೆಮಾಡಿ ಮತ್ತು 'Continue' ಮೇಲೆ ಕ್ಲಿಕ್ ಮಾಡಿ.

ಹಂತ 4: OTP ಮೌಲ್ಯೀಕರಣ ಪೇಜ್​ನಲ್ಲಿ, 'I have read the consent terms and agree to proceed further' ಎಂಬ ಬಾಕ್ಸ್​ ಆಯ್ಕೆ ಮಾಡಿ ಮತ್ತು 'Continue' ಮೇಲೆ ಕ್ಲಿಕ್ ಮಾಡಿ.

ಹಂತ 5: ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನೀವು 6 ಅಂಕಿಗಳ OTP ಸ್ವೀಕರಿಸುತ್ತೀರಿ. ಆ ಒಟಿಪಿಯನ್ನು ನಮೂದಿಸಿ, UIDAI ಜೊತೆಗೆ ಆಧಾರ್ ವಿವರಗಳನ್ನು ಮೌಲ್ಯೀಕರಿಸಲು ಚೆಕ್‌ಬಾಕ್ಸ್ ಆಯ್ಕೆ ಮಾಡಿ. 'Continue' ಮೇಲೆ ಕ್ಲಿಕ್ ಮಾಡಿ.

ಹಂತ 6: Validate Aadhaar Details ಪೇಜ್​ನಲ್ಲಿ, I Accept that ಎಂಬ ಚೆಕ್‌ಬಾಕ್ಸ್ ಆಯ್ಕೆ ಮಾಡಿ ಮತ್ತು 'Continue' ಕ್ಲಿಕ್ ಮಾಡಿ.

ಹಂತ 7: ಇದಾದ ನಂತರ Acknowledgement Number ನಿಮಗೆ ಸ್ಕ್ರೀನ್​ ಮೇಲೆ ಕಾಣಿಸುತ್ತದೆ. ಹೆಚ್ಚಿನ ಉಲ್ಲೇಖಕ್ಕಾಗಿ Acknowledgement Number ಅನ್ನು ಬರೆದಿಟ್ಟುಕೊಳ್ಳುವುದು ಉತ್ತಮ. ಬಳಿಕ ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನೀವು ಅರ್ಜಿ ಸಲ್ಲಿಸಿರುವ ಸಂದೇಶ ಸ್ವೀಕರಿಸುತ್ತೀರಿ.

ಈ ಮೇಲಿನ ವಿಧಾನದಿಂದ ನೀವು ಸುಲಭವಾಗಿ ಇ-ಪ್ಯಾನ್​ಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಮಹಿಳೆಯರ ಗಮನಕ್ಕೆ; ಇವುಗಳು ನಿಮ್ಮ ಬಳಿಯಿದ್ರೆ, ನೀವು ಎಲ್ಲಿಗೆ ಹೋದರೂ ಸುರಕ್ಷಿತ! - Women Safety Gadgets

Last Updated : Sep 5, 2024, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.