SpaceX Dragon Returns: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು ಎಂಟು ತಿಂಗಳ ಕಾಲ ಕಳೆದ ನಂತರ ನಾಲ್ಕು ಗಗನಯಾತ್ರಿಗಳು ಭೂಮಿಗೆ ಮರಳಿದರು. ನಾಸಾದ ಸ್ಪೇಸ್ ಎಕ್ಸ್ ಕ್ರ್ಯೂ - 8 ಮಿಷನ್ ಶುಕ್ರವಾರ ಬೆಳಗ್ಗೆ ಮೆಕ್ಸಿಕೋ ಕೊಲ್ಲಿಯಲ್ಲಿ ಯಶಸ್ವಿಯಾಗಿ ಇಳಿಯಿತು. ಸ್ಪೇಸ್‌ಎಕ್ಸ್ ಕ್ರ್ಯೂ-8 ಮಿಷನ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 233 ದಿನಗಳ ಪ್ರಯಾಣ ಪೂರ್ಣಗೊಳಿಸಿತು.
ಎಂಡೀವರ್ ಹೆಸರಿನ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ವಿಸ್ತೃತ ಕಾರ್ಯಾಚರಣೆ ನಂತರ ನಾಲ್ಕು ಗಗನಯಾತ್ರಿಗಳ ಸಿಬ್ಬಂದಿಯೊಂದಿಗೆ ಮರಳಿದೆ. ಮಾರ್ಚ್ 4, 2024 ರಂದು ಉಡಾವಣೆಯಾದ ಕ್ರ್ಯೂ- 8, ನಾಸಾ ಗಗನಯಾತ್ರಿಗಳಾದ ಮ್ಯಾಥ್ಯೂ ಡೊಮಿನಿಕ್, ಮೈಕೆಲ್ ಬ್ಯಾರೆಟ್, ಜೀನೆಟ್ ಎಪ್ಸ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗ್ರೆಬೆಂಕಿನ್ ಅವರನ್ನು ಒಳಗೊಂಡಿತ್ತು.
Splashdown. Welcome home, #Crew8! After a science mission of over seven months living and working on the @Space_Station, the crew of four are back on Earth. pic.twitter.com/6tvEBQRgLI
— NASA (@NASA) October 25, 2024
ಅಲ್ಪಾವಧಿಗೆ ಉಡ್ಡಯನ, ನಂತರ ವಿಸ್ತರಣೆ: ಕಾರ್ಯಾಚರಣೆಯನ್ನು ಆರಂಭದಲ್ಲಿ ಅಲ್ಪಾವಧಿಯ ಉಡಾವಣಾ ಅವಧಿಗೆ ಯೋಜಿಸಲಾಗಿತ್ತು. ಆದರೆ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ವಿಳಂಬದಿಂದಾಗಿ ಅದನ್ನು ವಿಸ್ತರಿಸಲಾಯಿತು. ಇದಕ್ಕೆ ತುರ್ತು ಮೌಲ್ಯಮಾಪನ ಮತ್ತು ಸಿಬ್ಬಂದಿ ಬೆಂಬಲದ ಅಗತ್ಯವಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದಾಗ, ಕ್ರ್ಯೂ-8 ಮಿಷನ್ ಮಾನವನ ಆರೋಗ್ಯ, ವಿಜ್ಞಾನ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 200 ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿತು.
ಮೆದುಳಿನ ಅಂಗಗಳ ಮೇಲಿನ ಪ್ರಭಾವ, ಸಸ್ಯಗಳ ಬೆಳವಣಿಗೆ ಬಗ್ಗೆ ಅಧ್ಯಯನ: ಗಗನಯಾತ್ರಿಗಳು ಪ್ರಾಥಮಿಕವಾಗಿ ಮೆದುಳಿನ ಅಂಗಗಳು ಮತ್ತು ಸಸ್ಯಗಳ ಬೆಳವಣಿಗೆಯ ಮೇಲೆ ಮೈಕ್ರೊಗ್ರಾವಿಟಿಯ ಪರಿಣಾಮಗಳ ಕುರಿತು ಸಂಶೋಧನೆ ನಡೆಸಿದರು. ಇದು ಜೀವಂತ ಜೀವಿಗಳು ಬಾಹ್ಯಾಕಾಶದ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಮಿಲ್ಟನ್ ಚಂಡಮಾರುತ ಮತ್ತು ಮೆಕ್ಸಿಕೋ ಲ್ಯಾಂಡಿಂಗ್ ಪ್ರದೇಶದಲ್ಲಿ ಇತರ ಬಿರುಗಾಳಿಗಳಿಂದ ಉಂಟಾದ ಕಳಪೆ ಹವಾಮಾನದ ಕಾರಣದಿಂದಾಗಿ ಸ್ಪ್ಲಾಶ್‌ಡೌನ್ ಆರಂಭದಲ್ಲಿ ವಿಳಂಬವಾಯಿತು. ಆದರೂ ನಂತರ ಅವರು ಸುರಕ್ಷಿತವಾಗಿ ಮರಳಲು ಗ್ರೀನ್ ಸಿಗ್ನಲ್ ದೊರೆತಿದೆ.
Dragon splashes down off the coast of Florida with the Crew-8 astronauts after spending 235 days on-orbit and completing SpaceX’s 13th human spaceflight mission pic.twitter.com/LR6uTLWX2F
— SpaceX (@SpaceX) October 25, 2024
ಎಂಡೀವರ್ ಕ್ಯಾಪ್ಸುಲ್ ಸುಮಾರು 3:29 EDT ಕ್ಕೆ ಯಶಸ್ವಿಯಾಗಿ ಸ್ಪರ್ಶಿಸುವ ಮೊದಲು ಡಿಯೋರ್ಬಿಟ್ ಬರ್ನ್ ಅನ್ನು ಪ್ರದರ್ಶಿಸಿತು. ಲ್ಯಾಂಡಿಂಗ್ ಕಾರ್ಯಾಚರಣೆಯ ನಂತರ ಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಯ ಅಂಗಳ ಸೇರಿದರು. ಸುರಕ್ಷಿತವಾಗಿ ಬಾಹ್ಯಾಕಾಶದಿಂದ ಭೂಮಿಗೆ ಬಂದವರಿಗೆ ನಾಸಾ ಅಧಿಕಾರಿಗಳು ಮತ್ತು ಅವರ ಕುಟುಂಬಗಳು ಸ್ವಾಗತ ಸಿಕ್ಕಿತು.
ಮುಂದಿನ ವರ್ಷ ಭೂಮಿಗೆ ಮರಳಲಿರುವ ವಿಲ್ಮೋರ್, ಸುನಿತಾ ವಿಲಿಯಮ್ಸ್: ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಒಂದು ವಾರದವರೆಗೆ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದ್ರೆ ಅವರ ಪ್ರಯಾಣ ಈಗ 8 ತಿಂಗಳವರಿಗೆ ಮುಂದೂಡಲಾಗಿದ್ದು, ಮುಂದಿನ ವರ್ಷ ಗಗನಯಾತ್ರಿಗಳಿಬ್ಬರು ಭೂಮಿಗೆ ವಾಪಸ್ ಆಗಲಿದ್ದಾರೆ
ಓದಿ; ಸುವಿಧಾ-2 ಆ್ಯಪ್ ಬಿಡುಗಡೆ: ಚುನಾವಣೆ ಸಂಬಂಧಿತ ಎಲ್ಲ ಅನುಮತಿಗಳು ಈಗ ಒಂದೇ ಕಡೆ ಲಭ್ಯ