ETV Bharat / technology

2025ರಲ್ಲಿ ಎಷ್ಟು ಸೂರ್ಯಗ್ರಹಣಗಳು ಸಂಭವಿಸುತ್ತವೆ ಗೊತ್ತಾ? - SURYA GRAHAN 2025 DATE AND TIME

Solar Eclipse: 2025 ರಲ್ಲಿ ಹೊಸ ವರ್ಷದಲ್ಲಿ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ? ಈ ಸೂರ್ಯಗ್ರಹಣ ದೇಶದ ಮೇಲೆ ಯಾವ ಪರಿಣಾಮ ಬೀರಲಿದೆ? ಸೂತಕ್ ಅವಧಿ ಯಾವಾಗ ಇರುತ್ತದೆ? ಎಂಬುದರ ಮಾಹಿತಿ ಇಲ್ಲಿದೆ..

2025 1ST SOLAR ECLIPSE 29 MARCH  SURYA GRAHAN SUTAK KAAL  KNOW WHERE VISIBLE SOLAR ECLIPSE  SOLAR ECLIPSE IN 2025
ಸೂರ್ಯಗ್ರಹಣ (NASA)
author img

By ETV Bharat Tech Team

Published : Nov 30, 2024, 9:57 AM IST

Solar Eclipse in 2025: ಹೊಸ ವರ್ಷ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರತಿಯೊಬ್ಬರೂ ಹೊಸ ವರ್ಷದಲ್ಲಿ ಮುಂಬರುವ ಹಬ್ಬಗಳು ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಕಾತುರರಾಗಿರುತ್ತಾರೆ. ಈಗ ಮುಂಬರುವ ವರ್ಷದಲ್ಲಿ ಸೂರ್ಯ ಗ್ರಹಣ ಯಾವಾಗ ಸಂಭವಿಸಲಿದೆ ಮತ್ತು ಅದರ ಪ್ರಭಾವಗಳ ಬಗ್ಗೆ ತಿಳಿದುಕೊಳ್ಳೋಣ..

ವರ್ಷದ ಮೊದಲ ಸೂರ್ಯಗ್ರಹಣ: 2025 ರ ಮೊದಲ ಸೂರ್ಯಗ್ರಹಣವು ಮಾರ್ಚ್ 29, 2025 ರಂದು ಮಧ್ಯಾಹ್ನ 2:20 ರಿಂದ ಸಂಜೆ 6:13ರ ವರೆಗೆ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ವರ್ಷದ ಎರಡನೇ ಸೂರ್ಯಗ್ರಹಣವು 21 ಸೆಪ್ಟೆಂಬರ್ 2025 ರಂದು ಸಂಭವಿಸುತ್ತದೆ. ಅದೂ ಕೂಡ ಭಾಗಶಃ ಸೂರ್ಯಗ್ರಹಣವಾಗಲಿದೆ.

ಜ್ಯೋತಿಷಿ ಪಂಡಿತ್ ಸುಶೀಲ್ ಶುಕ್ಲಾ ಶಾಸ್ತ್ರಿ ಪ್ರಕಾರ, 2025 ರ ಮೊದಲ ಸೂರ್ಯಗ್ರಹಣ ಮಾರ್ಚ್ 29 ರಂದು ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಇದು ಯಾವುದೇ ಧಾರ್ಮಿಕ ಮಹತ್ವವನ್ನು ಹೊಂದಿರುವುದಿಲ್ಲ ಅಥವಾ ಅದನ್ನು ಯಾವುದೇ ಸೂತಕ ಕಾಲವೆಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರಾಶಿಚಕ್ರದ ಮೇಲೆ ಪರಿಣಾಮ ಬೀರುವುದಿಲ್ಲ. ಆ ದಿನದಂದು ನೀವು ನಿಮ್ಮ ಸಾಮಾನ್ಯ ಜೀವನವನ್ನು ನಡೆಸಬಹುದು ಎಂದು ಮಾಹಿತಿ ನೀಡಿದರು.

ಸೂತಕ ಕಾಲ: ಸೂತಕ ಕಾಲವು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಇದು ಗ್ರಹಣದ ಅವಧಿ ಮುಗಿದ ನಂತರ ಕೊನೆಗೊಳ್ಳುತ್ತದೆ. ಸೂತಕ ಅವಧಿಯು ಗ್ರಹಣ ಗೋಚರಿಸುವ ಸ್ಥಳಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಕಾರಣದಿಂದಾಗಿ ಸೂತಕ ಅವಧಿಯು ಸಹ ಇರುವುದಿಲ್ಲ.

ಈ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆಯೋ, ಆ ದೇಶಗಳಲ್ಲಿ ಸೂತಕ ಅವಧಿಯನ್ನು ಪರಿಗಣಿಸಲಾಗುವುದು. ಅಲ್ಲಿ ಎಲ್ಲಾ ರೀತಿಯ ದೋಷಗಳನ್ನು ಪರಿಗಣಿಸಲಾಗುವುದು ಮತ್ತು ಈ ವೇಳೆ ಎಲ್ಲಾ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. 2024 ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಿದ್ದವು. ಇದರಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಎರಡು ಚಂದ್ರ ಗ್ರಹಣಗಳು ಇವೆ. ಈ ವರ್ಷ ಮೊದಲ ಸೂರ್ಯಗ್ರಹಣವು 8 ಏಪ್ರಿಲ್ 2024 ರಂದು ಸಂಭವಿಸಿತ್ತು. ಆದರೆ ಕೊನೆಯ ಗ್ರಹಣ ಅಂದರೆ ಚಂದ್ರಗ್ರಹಣ 18 ಸೆಪ್ಟೆಂಬರ್ 2024 ರಂದು ಸಂಭವಿಸಿದೆ.

ಓದಿ: ಇಸ್ರೋದೊಂದಿಗೆ ಕೈಜೋಡಿಸಿದ ಇಎಸ್​ಎ - PSLV-XLನಿಂದ ಲಾಂಚ್​ ಆಗಲಿದೆ ಪ್ರೋಬಾ-3 ಮಿಷನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.