ETV Bharat / technology

ನಿಮ್ಮ ಸ್ಮಾರ್ಟ್​ಫೋನ್​ಗಳ ಚಾರ್ಜಿಂಗ್​ ಸ್ಲೋ ಆಗುತ್ತಿದೆಯೇ: ಇದಕ್ಕೆಲ್ಲ ಕಾರಣಗಳೇನು ಗೊತ್ತೇ? - Slow Smartphone Charging - SLOW SMARTPHONE CHARGING

Slow Smartphone Charging: ನೀವೆಲ್ಲರೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿರಬಹುದು. ಆದರೆ ಕಾಲಾನಂತರದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಚಾರ್ಜಿಂಗ್ ಸ್ಲೋ ಆಗುವುದು ಸಹ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಲೋ ಚಾರ್ಜಿಂಗ್ ಸಮಸ್ಯೆ ಏಕೆ ಉದ್ಭವಿಸುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿಯುವ ಪ್ರಯತ್ನ ಮಾಡೋಣ.

REASON OF SLOW SMARTPHONE CHARGING  SMARTPHONE CHARGING  SMARTPHONE CHARGING ISSUE  SMARTPHONE SLOW CHARGING
ನಿಮ್ಮ ಸ್ಮಾರ್ಟ್​ಫೋನ್​ಗಳ ಚಾರ್ಜಿಂಗ್​ ಸ್ಲೋ ಆಗುತ್ತಿದೆಯೇ (ETV Bharat)
author img

By ETV Bharat Tech Team

Published : Oct 1, 2024, 12:44 PM IST

Slow Smartphone Charging: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ. ಜನರು ದೈನಂದಿನ ಜೀವನದಲ್ಲಿ ಅವುಗಳನ್ನು ನಿರಂತರವಾಗಿ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ದುಬಾರಿ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಜನರು ಅವುಗಳನ್ನು ಖರೀದಿಸುತ್ತಾರೆ. ಆದರೆ ಗಮನಿಸಬೇಕಾದ ವಿಷಯವೆಂದರೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಲಾನಂತರದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಅವುಗಳಲ್ಲಿ ಸಾಮಾನ್ಯವಾದ ಸಮಸ್ಯೆ ಎಂದರೆ ಅದು ನಿಧಾನವಾಗಿ ಚಾರ್ಜ್​ ಆಗುವುದು.

ಸಾಮಾನ್ಯವಾಗಿ ಮೂರರಿಂದ ನಾಲ್ಕು ವರ್ಷಗಳ ಕಾಲ ಸ್ಮಾರ್ಟ್ ಫೋನ್ ಬಳಸಿದಾಗ ಅದರ ಬ್ಯಾಟರಿ ಬ್ಯಾಕಪ್ ಕಡಿಮೆಯಾಗುತ್ತದೆ. ಇದರೊಂದಿಗೆ, ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ ನಿಧಾನವಾಗುತ್ತದೆ ಎಂಬ ಸಮಸ್ಯೆಯನ್ನು ಜನರು ಅನೇಕ ಬಾರಿ ಎದುರಿಸುತ್ತಾರೆ. ಬ್ಯಾಟರಿ ಬ್ಯಾಕಪ್ ಕಡಿಮೆಯಿದ್ದರೆ ಹೊಸ ಬ್ಯಾಟರಿಯಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ ಚಾರ್ಜಿಂಗ್ ನಿಧಾನವಾಗಿದ್ದರೆ ಈ ಸಮಸ್ಯೆ ಏಕೆ ಸಂಭವಿಸುತ್ತಿದೆ ಮತ್ತು ಅದನ್ನು ಹೇಗೆ ಎದುರಿಸಬೇಕೆಂದು ಜನರಿಗೆ ಅರ್ಥವಾಗುವುದಿಲ್ಲ. ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ ಏಕೆ ನಿಧಾನವಾಗುತ್ತದೆ ಮತ್ತು ಅದರ ಹಿಂದಿನ ಕಾರಣಗಳೇನು ಎಂಬುದರ ಬಗ್ಗೆ ಅರಿತುಕೊಳ್ಳೋಣ.

ಚಾರ್ಜಿಂಗ್ ಏಕೆ ನಿಧಾನವಾಗುತ್ತೆ?: ಸ್ಮಾರ್ಟ್‌ಫೋನ್ ನಿಧಾನವಾಗಿ ಚಾರ್ಜ್ ಆಗಲು ಹಲವು ಕಾರಣಗಳಿರಬಹುದು. ಇವುಗಳಲ್ಲಿ ಸಾಮಾನ್ಯ ಕಾರಣವೆಂದರೆ ದುರ್ಬಲ ಅಥವಾ ಹಾನಿಗೊಳಗಾದ ವಿದ್ಯುತ್ ಮೂಲ. ಇದಲ್ಲದೇ ವೈರ್ ಲೆಸ್ ಚಾರ್ಜಿಂಗ್ ಮಾಡಿದರೂ ಚಾರ್ಜಿಂಗ್ ನಿಧಾನವಾಗುತ್ತದೆ. ಚಾರ್ಜಿಂಗ್ ಪೋರ್ಟ್‌ನಲ್ಲಿ ಕಸ ಸಂಗ್ರಹವಾಗುವುದು ಸಹ ಇದಕ್ಕೆ ಕಾರಣವಾಗಿರಬಹುದು.

ಇದರ ಹೊರತಾಗಿ, ಚಾರ್ಜ್ ಮಾಡುವಾಗ ಫೋನ್ ಬಳಸುವುದು, ಅಪ್ಲಿಕೇಶನ್ ಓಪನ್​ ಮಾಡುವುದು, ಹಳೆಯ ಬ್ಯಾಟರಿ ಮತ್ತು ಫೋನ್​ ಬಿಸಿಯಾಗುವುದು ನಿಧಾನವಾದ ಚಾರ್ಜಿಂಗ್​ಗೆ ಕಾರಣವಾಗಬಹುದು. ಇದಲ್ಲದೇ, ನೀವು ಸ್ಮಾರ್ಟ್‌ಫೋನ್‌ನ ಸಾಫ್ಟ್‌ವೇರ್ ಅನ್ನು ಅಪ್​ಡೇಟ್​ ಮಾಡದಿದ್ದರೇ ಚಾರ್ಜಿಂಗ್ ನಿಧಾನವಾಗಬಹುದು. ಅನೇಕ ಬಾರಿ ಸಾಫ್ಟ್‌ವೇರ್ ಅಪ್​ಡೇಟ್​ ಮಾಡದಿದ್ದಾಗ ದೋಷಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಚಾರ್ಜಿಂಗ್ ಸಹ ನಿಧಾನವಾಗಬಹುದು.

ಪರಿಹಾರಗಳು ಯಾವುವು?: ಸ್ಮಾರ್ಟ್‌ಫೋನ್‌ನಲ್ಲಿ ನಿಧಾನವಾದ ಚಾರ್ಜಿಂಗ್ ಅನ್ನು ಸರಿಪಡಿಸಲು, ಈ ಸಮಸ್ಯೆ ಏಕೆ ಉದ್ಭವಿಸುತ್ತದೆ ಎಂಬುದನ್ನು ನೀವು ಮೊದಲು ಕಂಡುಹಿಡಿಯಬೇಕು. ಒಮ್ಮೊಮ್ಮೆ ಚಾರ್ಜಿಂಗ್​ ವೇಳೆ ನೀವು ಅತೀಯಾಗಿ ಫೋನ್​ ಬಳಕೆ ಮಾಡುವುದು, ಬ್ಯಾಕ್​ಗ್ರೌಂಡ್​ ಅಪ್ಲಿಕೇಶನ್​ ಕ್ಲೋಸ್​ ಆಗದಿರುವುದು ಸೇರಿದಂತೆ ಇನ್ನಿತರ ಸಮಸ್ಯೆಗಳ ಇರುತ್ತವೆ. ಇವುಗಳೇ ನಿಮ್ಮ ಫೋನ್​ ಚಾರ್ಜಿಂಗ್​ ಸ್ಲೋ ಆಗುವುದಕ್ಕೆ ಕಾರಣವಾಗಿರಬಹುದು. ಹಾರ್ಡ್​ವೇರ್​ನಲ್ಲಿ ಏನಾದ್ರೂ ಸಮಸ್ಯೆ ಇದ್ದರೆ ನೀವು ಫೋನ್‌ನ ರಿಪೇರಿ ಸೆಂಟರ್​ಗೆ ಹೋಗಿ ಸರಿಪಡಿಸಿಕೊಳ್ಳಬಹುದು.

ಓದಿ: ಇಂದಿನಿಂದ ಪಿಎಂ ಇ - ಡ್ರೈವ್​ ಯೋಜನೆ ಆರಂಭ: ಇವಿ ಖರೀದಿಗಾರರಿಗೆ ಸಿಗಲಿದೆ ಭಾರಿ ಡಿಸ್ಕೌಂಟ್​! - Pm E Drive Scheme

ETV Bharat Logo

Copyright © 2024 Ushodaya Enterprises Pvt. Ltd., All Rights Reserved.