Samsung Galaxy M55s 5G: ಪ್ರಮುಖ ಮೊಬೈಲ್ ತಯಾರಕ ಕಂಪನಿ ಸ್ಯಾಮ್‌ಸಂಗ್ ಮತ್ತೊಂದು ಹೊಸ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು M ಸರಣಿಯ M55s (Samsung Galaxy M55s 5G) ಫೋನ್ ಆಗಿದೆ. ಈ ಹಿಂದೆ M55 ಮತ್ತು F55 ಫೋನ್‌ಗಳನ್ನು ಹೊರತಂದಿದ್ದು, ಸಣ್ಣ ಬದಲಾವಣೆಗಳೊಂದಿಗೆ ಇದೀಗ ಹೊಸ ಫೋನ್ ರಿಲೀಸ್ ಮಾಡಿದೆ.
Samsung Galaxy M55s 5G 8GB+256GB ವೇರಿಯಂಟ್ Sನ ಬೆಲೆ 19,999 ರೂ ಆಗಿದೆ. 12GB RAM ಮತ್ತು 256GB ಸ್ಟೋರೇಜ್ನ ಇನ್ನೂ ಎರಡು ರೂಪಾಂತರಗಳಿದ್ದರೂ, ಅವುಗಳ ಬೆಲೆಗಳನ್ನು ಬಹಿರಂಗಪಡಿಸಿಲ್ಲ. ಅಮೆಜಾನ್, ಸ್ಯಾಮ್‌ಸಂಗ್ ಇಂಡಿಯಾದ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಸೆಪ್ಟಂಬರ್ 26ರಂದು ಸ್ಮಾರ್ಟ್ಫೋನ್ನ ಮಾರಾಟ ಪ್ರಾರಂಭವಾಗಲಿದೆ. ಆಯ್ದ ಬ್ಯಾಂಕ್ ಕಾರ್ಡ್ಗಳ ಮೂಲಕ ಖರೀದಿಸಿದರೆ 2 ಸಾವಿರ ರೂ ರಿಯಾಯಿತಿ ಇದೆ. ಕೋರಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ.

ಫೋನ್‌ನ ವೈಶಿಷ್ಟ್ಯಗಳು: 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. 1000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ನೀಡಲಾಗಿದೆ. ಸ್ನಾಪ್‌ಡ್ರಾಗನ್ 7 ಜನರೇಷನ್ 1 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ.

50MP ಹಿಂಬದಿ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ ಬರುತ್ತದೆ. 8 MP ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮೆರಾ ಮತ್ತು 2 MP ಮ್ಯಾಕ್ರೋ ಕ್ಯಾಮೆರಾ ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳೊಂದಿಗೆ ಏಕಕಾಲದಲ್ಲಿ ವಿಡಿಯೋ ರೆಕಾರ್ಡ್ ಮಾಡಬಹುದು. 5000 mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೇರಿದಂತೆ ಮುಂತಾದ ಸೌಲಭ್ಯಗಳಿವೆ.