SAMSUNG GALAXY M05 LAUNCHED: ಸ್ಯಾಮ್‌ಸಂಗ್ ತನ್ನ M-ಸರಣಿಯ ಇತ್ತೀಚಿನ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Samsung Galaxy M05 ಕಂಪನಿಯ ಹೊಸ ಫೋನ್ ಆಗಿದೆ. ಇದು 4 GB RAM, 64 GB ಸ್ಟೋರೇಜ್ ಮತ್ತು 50MP ಕ್ಯಾಮೆರಾ ಹೊಂದಿದೆ. ಫೋನ್ 5000mAh ಬ್ಯಾಟರಿ ಸಹ ಹೊಂದಿದೆ.
ಭಾರತದಲ್ಲಿ Samsung Galaxy M05 ಬೆಲೆ: Samsung Galaxy M05 ಸ್ಮಾರ್ಟ್‌ಫೋನ್ ಭಾರತದಲ್ಲಿ 4 GB RAM ಮತ್ತು 64 GB ಸ್ಟೋರೇಜ್ ರೂಪಾಂತರಕ್ಕೆ ರೂ 7,999 ಕ್ಕೆ ಬಿಡುಗಡೆಯಾಗಿದೆ. ಫೋನ್ ಮಿಂಟ್ ಗ್ರೀನ್ ಕಲರ್ನಲ್ಲಿ ಮೂಡಿ ಬಂದಿದೆ. ಹ್ಯಾಂಡ್‌ಸೆಟ್ ಸ್ಯಾಮ್‌ಸಂಗ್‌ನ ವೆಬ್‌ಸೈಟ್, ಅಮೆಜಾನ್ ಇಂಡಿಯಾ ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಲು ಲಭ್ಯವಿದೆ.
Samsung Galaxy M05 ವೈಶಿಷ್ಟ್ಯಗಳು: Samsung Galaxy M05 ಸ್ಮಾರ್ಟ್‌ಫೋನ್ 6.74-ಇಂಚಿನ HD+ (720×1,600 ಪಿಕ್ಸೆಲ್‌ಗಳು) PLS LCD ಡಿಸ್ಪ್ಲೇ ಹೊಂದಿದೆ. ಫೋನ್ ಆಕ್ಟಾ-ಕೋರ್ MediaTek Helio G85 ಪ್ರೊಸೆಸರ್‌ನಿಂದ ಚಾಲಿತವಾಗಿದೆ. 4GB RAM, 64GB ಸ್ಟೋರೇಜ್ ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ 1 TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು. ಸ್ಯಾಮ್‌ಸಂಗ್‌ನ RAM ಪ್ಲಸ್ ವೈಶಿಷ್ಟ್ಯದೊಂದಿಗೆ, RAM ಅನ್ನು 8GB ವರೆಗೆ ವಿಸ್ತರಿಸಬಹುದು. ಫೋನ್ ಡ್ಯುಯಲ್ ಸಿಮ್ ಅನ್ನು ಸಪೋರ್ಟ್ ಮಾಡುತ್ತದೆ.
5000mAh ಬ್ಯಾಟರಿ: ಈ ಸ್ಯಾಮ್‌ಸಂಗ್ ಫೋನ್ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಫೋನ್‌ನಲ್ಲಿ ಫೇಸ್ ಅನ್‌ಲಾಕ್ ಸಪೋರ್ಟ್ ಒದಗಿಸಲಾಗಿದೆ. ಹ್ಯಾಂಡ್ಸೆಟ್ ಅಕ್ಸೆಲೆರೊಮೀಟರ್, ಲೈಟ್ ಸೆನ್ಸರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಹೊಂದಿದೆ.
ಕ್ಯಾಮೆರಾ ಸೆಟಪ್: Samsung Galaxy M05 50-ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಸಾಧನವು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಸಂಪರ್ಕಕ್ಕಾಗಿ, ಸಾಧನವು 4G, Wi-Fi 802.11a/b/g/n/ac, GPS, Bluetooth, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.