ನವದೆಹಲಿ: ಓಪನ್ ಎಐ ವಿರುದ್ಧ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಮೊಕದ್ಧಮೆ ಹೂಡಿರುವ ಕುರಿತು ಪ್ರತಿಕ್ರಿಯಿಸಿರುವ ಸ್ಯಾಮ್ ಅಲ್ಟ್ಮಾನ್, ಮಸ್ಕ್ ಸಂಸ್ಥೆ ಸಂಪೂರ್ಣ ಅಧಿಕಾರವನ್ನು ಪಡೆಯುವ ಅಥವಾ ಟೆಸ್ಲಾದೊಂದಿಗೆ ಓಪನ್ ಎಐ ಸೇರಿಸುವ ಉದ್ದೇಶ ಹೊಂದಿದ್ದರು ಎಂದು ಆರೋಪಿಸಿದ್ದಾರೆ.
ಬ್ಲಾಗ್ ಪೋಸ್ಟ್ನಲ್ಲಿ ಈ ಕುರಿತು ತಿಳಿಸಿರುವ ಚಾಟ್ಜಿಪಿಟಿ ನಿರ್ಮಾತೃ, ಸಂಸ್ಥೆಯಿಂದ ಮಸ್ಕ್ ಬಹುಪಾಲು ನಿಯಂತ್ರಣ ಹೊಂದುವ, ಮಂಡಳಿಯ ಮೇಲೆ ನಿಯಂತ್ರಣ ಸಾಧಿಸುವ ಮತ್ತು ಸಿಇಒ ಆಗಬೇಕೆಂಬ ಉದ್ದೇಶ ಹೊಂದಿದ್ದರು ಎಂದು ದೂರಿದ್ದಾರೆ.
ಓಪನ್ಎಐ ಸಹ ಸಂಸ್ಥಾಪಕ ಗ್ರೇಗ್ ಬ್ರೊಕ್ಮ್ಯಾನ್, ಇಲ್ಯಾ ಸುಟ್ಸಕೇವರ್, ಜಾನ್ ಶುಲ್ಮನ್, ಸ್ಯಾಮ್ ಆಲ್ಟ್ಮನ್ ಮತ್ತು ವೋಜ್ಸಿಕ್ ಜರೆಂಬಾ ಹೇಳುವಂತೆ, ಎಲೋನ್ ಮಸ್ಕ್ ಜೊತೆಗೆ ಲಾಭದ ಉದ್ದೇಶದ ಒಪ್ಪಂದಕ್ಕೆ ನಾವು ಒಪ್ಪಲಿಲ್ಲ. ಯಾವುದೇ ವ್ಯಕ್ತಿ ಸಂಪೂರ್ಣವಾಗಿ ಓಪನ್ ಎಐ ಹಿಡಿತ ಸಾಧಿಸುವುದು ನಮ್ಮ ಯೋಜನೆಯ ವಿರುದ್ಧವಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ.
ಈ ಹಿಂದೆ ಓಪನ್ ಎಐ ಮಂಡಳಿ ತೊರೆಯುವಾಗ ಮಸ್ಕ್, ಗೂಗಲ್, ಡೀಪ್ಮೈಂಡ್ಗೆ ಸರಿಯಾದ ಸ್ಪರ್ಧಿ ಬೇಕು ಎಂದು ಹೇಳಿದ್ದರು. ಇದೇ ಕಾರಣಕ್ಕೆ ಅವರು ಮಂಡಳಿಯಿಂದ ಹೊರ ನಡೆದಿದ್ದರು. ಈ ಸಂದರ್ಭದಲ್ಲಿ ನಮ್ಮದೇ ದಾರಿ ಹುಡುಕಲು ಬೆಂಬಲಿಸುವುದಾಗಿ ತಿಳಿಸಿದ್ದರು.
ಓಪನ್ ಎಐ ಆರಂಭದಲ್ಲಿ ಚಾಟ್ಜಿಪಿಟಿ ಲಾಭರಹಿತ ಸಂಸ್ಥೆಯಾಗಿದ್ದಾಗ ಒಂದೆರಡು ವರ್ಷಗಳ ಕಾಲ ಮಸ್ಕ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು. 2018ರಲ್ಲಿ ಸಂಸ್ಥೆಯ ಮಂಡಳಿಯಿಂದ ಹೊರಬಂದರು. ಆದರೆ, ಅವರು ಹೊರಬರಲು ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಕೆಲವು ವರದಿಗಳ ಪ್ರಕಾರ ಚಾಟ್ಜಿಪಿಟಿ ರೀತಿಯಲ್ಲಿಯೇ ಅವವರ ಇತರೆ ಕಂಪನಿಗಳು ಎಐ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿದ್ದರು. ಈ ವೇಳೆ ನಮ್ಮದೇ ದಾರಿ ಹುಡುಕಲು ಬೆಂಬಲಿಸುವುದಾಗಿ ತಿಳಿಸಿದ್ದರು ಎಂದು ವರದಿಯಾಗಿತ್ತು.
ಮಸ್ಕ್ ವಾದವೇನು?: ಸ್ಯಾನ್ ಪ್ರಾನ್ಸಿಸ್ಕೋ ಸುಪೀರಿಯರ್ ಕೋರ್ಟ್ನಲ್ಲಿ ಓಪನ್ ಎಐ ವಿರುದ್ಧ ಮೊಕದ್ದಮೆ ದಾಖಲಿಸಿರುವ ಮಸ್ಕ್, ಓಪನ್ಎಐ ಒಪ್ಪಂದ ಮುರಿದಿದೆ. 2015ರಲ್ಲಿ ನಾವು ಚಾಟ್ಜಿಪಿಟಿ ನಿರ್ಮಾತೃಗೆ ಸಹಾಯ ಮಾಡಿದ್ದೆವು. ಈ ವೇಳೆ ಮಾನವೀಯತೆ ಲಾಭಕ್ಕಾಗಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಲಾಭರಹಿತ ಸಂಸ್ಥೆಯಾಗಿರಲಿದೆ ಎಂದಿದ್ದರು. ಆದರೆ ಇದೀಗ ಸಂಸ್ಥೆಗೆ ಬೆಂಬಲವಾಗಿ ಮೈಕ್ರೋಸಾಫ್ಟ್ ನಿಂತಿದ್ದು, ಒಪ್ಪಂದ ಮುರಿದು ಲಾಭ ನಿರೀಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ ಟೆಸ್ಲಾ ಸಂಸ್ಥಾಪಕ.
ಇದನ್ನೂ ಓದಿ: ಲಾವಾ 'ಬ್ಲೇಜ್ ಕರ್ವ್ 5ಜಿ' ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?