ಮಾಸ್ಕೋ : ರಷ್ಯಾದ ತನ್ನ ಫಾರ್ ಈಸ್ಟರ್ನ್ ಬಾಹ್ಯಾಕಾಶ ಸಂಕೀರ್ಣ (Far Eastern space complex) ದಿಂದ ಹೊಸ ಹೆವಿ-ಲಿಫ್ಟ್ ರಾಕೆಟ್ ಅನ್ನು ಪರೀಕ್ಷಿಸುವ ಎರಡನೇ ಪ್ರಯತ್ನವನ್ನು ರಷ್ಯಾ ಮುಂದೂಡಿದೆ. ವೊಸ್ಟೊಚ್ನಿ (Vostochny) ಬಾಹ್ಯಾಕಾಶ ನಿಲ್ದಾಣದಿಂದ ಅಂಗಾರ-ಎ 5 ರಾಕೆಟ್ ಉಡಾವಣೆಯನ್ನು 0900 ಜಿಎಂಟಿಯ ಯೋಜಿತ ಸಮಯಕ್ಕಿಂತ ಎರಡು ನಿಮಿಷಗಳ ಮೊದಲು ರದ್ದುಪಡಿಸಲಾಯಿತು. ರಾಕೆಟ್ನ ಮುಖ್ಯ ಬ್ಲಾಕ್ನ ಆಕ್ಸಿಡೈಸರ್ ಟ್ಯಾಂಕ್ನಲ್ಲಿನ ಒತ್ತಡ ವ್ಯವಸ್ಥೆಯ ವೈಫಲ್ಯವೇ ಇದಕ್ಕೆ ಕಾರಣ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಆರ್ಐಎ-ನೊವೊಸ್ಟಿ (RIA-Novosti) ಹೇಳಿದೆ.
ಕನಿಷ್ಠ ಒಂದು ದಿನದ ನಂತರ ಮತ್ತೊಮ್ಮೆ ಉಡಾವಣಾ ಪ್ರಯತ್ನ ಮಾಡಲಾಗುವುದು ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ರಾಸ್ ಕಾಸ್ಮೋಸ್ (Roscosmos) ತಿಳಿಸಿದೆ. ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಯು ಆಕ್ಸಿಡೈಸರ್ ಟ್ಯಾಂಕ್ ಒತ್ತಡ ವ್ಯವಸ್ಥೆಯಲ್ಲಿ ದೋಷ ಕಂಡು ಹಿಡಿದಿದ್ದರಿಂದ ಮಂಗಳವಾರದಂದು ಇದನ್ನು ಉಡಾವಣೆ ಮಾಡುವ ಮೊದಲ ಪ್ರಯತ್ನವೂ ವಿಫಲವಾಗಿತ್ತು ಎಂದು ರಾಸ್ ಕಾಸ್ಮೋಸ್ ಮುಖ್ಯಸ್ಥ ಯೂರಿ ಬೊರಿಸೊವ್ ಹೇಳಿದ್ದಾರೆ.
ಸೋವಿಯತ್ ವಿನ್ಯಾಸದ ಪ್ರೋಟಾನ್ ರಾಕೆಟ್ಗಳನ್ನು ಬದಲಿಸಲು ಹೊಸ ಅಂಗಾರ ಶ್ರೇಣಿಯ ರಾಕೆಟ್ಗಳ ಹೆವಿ-ಲಿಫ್ಟ್ ರಾಕೆಟ್ಗಳನ್ನು ತಯಾರಿಸಲಾಗಿದೆ. ಈ ಶ್ರೇಣಿಯ ಹೆವಿ-ಲಿಫ್ಟ್ ಆವೃತ್ತಿಯಾದ ಅಂಗಾರ-ಎ 5 ಇದು ನಾಲ್ಕನೇ ಬಾರಿಯ ಉಡಾವಣಾ ಪ್ರಯತ್ನವಾಗಿತ್ತು. ಈ ಹಿಂದೆ ಮೂರು ಬಾರಿ ವಾಯುವ್ಯ ರಷ್ಯಾದ ಪ್ಲೆಸೆಟ್ಸ್ಕ್ ಉಡಾವಣಾ ಪ್ಯಾಡ್ನಿಂದ ಇವನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು.
1991 ರ ಸೋವಿಯತ್ ಒಕ್ಕೂಟದ ವಿಭಜನೆಯ ನಂತರ ರಷ್ಯಾ ಕಜಕಿಸ್ತಾನದ ಬೈಕೊನೂರ್ ಕಾಸ್ಮೋಡ್ರೋಮ್ ಅನ್ನು ಗುತ್ತಿಗೆಗೆ ಪಡೆದಿದೆ ಮತ್ತು ತನ್ನ ಬಹುತೇಕ ಬಾಹ್ಯಾಕಾಶ ಉಡಾವಣೆಗಳಿಗೆ ಇದೇ ಕಾಸ್ಮೋಡ್ರೋಮ್ ಅನ್ನು ರಷ್ಯಾ ಬಳಸುತ್ತಿದೆ. ಬೈಕೊನೂರ್ ಕಾಸ್ಮೋಡ್ರೋಮ್ಗಾಗಿ ರಷ್ಯಾ ಪ್ರತಿವರ್ಷ ಕಜಕಿಸ್ತಾನಕ್ಕೆ 115 ಮಿಲಿಯನ್ ಡಾಲರ್ ಪಾವತಿ ಮಾಡುತ್ತಿದ್ದು, ಗುತ್ತಿಗೆ ಅವಧಿ 2050 ರವರೆಗೆ ಇದೆ.
ರಾಸ್ ಕಾಸ್ಮೋಸ್ ಬೈಕೊನೂರ್ ಅನ್ನು ಅವಲಂಬಿಸುವುದನ್ನು ಈಗಲೂ ಮುಂದುವರಿಸಿರುವ ಮಧ್ಯೆ ರಷ್ಯಾದ ಅಧಿಕಾರಿಗಳು ಅಂಗಾರ ರಾಕೆಟ್ ಉಡಾವಣೆಗಳಿಗೆ ವೊಸ್ಟೊಚ್ನಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಹೊಸ ವೊಸ್ಟೊಚ್ನಿ ಬಾಹ್ಯಾಕಾಶ ಕೇಂದ್ರದ ನಿರ್ಮಾಣವು ಯೋಜಿಸಿದ್ದಕ್ಕಿಂತ ಹೆಚ್ಚು ಕಾಲಾವಧಿ ತೆಗೆದುಕೊಂಡಿದೆ. ಆದಾಗ್ಯೂ ಇದನ್ನು ಅತ್ಯಂತ ವಿರಳವಾಗಿ ಬಳಸಲಾಗಿದೆ.
47 ವರ್ಷಗಳ ನಂತರ ಮತ್ತೊಮ್ಮೆ ಚಂದ್ರನ ಮೇಲಿಳಿಯುವ ರಷ್ಯಾದ ಚಂದ್ರಯಾನ ಕಳೆದ ಆಗಸ್ಟ್ನಲ್ಲಿ ವಿಫಲವಾಗಿತ್ತು. ರಷ್ಯಾದ ಸೊಯುಜ್ ಬಾಹ್ಯಾಕಾಶ ನೌಕೆ ಕಳೆದ ತಿಂಗಳು ಮೂರು ಸಿಬ್ಬಂದಿಯೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಹಾರಿತ್ತು ಮತ್ತು ಕಳೆದ ವಾರ ಭೂಮಿಗೆ ಮರಳಿದೆ. ಇದರ ಉಡಾವಣೆ ಕೂಡ ತಾಂತ್ರಿಕ ದೋಷದಿಂದಾಗಿ ವಿಳಂಬವಾಗಿತ್ತು.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ M ಸರಣಿಯ ಹೊಸ ಸ್ಮಾರ್ಟ್ಫೋನ್ ಬಿಡುಗಡೆ: ₹__ಆರಂಭಿಕ ಬೆಲೆಯಲ್ಲಿ ಲಭ್ಯ - Samsung Smartphones