ETV Bharat / technology

ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು; 47.1 ಮಿಲಿಯನ್ ಯೂನಿಟ್ ರವಾನೆ!

India Smartphone Market 2024: ದೇಶೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ಅತೀ ವೇಗದ ಬೆಳವಣಿಗೆ ಕಾಣುತ್ತಿದೆ. ಸುಮಾರು 47.1 ಮಿಲಿಯನ್ ಯುನಿಟ್‌ಗಳನ್ನು ರವಾನಿಸುವುದರೊಂದಿಗೆ ಶೇ 9ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

SMARTPHONE INDUSTRY  SMARTPHONE SALES IN INDIA  INDIAN SMARTPHONE MARKET  INDIA SMARTPHONE MARKET
ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು (IANS)
author img

By ETV Bharat Tech Team

Published : 3 hours ago

India Smartphone Market 2024: ಸದ್ಯಕ್ಕೆ ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು. ಈಗಿನ ಪರಿಸ್ಥಿತಿಯಲ್ಲಿ ಇವುಗಳ ಮಾರಾಟ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೀಗಾಗಿ ದೇಶಿಯ ಮೊಬೈಲ್ ಫೋನ್ ತಯಾರಿಕಾ ಕಂಪನಿಗಳು ಕಾಲಕಾಲಕ್ಕೆ ಹೊಸ ಸ್ಮಾರ್ಟ್​ಫೋನ್​ಗಳನ್ನು ತರುವತ್ತ ಗಮನ ಹರಿಸುತ್ತಿವೆ. ಗ್ರಾಹಕರ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಮಾರ್ಕೆಟ್​ ರಿಸರ್ಚ್​ ಸಂಸ್ಥೆ ಕ್ಯಾನಲಿಸ್‌ನ ವರದಿಯ ಪ್ರಕಾರ, ದೇಶೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಗ್ರಾಮೀಣ ಬೇಡಿಕೆ ಮತ್ತು ಮಾನ್ಸೂನ್ ಮಾರಾಟದ ಆರಂಭದಿಂದಾಗಿ ಜುಲೈ - ಸೆಪ್ಟೆಂಬರ್ ಅವಧಿಯಲ್ಲಿ ಭಾರತೀಯ ಸ್ಮಾರ್ಟ್​​ಫೋನ್ ಮಾರುಕಟ್ಟೆ ಶೇ.9ರಷ್ಟು ಬೆಳವಣಿಗೆ ಕಂಡಿದೆ ಎಂದು ಇತ್ತೀಚಿನ ವರದಿ ಬಹಿರಂಗಪಡಿಸಿದೆ. ಈ ಮಟ್ಟಿಗೆ, 47.1 ಮಿಲಿಯನ್ ಯೂನಿಟ್ ಸ್ಮಾರ್ಟ್‌ಫೋನ್‌ಗಳನ್ನು ದೇಶೀಯವಾಗಿ ಉತ್ಪಾದಿಸಿ, ರವಾನಿಸಲಾಗಿದೆ.

ಮಾರುಕಟ್ಟೆಯಲ್ಲಿನ ಟಾಪ್ ಬ್ರ್ಯಾಂಡ್‌ಗಳು ತಮ್ಮ ಪೋರ್ಟ್‌ಫೋಲಿಯೊವನ್ನು ಮಧ್ಯಮ - ಹೈ ಶ್ರೇಣಿಯಲ್ಲಿ ವಿಸ್ತರಿಸುತ್ತಿವೆ. ಹಬ್ಬದ ಮಾರಾಟದ ಸಮಯದಲ್ಲಿ ದಾಸ್ತಾನು ತೆರವುಗೊಳಿಸುವ ಸಾಧ್ಯತೆಯಿದೆ. ಈ ವೇಳೆ ಟಾಪ್-5 ಔಟ್​ ಸೈಡ್​ ಬ್ರ್ಯಾಂಡ್ಸ್​ ಮತ್ತೊಂದು ಸ್ಟ್ರಾಂಗ್​ ಕ್ವಾರ್ಟರ್​ನಲ್ಲಿವೆ. Apple iPhone 15 ನೊಂದಿಗೆ ಗಮನಾರ್ಹ ಪರಿಮಾಣಗಳನ್ನು ಹೆಚ್ಚಿಸಿದೆ. ಸಣ್ಣ ನಗರಗಳಿಂದ ಇವುಗಳಿಗೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ಹಿರಿಯ ವಿಶ್ಲೇಷಕ ಸಂಯಮ್ ಚೌರಾಸಿಯಾ.

Motorola, Google, Nothing ನಂತಹ ಇತರ ಬ್ರ್ಯಾಂಡ್‌ಗಳು ವಿಶಿಷ್ಟ ವಿನ್ಯಾಸ, ಕ್ಲೀನ್ ಯೂಸರ್ ಇಂಟರ್‌ಫೇಸ್ ಮತ್ತು ಚಾನಲ್ ವಿಸ್ತರಣೆ ತಂತ್ರಗಳೊಂದಿಗೆ ತಮ್ಮ ಮಾರಾಟವನ್ನು ಹೆಚ್ಚಿಸುತ್ತಿವೆ. ಈ ಕ್ರಮದಲ್ಲಿ, Vivo ಮೊದಲ ಬಾರಿಗೆ 19 ಶೇಕಡಾ ಮಾರುಕಟ್ಟೆ ಪಾಲು ಮತ್ತು 9.1 ಮಿಲಿಯನ್ ಯುನಿಟ್‌ಗಳ ಸಾಗಣೆಯೊಂದಿಗೆ ಪೋಲ್ ಸ್ಥಾನವನ್ನು ಪಡೆದುಕೊಂಡಿದೆ. Xiaomi ಎರಡನೇ ಸ್ಥಾನದಲ್ಲಿದೆ. ಇದು ತನ್ನ ಬಜೆಟ್ 5G ಶ್ರೇಣಿಯ 7.8 ಮಿಲಿಯನ್ ಯೂನಿಟ್‌ಗಳನ್ನು ರವಾನಿಸಿದೆ. ಇನ್ನು ಸ್ಯಾಮ್‌ಸಂಗ್ 7.5 ಮಿಲಿಯನ್ ಯುನಿಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. OPPO (OnePlus ಹೊರತುಪಡಿಸಿ) 6.3 ಮಿಲಿಯನ್ ಸಾಗಣೆಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರೆ, ರಿಯಲ್ಮೆ 5.3 ಮಿಲಿಯನ್ ಯುನಿಟ್‌ಗಳೊಂದಿಗೆ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ವರದಿಯ ಪ್ರಕಾರ.. ರೀಪ್ಲೆಸ್ಮೆಂಟ್​ ಮತ್ತು ಅಪ್‌ಗ್ರೇಡ್ ಖರೀದಿ ಮಾಡುವವರು ಮಿಟ್​-ಟು-ಹೈ ಎಂಡ್​ ಆಫರ್ಸ್​, ಸ್ಪರ್ಧಾತ್ಮಕ ಟ್ರೇಡ್-ಇನ್ ಡೀಲ್‌ಗಳು ಸೇರಿದಂತೆ ಇತರ ಆಯ್ಕೆಗಳಿಂದ ಹೆಚ್ಚಿನ ಬೆಲೆಯ ಮಾಡೆಲ್​ಗಳ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಇನ್ನು ಬೆಲೆ ಏರಿಕೆಯಿಂದಾಗಿ ದೀಪಾವಳಿ ನಂತರ ಗ್ರಾಹಕರು ಇವುಗಳನ್ನು ಖರೀದಿಸಬೇಕು ಎಂಬ ಆಲೋಚನೆಯಲ್ಲಿದ್ದು, ಎಂಟ್ರಿ ಲೆವೆಲ್​ ಡಿಮ್ಯಾಂಡ್​ ದುರ್ಬಲವಾಗಿದೆ.

ಸಾಮಾನ್ಯವಾಗಿ ದೀಪಾವಳಿ ಋತುವಿನ ಬ್ರ್ಯಾಂಡ್‌ಗಳು ಆಫ್‌ಲೈನ್ ಮಾರಾಟವನ್ನು ಅವಲಂಬಿಸಿವೆ. ವರ್ಷಾಂತ್ಯದ ಇನ್ವಂಟರಿ ಲೆವೆಲ್ಸ್​ ಬಗ್ಗೆ ಆಯಾ ಕಂಪನಿಗಳು ಜಾಗರೂಕರಾಗಿರುತ್ತಾರೆ ಎಂದು ಚೌರಾಸಿಯಾ ಹೇಳಿದ್ದಾರೆ.

ಓದಿ: ಮದರ್​ಬೋರ್ಡ್​ ವೈಫಲ್ಯ, ಗ್ರೀನ್​ ಲೈನ್ಸ್​ ಸಮಸ್ಯೆ, ಉಚಿತ ಪರಿಹಾರಕ್ಕೆ ಮುಂದಾದ OnePlus​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.