ETV Bharat / technology

15 ವರ್ಷ ಹಳೆಯದಾದ ನಿಮ್ಮ ಬೈಕ್ ಇನ್ನೂ 10 ವರ್ಷ ಓಡಬೇಕಾ?: ಹಾಗಾದರೆ ಇಂದೇ ​ರೆಟ್ರೋಫಿಟ್ ಮಾಡಿ! - OLD BIKE INTO AN EV BIKE

ನಿಮ್ಮ 15 ವರ್ಷಗಳ ಬಳಕೆಯ ಹಳೆಯ ಬೈಕ್​ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಿ 10 ವರ್ಷ ಓಡಿಸುವ ಅವಕಾಶ ಇದೆ. ಆದರೆ ಹೇಗೆ, ಇದಕ್ಕೆ ತಗಲುವ ಖರ್ಚು ಎಷ್ಟು? ಎಲ್ಲಾ ಪ್ರಶ್ನೆಗೆ ಇಲ್ಲಿದೆ ಕಂಪ್ಲೀಟ್​​ ಉತ್ತರ.

ಹಳೆಯ ಬೈಕ್​ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ​ರೆಟ್ರೋಫಿಟ್ಟಿಂಗ್​ ನೀತಿ.
ಹಳೆಯ ಬೈಕ್​ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ​ರೆಟ್ರೋಫಿಟ್ಟಿಂಗ್​ ನೀತಿ. (ETV Bharat)
author img

By ETV Bharat Tech Team

Published : Oct 16, 2024, 10:46 AM IST

ಬೆಂಗಳೂರು: ವಾಹನ​​ ಪ್ರಿಯರು 10 - 15 ವರ್ಷಗಳ ಕಾಲ ಸಂಗಾತಿಯಂತೆ ಇದ್ದ ಪ್ರೀತಿಯ ಹಳೆಯ ಬೈಕ್​ನ್ನು ಬಳಸಲಾಗದೇ ಗುಜುರಿಗೆ ಮಾರಿ ಕೊನೆಗೆ ಇಎಮ್​ಐ ಮುಖಾಂತರ ಹೊಸ ಬೈಕ್​ ಖರೀದಿಸುತ್ತಾರೆ. ಆದರೆ ಇನ್ಮುಂದೆ ಸಾಲ - ಸೂಲ ಮಾಡಿ ನೀವು ಹೊಸ ಬೈಕ್​ ಖರೀದಿಸುವ ಅಗತ್ಯವೇ ಇಲ್ಲ. ಏಕೆಂದರೆ ಈಗ ಭಾರತದಲ್ಲಿ ಹಳೆಯ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ರೆಟ್ರೋಫಿಟ್ ಎಂಬ ಹೊಸ ತಂತ್ರಜ್ಞಾನ ಬಂದಿದೆ. ಸದ್ಯ ಈ ಟ್ರೆಂಡ್​​ ನಗರಗಳಲ್ಲಿ ಭಾರಿ ಜನಪ್ರಿಯತೆಗಳಿಸುತ್ತಿದೆ. ಹೆಚ್ಚಿನ ಜನರು ತಮ್ಮ ಹಳೆಯ ಬೈಕ್​ನ್ನು ಮಾರುವ ಬದಲು ಮರುಬಳಕೆ ಮಾಡಲು ಮುಂದಾಗಿದ್ದಾರೆ.

ಕೇಂದ್ರದಿಂದಲೇ ಗ್ರೀನ್​ ಸಿಗ್ನಲ್​: ಕೇಂದ್ರ ಸರ್ಕಾರವು ರೆಟ್ರೋಫಿಟ್ ನೀತಿಗೆ ಅನುಮೋದನೆ ನೀಡಿರುವುದರಿಂದ ನಿಮ್ಮ ಹಳೆಯ ವಾಹನಗಳಿಗೆ ಹೊಸ ಲೈಫ್ ಸಿಗಬಹುದು ಎನ್ನುತ್ತಾರೆ ತಜ್ಞರು. ಮುಖ್ಯವಾಗಿ ಪೆಟ್ರೋಲ್ ಚಾಲಿತ ಬೈಕ್​ಗಳನ್ನು ರೆಟ್ರೋಫಿಟ್ ಮಾಡುವ ಮೂಲಕ ಬ್ಯಾಟರಿ ಬೈಕ್​ಗಳಾಗಿ ಪರಿವರ್ತಿಸಬಹುದು. ಹೀಗೆ ಪರಿವರ್ತಿಸುವ ಬೈಕ್​ಗಳು ಯಾವುದೇ ಸಮಸ್ಯೆ ಇಲ್ಲದೇ ಇನ್ನೂ ಹತ್ತು ವರ್ಷ ಓಡುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಮೊದಲು ಸರಿಯಾದ ಕಂಪನಿಯನ್ನು ಆರಿಸಿ : ಬ್ಯಾಟರಿ ಚಾಲಿತ ಬೈಕುಗಳನ್ನಾಗಿ ಹಳೆಯ ಬೈಕ್​ಗಳನ್ನು ಪರಿವರ್ತಿಸುವ ಮೊದಲು, ರೆಟ್ರೋಫಿಟ್ ಮಾಡಲು ಉತ್ತಮ ಕಂಪನಿಯನ್ನು ಆಯ್ಕೆ ಮಾಡುವುದು ಸೂಕ್ತ. ಆದರೆ, ಅಂತಹ ಕಂಪನಿಯನ್ನು ಪತ್ತೆ ಹಚ್ಚುವುದು ಹೇಗೆ. ಅದಕ್ಕೂ ಮಾರ್ಗವಿದೆ. ರೆಟ್ರೋಫಿಟ್​ ಮಾಡಲು ನೀವು ಆರಿಸಲು ಬಯಸಿರುವ ಕಂಪನಿಯನ್ನು ಆಟೋಮೊಬೈಲ್ ರಿಸರ್ಚ್ ಅಸೋಸಿಯೇಷನ್​ ​​ಆಫ್ ಇಂಡಿಯಾ (ARAI) ಗುರುತಿಸಿದೆಯೇ ಎಂದು ಪರಿಶೀಲಿಸಬೇಕು.

ಏಕೆಂದರೆ ನಿಮ್ಮ ಬೈಕ್​ಗೆ ಅಳವಡಿಸುವ ಬ್ಯಾಟರಿಗಳು ಗುಣಮಟ್ಟವಾಗಿರಬೇಕು. ಹಾಗಾಗಿ ಇಂತಹ ಬ್ಯಾಟರಿಗಳಿಗೆ ARAI ಗುರುತಿಸುವಿಕೆ ಬಹಳ ಮುಖ್ಯ. ARAI ಗುರುತಿಸಿರುವ ಕಂಪನಿಗಳಾದರೆ ಬ್ಯಾಟರಿಗಳ ಮೇಲೆ ಒಂದು ಅಥವಾ ಎರಡು ವರ್ಷಗಳವರೆಗೆ ವಾರಂಟಿಯನ್ನು ಸಹ ನೀಡುತ್ತವೆ. ಇಲ್ಲವಾದರೆ ಬ್ಯಾಟರಿಗಳ ಗುಣಮಟ್ಟ ಹದಗೆಟ್ಟಾಗ ಸ್ಫೋಟಗೊಳ್ಳುವ ಅಪಾಯವಿದೆ. ಎಆರ್​ಎಐ ಪ್ರಮಾಣೀಕರಣ ಹೊಂದಿರುವ ಕಂಪನಿಯ ಬ್ಯಾಟರಿಗಳು ಮಾತ್ರ ಗುಣಮಟ್ಟದ ಗ್ಯಾರಂಟಿ ಹೊಂದಿರುತ್ತದೆ ಎನ್ನುತ್ತಾರೆ ತಜ್ಞರು.

ಎಲೆಕ್ಟ್ರಿಕ್ ಬೈಕ್ ಏಕೆ?: ಎಲೆಕ್ಟ್ರಿಕ್ ಬೈಕ್​ ಪರಿಸರ ಸ್ನೇಹಿ: ಬೆಳಗಾಯಿತೆಂದರೆ ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳದ್ದೇ ಕಾರುಬಾರು. ವಾಹನ ದಟ್ಟಣೆಯ ಜೊತೆಗೆ ಹೊಗೆ ಬಿಡುವ ಇಂಧನಗಳಿಂದ ಮಾಲಿನ್ಯ ಅಧಿಕ. ಕಾರು, ಬಸ್​ಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನ ಬಳಕೆದಾರರು ಹೆಚ್ಚಾಗಿರುತ್ತಾರೆ. ಇದರಿಂದ ಮಾಲಿನ್ಯವೂ ಹಬ್ಬುತ್ತಿದೆ. ಹೀಗಾಗಿ ಹಳೆಯ ಬೈಕ್​ಗಳನ್ನು ಎಲೆಕ್ಟ್ರಿಕ್ ಬೈಕ್​ಗಳನ್ನಾಗಿ ಪರಿವರ್ತಿಸುವುದರಿಂದ ಪರಿಸರಕ್ಕೆ ಉತ್ತಮ.

ಪೆಟ್ರೋಲ್​ ಬೈಕ್​ ಟು ಎಲೆಕ್ಟ್ರಿಕ್.. ವೆಚ್ಚ ಹೇಗೆ : ಹಳೆ ಬೈಕ್​ನ್ನು ಎಲೆಕ್ಟ್ರಿಕ್​ ಬೈಕ್​ ಆಗಿ ಪರಿವರ್ತಿಸಲು ಕಿಟ್ ಮತ್ತು ಬ್ಯಾಟರಿಗೆ ಸುಮಾರು 60 ರಿಂದ 70 ಸಾವಿರ ರೂ. ಇದೆ. ಆದರೆ ಭವಿಷ್ಯದಲ್ಲಿ ಕಿಟ್ ಮತ್ತು ಬ್ಯಾಟರಿಗಳ ಬೆಲೆಗಳು ರೂ. 20 ರಿಂದ 30 ಸಾವಿರದೊಳಗೆ ಸಿಗಲಿದೆ. ಸದ್ಯದ ವರದಿ ಪ್ರಕಾರ ನಗರದಲ್ಲಿ ಬೈಕ್, ಕಾರು ಮತ್ತಿತರ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ. ಪ್ರತಿದಿನ ಮೂರು ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ನಿಮ್ಮ ಬೈಕ್​ಗೆ ಅಳವಡಿಸುವ ವಿವಿಧ ರೀತಿಯ ಬ್ಯಾಟರಿಗಳನ್ನು ಅವಲಂಬಿಸಿ ಹೇಳುವುದಾದರೆ ಬೈಕ್​ ನಿರಂತರವಾಗಿ 50 ರಿಂದ 150 ಕಿಲೋಮೀಟರ್​ಗಳಷ್ಟು ಚಲಿಸುತ್ತದೆ. 100ರಿಂದ 150 ಕಿಲೋಮೀಟರ್ ಸಾಮರ್ಥ್ಯದ ಬ್ಯಾಟರಿ ಬೇಕಾದರೆ 30 ರಿಂದ 35 ಸಾವಿರ ರೂ. ಖರ್ಚು ಮಾಡಬೇಕು ಎಂದು ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ತಜ್ಞರು ವಿವರಿಸಿದ್ದಾರೆ.

ರೆಟ್ರೋ ಫಿಟ್‌ಮೆಂಟ್​ ಎಂದರೇನು?: ರೆಟ್ರೋಫಿಟ್​ ಎಂದರೆ ಸದ್ಯ ಬಳಸುತ್ತಿರುವ ಪೆಟ್ರೋಲ್ ಅಥವಾ ಡೀಸೆಲ್ ಇಂಧನದ ಮೂಲಕ ಚಾಲನೆಯಲ್ಲಿರುವ ವಾಹನಗಳನ್ನು ಬ್ಯಾಟರಿ ಅಳವಡಿಸುವ ಮೂಲಕ ಎಲೆಕ್ಟ್ರಿಕ್​​ ವಾಹನವನ್ನಾಗಿ ಪರಿವರ್ತಿಸುವುದು. ರೆಟ್ರೋಫಿಟ್ ಮಾಡುವಾಗ ವಾಹನದ ಎಂಜಿನ್ ಮತ್ತು ಇತರ ಸಂಬಂಧಿತ ಘಟಕಗಳನ್ನು ಬದಲಾಯಿಸಲಾಗುತ್ತದೆ. ಈ ವಿಧಾನಕ್ಕೆ ರೆಟ್ರೋ ಫಿಟ್‌ಮೆಂಟ್ ಎಂದು ಕರೆಯುತ್ತಾರೆ.

ಇದನ್ನೂ ಓದಿ: ಸಮುದ್ರಕ್ಕೆ ಮರು ಆಮ್ಲಜನಕೀಕರಣ; ಬಾಲ್ಟಿಕ್​ ಸಮುದ್ರದಲ್ಲಿ ನಡೆಯಲಿದೆ ವಿನೂತನ ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.