ಪ್ಯಾರಿಸ್, ಫ್ರಾನ್ಸ್: ಸಮುದ್ರ ಜೀವನದಲ್ಲಿ ಎದುರಾಗುತ್ತಿರುವ ಅದರಲ್ಲೂ ಸಮುದ್ರದಲ್ಲಿನ ಆಮ್ಲಜನಕದ ಸವಕಳಿಯು ಮೀನು ಮತ್ತು ಸಮುದ್ರ ಜೀವಿಗಳ ಕಣ್ಮರೆಗೆ ಕಾರಣವಾಗುತ್ತಿದೆ. ಈ ಕುರಿತು ಅಧ್ಯಯನಕ್ಕಾಗಿ ಯುರೋಪಿಯನ್ ವಿಜ್ಞಾನಿಗಳು ಎರಡು ಸ್ಟಾರ್ಟ್ಅಪ್ ಜೊತೆ ಕೈ ಜೋಡಿಸಿದ್ದಾರೆ.
ಕೊಲಂಬಿಯಾದಲ್ಲಿ ಅಕ್ಟೋಬರ್ 21ರಂದು ನಡೆಯಲಿರುವ ವಿಶ್ವಸಂಸ್ಥೆಯ ಕಾಪ್ ಶೃಂಗಸಭೆಯಲ್ಲಿ ಸಾಗರದ ಆಮ್ಲಜನಕದ ಸವಕಳಿ ಕುರಿತು ಪ್ರಮುಖವಾಗಿ ಚರ್ಚೆಯಾಗಿದೆ. ಈ ನಿಟ್ಟಿನಲ್ಲಿ ಅಧ್ಯಯನಕ್ಕಾಗಿ ಸ್ವೀಡನ್ನಲ್ಲಿನ ಸ್ಟಾಕ್ಹೋಮ್ ಯುನಿವರ್ಸಟಿ ಸಂಶೋಧಕರು ಫ್ರೆಂಚ್ ಉದ್ಯಮ ಕಂಪನಿಗಳಾದ ಲೆಫ್ ಮತ್ತು ಫಿನ್ನಿಶ್ ಸ್ಟಾರ್ಟ್ ಅಪ್ ಫ್ಲೆಕ್ಸನ್ಸ್ ಕಾರ್ಯ ನಿರ್ವಹಿಸಲಿದೆ. ಸಮುದ್ರದಲ್ಲಿ ಜಲಜನಕ ಉತ್ಪಾದಿಸುವ ಮೂಲಕ ಬಾಲ್ಟಿಕ್ ಸಮುದ್ರದಲ್ಲಿ ಮರು ಆಮ್ಲಜನಕ ಉತ್ಪಾದನೆ ಪ್ರಯೋಗ ನಡೆಸಲಿದೆ.
ಸಮುದ್ರ ಜೀವಿಗಳ ಉಳಿವಿಗಾಗಿ ಕ್ರಮ: BOxHy ಯೋಜನೆಯು ಉತ್ತರ ಯುರೋಪಿಯನ್ ದೇಶಗಳ ಗಡಿಯಲ್ಲಿರುವ 9 ಸಮುದ್ರದಲ್ಲಿನ ಆಕ್ಸಿಜನ್ ಪ್ರಮಾಣ ಕುರಿತು ಪರಿಹಾರ ನಡೆಸಲಿದೆ. ಸಾಗರಗಳಲ್ಲಿ ಕರಗಿದ ಆಮ್ಲಜನಕವು ಸಮುದ್ರದ ಜೀವಿಗಳನ್ನು ಉಳಿಸಿಕೊಳ್ಳಲು ಅತ್ಯಗತ್ಯವಾಗಿದೆ. ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾದಲ್ಲಿ ಅದು ನೀರೊಳಗಿನ ಜೀವಿಗಳಿಗೆ ಬದುಕಲು ಸಾಧ್ಯವಾಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸಮುದ್ರದಲ್ಲಿ ಆಮ್ಲಜನಕದ ಕೊರತೆಯುಂಟಾಗಲು ಕಾರಣಗಳೇನು?: ಸಮುದ್ರದಲ್ಲಿ ಆಮ್ಲಜನಕದ ಕೊರತೆ ಉಂಟಾಗಲು ಎರಡು ಪ್ರಮುಖ ಕಾರಣಗಳಿವೆ. ಅದರಲ್ಲಿ ಒಂದು ಹವಾಮಾನ ಬದಲಾವಣೆಯಾಗಿದೆ. ಸಮುದ್ರ ಬೆಚ್ಚಗಾಗುವಿಕೆ ಕೂಡ ಆಮ್ಲಜನಕದ ಕೊರತೆ ಉಂಟು ಮಾಡುತ್ತದೆ. ಸೂಕ್ಷ್ಮಾಣುಗಳಿಗೆ ಬೆಚ್ಚಗಿನ ನೀರಿನಲ್ಲೂ ಆಮ್ಲಜನಕ ಬೇಕಾಗಿದೆ. ಇನ್ನು ಮತ್ತೊಂದು ಕಾರಣ ಎಂದರೆ, ಸಮುದ್ರಕ್ಕೆ ಸೇರುತ್ತಿರುವ ಕಲ್ಮಶಗಳು. ಕೊಳಚೆ ನೀರು, ಕೀಟನಾಶಕ, ಪ್ರಾಣಿಗಳ ತ್ಯಾಜ್ಯಗಳು, ನೈಟ್ರೋಜನ್ ಹೆಚ್ಚಳವೂ ಕೂಡ ಅಧಿಕವಾದ ಆಲ್ಗೆಗೆ ಕಾರಣವಾಗುತ್ತಿದ. ಈ ಅಲ್ಗೆಗಳು ಅಧಿಕ ಇಂಗಾಲದ ಡೈ ಆಕ್ಸೈಡ್ ಉತ್ಪಾದನೆ ಮಾಡಿ, ನೀರಿನಿಂದ ಆಮ್ಲಜನಕವನ್ನು ತೆಗೆದು ಹಾಕುತ್ತಿವೆ.
ಪರಿಸರ ಮರುಭೂಮಿ: ಸೆಂಟ್ರಲ್ ಬಾಲ್ಟಿಕ್ ಕೃಷಿ ಮತ್ತು ಕೈಗಾರಿಕೆ ದೇಶಗಳ ಗಡಿಯಲ್ಲಿನ ಅರೆ ಸುತ್ತುವರಿದ ಸಮುದ್ರ, ವಿಶ್ವದ ಅತಿದೊಡ್ಡ ಸತ್ತ ತಾಣಗಳಲ್ಲಿ ಒಂದಾಗಿದೆ. ಇದು ಮೂಲತಃ ಪರಿಸರ ಮರುಭೂಮಿ ಎಂದು ಹೆಲ್ಸಿಂಕಿ ವಿಶ್ವವಿದ್ಯಾಲಯದ ಆಲ್ಫ್ ನಾರ್ಕೊ ಎಎಫ್ಪಿಗೆ ತಿಳಿಸಿದ್ದಾರೆ.
BOxHy ಯೋಜನೆಯುವ ವಿಶ್ವಸಂಸ್ಥೆಯ 10 ವರ್ಷದ ಯೋಜನೆಯಾದ ಸುಸ್ಥಿರ ಸಾಗರ ಅಭಿವೃದ್ಧಿಗೆ ಬೆಂಬಲ ಪಡೆದುಕೊಂಡಿದೆ. ಯೋಜನೆಯಲ್ಲಿ ಸಾಗರದ ಆಳದಲ್ಲಿ ಅನಿಲರೂಪದ ಆಮ್ಲಜಕನವನ್ನು ಚುಚ್ಚಲಾಗುವುದು. ಈ ತಂತ್ರವನ್ನು ಉತ್ತರ ಅಮೆರಿಕದಲ್ಲಿನ ಕೆಲವು ತಾಜಾನೀರಿನ ಕೆರೆಗಳಿಗೆ ಬಳಕೆ ಮಾಡಲಾಗಿದೆ.
ಆಮ್ಲಜನಕ ಪರಿಸ್ಥಿತಿ ಮರು ನಿರ್ಮಾಣದ ಮೂಲಕ ಬಾಲ್ಟಿಕ್ ಸಮುದ್ರದ ಪರಿಸರದಲ್ಲಿ ದೀರ್ಘ ಕಾಲದಲ್ಲಿ ಹೆಚ್ಚುವರಿಯಾಗಿ ಅನೇಕ ಸಕಾರಾತ್ಮಕ ಪರಿಣಾಮ ಇರಲಿದೆ ಎಂದು ಸ್ಟಾಕ್ಹೋಮ್ ಯುನಿವರ್ಸಿಟಿಯ ಜಾಕೋಬ್ ತಿಳಿಸಿದ್ದಾರೆ.
ದೀರ್ಘಕಾಲದ ಪ್ರಯೋಗ: ಫ್ಲೆಕ್ಸೆನ್ಸ್ ಈ ಯೋಜನೆಯಲ್ಲಿ ಭಾಗಿಯಾಗಿದ್ದು, ಇದು ಸಾಗರದಾಳದಲ್ಲಿ ಆಮ್ಲಜನಕ ನೀಡಲು ಮೂರು ಸಾಧ್ಯತಾ ವಲಯವನ್ನು ಪತ್ತೆ ಮಾಡಲಿದೆ. ಆಮ್ಲಜನಕವನ್ನು ಶುದ್ಧವಾಗಿ ಸ್ಥಳದಲ್ಲಿ ನೀಡಬೇಕು. ಮತ್ತೊಂದು ಸ್ಟಾರ್ಟ್ಅಪ್ ಲೆಫ್, ಎಲೆಕ್ಟ್ರಿಕ್ ಕರೆಂಟ್ ಬಳಸಿ ನೀರಿನಲ್ಲಿನ ಜಲಜನಕ ಮತ್ತು ಆಮ್ಲಜನಕ ಅಣುಗಳನ್ನು ಪ್ರತ್ಯೇಕಗೊಳಿಸಲಿದೆ.
ಈ ಯೋಜನೆಯು ಇನ್ನೂ ಸಿದ್ದತಾ ಹಂತದಲ್ಲಿದೆ. ಹೇಗೆ ಇಂಜೆಕ್ಷನ್ ಕೊಡುವುದು, ಎಷ್ಟು ಪ್ರಮಾಣದಲ್ಲಿ, ಯಾವ ದರದಲ್ಲಿ ಇದನ್ನು ಇಂಜೆಕ್ಟ್ ಮಾಡಬೇಕು ಎಂಬ ವಿಚಾರಗಳು ಇನ್ನು ಅಂತಿಮವಾಗಿಲ್ಲ. ಜೊತೆಗೆ ಫೌನ ಮತ್ತು ಫ್ಲೋರಾ ಮೇಲೆ ಪರಿಣಾಮ ಕುರಿತು ಹೇಗೆ ಮುನ್ನೆಚ್ಚರಿಕೆ ವಹಿಸುವುದು ಎಂದು ನಿರ್ಧರಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಪೈಲಟ್ ಪ್ರಾಜೆಕ್ಟ್ ನಡೆಸಲಾಗುವುದು. ಈ ಯೋಜನೆ 2025ರಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಫ್ಲೆಕ್ಸೆನಾ ತಿಳಿಸಿದೆ.
ಈ ಯೋಜನೆಯ ಮುಖ್ಯ ಗುರಿ, ಆಮ್ಲಜನಕವನ್ನು ನೀಡಿದ ಮೇಲೆ ಪರಿಸರ ಮತ್ತು ಜೀವವೈವಿದ್ಯತೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ನಡೆಸಲಾಗುವುದು. ಇದೊಂದು ಸುದೀರ್ಘ ಯೋಜನೆಯಾಗಿದ್ದು, ಇದಕ್ಕೆ 20 ರಿಂದ 30 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಇದು ಕೃಷಿ ವಲಯ ಮತ್ತು ಅದರ ಕೀಟನಾಟಕಗಳ ಬಳಕೆಯನ್ನು ಆಧಾರಿಸಿರುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗುರುವಿನ ಚಂದ್ರನಲ್ಲಿ ಜೀವಿಗಳಿರುವ ಸಾಧ್ಯತೆ; ಪತ್ತೆಗೆ ಸಜ್ಜಾದ ನಾಸಾ - ಯಾವುದಾ ಉಪಗ್ರಹ?