ನವದೆಹಲಿ: ಸ್ಮಾರ್ಟ್ಫೋನ್ ತಯಾರಕ ತಂತ್ರಜ್ಞಾನ ಕಂಪನಿ ರಿಯಲ್ ಮಿ 2024 ರ ಏಪ್ರಿಲ್ 24 ರಂದು ಭಾರತದಲ್ಲಿ ರಿಯಲ್ ಮಿ ನಾರ್ಜೋ 70 ಎಕ್ಸ್ 5 ಜಿ (Realme Narzo 70X 5G) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಬಿಡುಗಡೆ ಮಾಡಿದ ಟೀಸರ್‌ಗಳ ಪ್ರಕಾರ, ಇದು 12 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಡಿಸ್ ಪ್ಲೇ ಸ್ಮಾರ್ಟ್ ಫೋನ್ ಆಗಿರುತ್ತದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, ಕಂಪನಿಯು ರಿಯಲ್ ಮಿ ನಾರ್ಜೋ 70 ಎಕ್ಸ್‌ನ ಕೆಲ ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಬಹಿರಂಗಪಡಿಸಿದೆ. ಸ್ಮಾರ್ಟ್ಫೋನ್ 120 ಹೆರ್ಟ್ಜ್ ಅಲ್ಟ್ರಾ ಸ್ಮೂತ್ ಡಿಸ್ ಪ್ಲೇ, 45 ವ್ಯಾಟ್ ಸೂಪರ್ ವೂಕ್ ಚಾರ್ಜ್, 5000 ಎಂಎಎಚ್ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಮತ್ತು ಇನ್ನೂ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.
ಬಿಡುಗಡೆಯಾದ ನಂತರ ರಿಯಲ್ ಮಿ ನಾರ್ಜೋ 70 ಎಕ್ಸ್ 5 ಜಿ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಅಮೆಜಾನ್ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಇದು ಈಗಾಗಲೇ ಲಭ್ಯವಿರುವ ರಿಯಲ್ ಮಿ ನಾರ್ಜೋ 60 ಎಕ್ಸ್ ನ ಮುಂದಿನ ಆವೃತ್ತಿಯಾಗಲಿದೆ. ರಿಯಲ್ ಮಿ ನಾರ್ಜೋ 70ಎಕ್ಸ್ 5ಜಿ ಬಿಡುಗಡೆಯ ದಿನಾಂಕ, ಸಮಯ, ವೈಶಿಷ್ಟ್ಯಗಳು, ವಿಶೇಷತೆಗಳು, ಬೆಲೆ, ಮಾರಾಟ ಮತ್ತು ಇತರ ವಿವರಗಳು ಹೀಗಿವೆ:
ಬಿಡುಗಡೆ ದಿನಾಂಕ: ಬುಧವಾರ, ಏಪ್ರಿಲ್ 24, 2024ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆ
ಬೆಲೆ: 12,000 ರೂ.ಗಿಂತ ಕಡಿಮೆ
ರಿಯಲ್ ಮಿ ನಾರ್ಜೋ 70 ಎಕ್ಸ್ 5 ಜಿ ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು:
- 120Hz ಅಲ್ಟ್ರಾ ಸ್ಮೂತ್ ಡಿಸ್ ಪ್ಲೇ
- 45W SUPERVOOC ಚಾರ್ಜ್
- 5000 ಎಂಎಎಚ್ ಬ್ಯಾಟರಿ
- ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್
- 50 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್
- 6.72 ಇಂಚಿನ ಫುಲ್ ಎಚ್ಡಿ+ ಎಲ್ಸಿಡಿ ಡಿಸ್ ಪ್ಲೇ ಜೊತೆಗೆ 120 ಹೆರ್ಟ್ಜ್ ರಿಫ್ರೆಶ್ ರೇಟ್
- ಮೀಡಿಯಾಟೆಕ್ ಡೈಮೆನ್ಸಿಟಿ 6100+ ಎಸ್ಒಸಿಯಿಂದ ಚಾಲಿತ
- 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್
- ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 8 ಎಂಪಿ ಮುಂಭಾಗದ ಕ್ಯಾಮೆರಾ
- 5,000 ಎಂಎಎಚ್ ಬ್ಯಾಟರಿ, 33 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್
ಇದನ್ನೂ ಓದಿ : ರಿಯಲ್ ಮಿ C65 5G ಭಾರತದಲ್ಲಿ ಶೀಘ್ರ ಬಿಡುಗಡೆ: ಬೆಲೆ ಇಷ್ಟು ಕಡಿಮೆ..! - REALME C65 5G