ETV Bharat / technology

ರಿಯಲ್​ ಮಿ C65 5G ಭಾರತದಲ್ಲಿ ಶೀಘ್ರ ಬಿಡುಗಡೆ: ಬೆಲೆ ಇಷ್ಟು ಕಡಿಮೆ..! - REALME C65 5G - REALME C65 5G

Realme C65 ಸ್ಮಾರ್ಟ್​ಫೋನ್ ಭಾರತದಲ್ಲಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

Realme C65 5G Likely to be Launched in India

author img

By ETV Bharat Karnataka Team

Published : Apr 18, 2024, 1:55 PM IST

ನವದೆಹಲಿ : ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ರಿಯಲ್ ಮಿ ಶೀಘ್ರದಲ್ಲೇ ಭಾರತದಲ್ಲಿ ರಿಯಲ್ ಮಿ ಸಿ 65 ನ 5 ಜಿ (Realme C65) ಮಾಡೆಲ್​ನ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ. ಹೊಸ ರಿಯಲ್ ಮಿ ಸಿ 65 5 ಜಿ ಹ್ಯಾಂಡ್ ಸೆಟ್ ದೇಶದಲ್ಲಿ 10,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಈ ಸ್ಮಾರ್ಟ್ ಫೋನ್​ನ ನಿಖರವಾದ ಬಿಡುಗಡೆಯ ದಿನಾಂಕ ಮತ್ತು ಸಮಯವನ್ನು ಕಂಪನಿಯು ದೃಢಪಡಿಸಿಲ್ಲವಾದರೂ, ಈ 5 ಜಿ ಹ್ಯಾಂಡ್ ಸೆಟ್ ನ ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳ ಬಗ್ಗೆ ಹಲವಾರು ಮಾಹಿತಿಗಳು ಬಹಿರಂಗವಾಗಿವೆ.

ಪ್ರಸ್ತುತ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ- ರಿಯಲ್ ಮಿ ಸಿ 65 5 ಜಿ ಮೀಡಿಯಾಟೆಕ್​ನ ಡೈಮೆನ್ಸಿಟಿ 6300 ಎಸ್ಒಸಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು 6.67-ಇಂಚಿನ 120-ಹರ್ಟ್ಜ್ ಎಲ್​ಸಿಡಿ ಟಚ್ ಸ್ಕ್ರೀನ್​ನೊಂದಿಗೆ 625-ನಿಟ್ ಪೀಕ್ ಬ್ರೈಟ್ನೆಸ್​ ಹೊಂದಿರಲಿದೆ. ರಿಯಲ್ ಮಿ ಸಿ 65 5 ಜಿ ಬಗ್ಗೆ ಬಿಡುಗಡೆಯ ದಿನಾಂಕ, ವೈಶಿಷ್ಟ್ಯಗಳು, ವಿಶೇಷತೆಗಳು, ಬೆಲೆ ಮತ್ತು ಇತರ ವಿವರಗಳು ಹೀಗಿವೆ:

ಭಾರತದಲ್ಲಿ ರಿಯಲ್ ಮಿ ಸಿ65 5ಜಿ ಬಿಡುಗಡೆ ದಿನಾಂಕ: ರಿಯಲ್ ಮಿ ಸಿ 65 5 ಜಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ನಿಖರವಾದ ದಿನಾಂಕವನ್ನು ಕಂಪನಿಯು ಇನ್ನೂ ದೃಢಪಡಿಸಿಲ್ಲ.

ಭಾರತದಲ್ಲಿ ರಿಯಲ್ ಮಿ ಸಿ65 5ಜಿ ಬೆಲೆ : ರಿಯಲ್ ಮಿ ಸಿ 65 5 ಜಿ ಯ ನಿಖರವಾದ ಬೆಲೆ ಇನ್ನೂ ತಿಳಿದಿಲ್ಲ. ಆದಾಗ್ಯೂ, ಮೂಲಗಳ ಈ ಹ್ಯಾಂಡ್ ಸೆಟ್ ನ ಬೆಲೆ 10,000 ರೂ.ಗಿಂತ ಕಡಿಮೆ ಇರಬಹುದು.

ರಿಯಲ್​ಮಿ ಸಿ 65 5 ಜಿ: ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು: ರಿಯಲ್ ಮಿ ಸಿ 65 5 ಜಿ ಯ ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳ ಪಟ್ಟಿ ಇಲ್ಲಿದೆ.

  • 6.67-ಇಂಚಿನ 120-ಹರ್ಟ್ಜ್ ಎಲ್​ ಸಿಡಿ ಟಚ್ ಸ್ಕ್ರೀನ್ 625-ನಿಟ್ ಪೀಕ್ ಬ್ರೈಟ್ನೆಸ್​ ನೊಂದಿಗೆ.
  • ಮೀಡಿಯಾಟೆಕ್ ನ ಡೈಮೆನ್ಸಿಟಿ 6300 ಎಸ್ ಒಸಿಯಿಂದ ಚಾಲಿತ.
  • 50 ಎಂಪಿ ಮುಖ್ಯ ಹಿಂಭಾಗದ ಕ್ಯಾಮೆರಾ, 8 ಎಂಪಿ ಸೆಲ್ಫಿ ಸ್ನ್ಯಾಪರ್.
  • 5,000 ಎಂಎಎಚ್ ಬ್ಯಾಟರಿ, 15 ವ್ಯಾಟ್ ವೈರ್ ಡ್ ಚಾರ್ಜಿಂಗ್ ಬೆಂಬಲ.
  • ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್.
  • ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್.
  • 7.89 ಎಂಎಂ ದಪ್ಪ ಮತ್ತು 190 ಗ್ರಾಂ ತೂಕದೊಂದಿಗೆ ನಯವಾದ ವಿನ್ಯಾಸ.
  • 4/64 ಜಿಬಿ, 4/128 ಜಿಬಿ ಮತ್ತು 6/128 ಜಿಬಿ ಸ್ಟೋರೇಜ್ ಮಾದರಿಗಳಲ್ಲಿ ಲಭ್ಯತೆ

ಇದನ್ನೂ ಓದಿ : ಅಂಬುಜಾ ಸಿಮೆಂಟ್ಸ್​ನಲ್ಲಿ ಮತ್ತೆ 8,339 ಕೋಟಿ ರೂ. ಹೂಡಿಕೆ ಮಾಡಿದ ಅದಾನಿ ಗ್ರೂಪ್: ಪಾಲುದಾರಿಕೆ ಶೇ 70ಕ್ಕೆ ಏರಿಕೆ - Ambuja Cements

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.