ETV Bharat / technology

ಪ್ರೈವಸಿ, ದತ್ತಾಂಶ ಭದ್ರತೆಗೆ ಅಪಾಯ: ಎಐ ಅಳವಡಿಕೆಗೆ ಕಂಪನಿಗಳ ಹಿಂದೇಟು

ಗೌಪ್ಯತೆ ಮತ್ತು ದತ್ತಾಂಶ ಭದ್ರತೆಗೆ ಅಪಾಯದ ಕಾರಣದಿಂದ ಬಹುತೇಕ ಕಂಪನಿಗಳು ಎಐ ತಂತ್ರಜ್ಞಾನ ಅಳವಡಿಕೆಗೆ ಹಿಂದೇಟು ಹಾಕುತ್ತಿವೆ ಎಂದು ವರದಿ ಹೇಳಿದೆ.

Over 1 in 4 firms ban GenAI over privacy, data security risks: Report

author img

By ETV Bharat Karnataka Team

Published : Jan 29, 2024, 7:52 PM IST

ನವದೆಹಲಿ: ಗೌಪ್ಯತೆ ಮತ್ತು ದತ್ತಾಂಶ ಭದ್ರತೆಯ ಅಪಾಯಗಳ ಸಂಭವದಿಂದ ಪ್ರತಿ ನಾಲ್ಕು ಕಂಪನಿಗಳ ಪೈಕಿ ಒಂದಕ್ಕಿಂತ ಹೆಚ್ಚು ಕಂಪನಿಗಳು ಜೆಎನ್ ಎಐ ತಂತ್ರಜ್ಞಾನದ ಬಳಕೆಯನ್ನು ನಿರ್ಬಂಧಿಸಿವೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ. ಬಹುತೇಕ ಕಂಪನಿಗಳು ಡೇಟಾ ಗೌಪ್ಯತೆ ಮತ್ತು ಭದ್ರತಾ ಉಲ್ಲಂಘನೆ ಸಾಧ್ಯತೆಯಿಂದಾಗಿ ಜನರೇಟಿವ್ ಎಐ (ಜೆಎನ್ಎಐ) ಬಳಕೆಯನ್ನು ಮಿತಿಗೊಳಿಸುತ್ತಿವೆ ಮತ್ತು ಶೇಕಡಾ 27 ರಷ್ಟು ಜನರು ಅದರ ಬಳಕೆಯನ್ನು ಕನಿಷ್ಠ ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ ಎಂದು 'ಸಿಸ್ಕೊ 2024 ಡೇಟಾ ಪ್ರೈವಸಿ ಬೆಂಚ್​ಮಾರ್ಕ್ ಅಧ್ಯಯನ' ತಿಳಿಸಿದೆ.

ಕಾನೂನು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆ (69 ಪ್ರತಿಶತ) ಮತ್ತು ಸಾರ್ವಜನಿಕರಿಗೆ ಅಥವಾ ಪ್ರತಿಸ್ಪರ್ಧಿಗಳಿಗೆ ತಮ್ಮ ಮಾಹಿತಿಯನ್ನು ಬಹಿರಂಗಪಡಿಸುವ ಅಪಾಯ (68 ಪ್ರತಿಶತ)ವನ್ನು ಜೆನ್ ಎಐ ಹೊಂದಿದೆ ಎಂದು ಕಂಪನಿಗಳು ಉಲ್ಲೇಖಿಸಿವೆ. 48 ಪ್ರತಿಶತದಷ್ಟು ಜನರು ಸಾರ್ವಜನಿಕವಲ್ಲದ ಕಂಪನಿಯ ಮಾಹಿತಿಯನ್ನು ಜೆಎನ್ ಎಐ ಸಾಧನಗಳಲ್ಲಿ ನಮೂದಿಸುವುದನ್ನು ಒಪ್ಪಿಕೊಂಡರೆ, 91 ಪ್ರತಿಶತದಷ್ಟು ವ್ಯವಹಾರಗಳು ತಮ್ಮ ಡೇಟಾವನ್ನು ಎಐನಲ್ಲಿ ಉದ್ದೇಶಿತ ಮತ್ತು ಕಾನೂನುಬದ್ಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಗ್ರಾಹಕರಿಗೆ ಭರವಸೆ ನೀಡಲು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಹೇಳಿವೆ.

"ಕಂಪನಿಗಳು ಜೆನ್ ಎಐ ಅನ್ನು ಮೂಲಭೂತವಾಗಿ ವಿಭಿನ್ನ ತಂತ್ರಜ್ಞಾನವಾಗಿ ನೋಡುತ್ತವೆ ಮತ್ತು ಪರಿಗಣಿಸಲು ಹೊಸ ಸವಾಲುಗಳನ್ನು ಹೊಂದಿವೆ" ಎಂದು ಸಿಸ್ಕೊ ಮುಖ್ಯ ಕಾನೂನು ಅಧಿಕಾರಿ ದೇವ್ ಸ್ಟಾಲ್ಕೊಫ್ ಹೇಳಿದರು. "ಡೇಟಾ ಮತ್ತು ಅಪಾಯ ನಿರ್ವಹಿಸಲು ಜೆನ್ ಎಐಗೆ ಹೊಸ ತಂತ್ರಗಳು ಬೇಕಾಗುತ್ತವೆ ಎಂದು ಶೇಕಡಾ 90 ಕ್ಕೂ ಹೆಚ್ಚು ಜನ ನಂಬಿದ್ದಾರೆ. ಗ್ರಾಹಕರ ವಿಶ್ವಾಸವನ್ನು ಕಾಪಾಡಿಕೊಳ್ಳುವುದು ಅದರ ಮೇಲೆ ಅವಲಂಬಿತವಾಗಿದೆ" ಎಂದು ಸ್ಟಾಲ್ಕೊಫ್ ತಿಳಿಸಿದರು.

ಬಹುತೇಕ ಕಂಪನಿಗಳಿಗೆ ಈ ಅಪಾಯಗಳ ಬಗ್ಗೆ ತಿಳಿದಿವೆ ಮತ್ತು ಅದರಿಂದ ಪಾರಾಗಲು ನಿಯಂತ್ರಣಗಳನ್ನು ಜಾರಿಗೆ ತರುತ್ತಿವೆ. ಸುಮಾರು 63 ಪ್ರತಿಶತದಷ್ಟು ಜನರು ಯಾವ ಡೇಟಾವನ್ನು ಎಐಗೆ ನೀಡಬಹುದು ಎಂಬುದರ ಮೇಲೆ ಮಿತಿಗಳನ್ನು ಹೇರಿದ್ದಾರೆ ಮತ್ತು 61 ಪ್ರತಿಶತದಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳು ಜೆಎನ್ ಎಐ ಸಾಧನಗಳನ್ನು ಬಳಸಬಹುದಾದ ಮಿತಿಗಳನ್ನು ಹಾಕಿಕೊಂಡಿದ್ದಾರೆ. ಈ ಮಿತಿಯ ಪ್ರಮಾಣಗಳು ಕಳೆದ ವರ್ಷದ ಮಟ್ಟದಲ್ಲಿಯೇ ಇದ್ದು ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿಲ್ಲ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಟೈಪಿಂಗ್​ಗಿಂತ ಕೈಬರಹದಿಂದ ಸ್ಮರಣಶಕ್ತಿ ಹೆಚ್ಚಳ: ಅಧ್ಯಯನ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.