PM Surya Ghar Muft Bijli Yojana: ದೇಶದ ಬಡ, ಮಧ್ಯಮ ವರ್ಗದ ಜನರ ಮನೆಗಳಿಗೆ ಉಚಿತ ವಿದ್ಯುತ್ ನೀಡಲು ಕೇಂದ್ರ ಸರ್ಕಾರ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಭಾಗವಾಗಿ ಕೋಟ್ಯಂತರ ಮನೆಗಳಿಗೆ ಸೋಲಾರ್ ರೂಫ್ ಟಾಪ್ ಸಿಸ್ಟಂ ಅಳವಡಿಸಲಾಗುತ್ತದೆ. 'ಪಿಎಂ ಸೂರ್ಯ ಘರ್-ಮುಫ್ತ್ ಬಿಜ್ನಿ ಯೋಜನೆ'ಯ ಮೂಲಕ ಫಲಾನುಭವಿಗಳು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಇದಕ್ಕಾರಿ ಸರ್ಕಾರ 75,021 ಕೋಟಿ ರೂ. ಮೀಸಲಿಟ್ಟಿದೆ.
ನೋಂದಣಿ ಮಾಡುವುದು ಹೇಗೆ?:
- ಈ ಯೋಜನೆಯ ಲಾಭ ಪಡೆಯಲು ರಾಷ್ಟ್ರೀಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
- ಪೋರ್ಟಲ್‌ನಲ್ಲಿ ಸೌರ ರೂಫ್ ಸ್ಥಾಪನೆಗೆ ಸೂಕ್ತವಾದ ಮಾರಾಟಗಾರರನ್ನೂ ಸಹ ನೀವು ಆಯ್ಕೆ ಮಾಡಬಹುದು.
- ಮೊದಲು ಅಧಿಕೃತ ಪೋರ್ಟಲ್ https://www.pmsuryaghar.gov.inಗೆ ಭೇಟಿ ನೀಡಿ.
- ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ. ನಿಮ್ಮ ವಿದ್ಯುತ್ ವಿತರಣಾ ಕಂಪನಿಯನ್ನು ನಿರ್ದಿಷ್ಟಪಡಿಸಿ.
- ನಂತರ ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಿ.
- ಈ ವಿವರಗಳನ್ನು ಭರ್ತಿ ಮಾಡಿದ ನಂತರವೇ ನಿಮ್ಮ ಅರ್ಜಿಯನ್ನು ನೋಂದಾಯಿಸಲಾಗುತ್ತದೆ.
ಲಾಗಿನ್ ಆ್ಯಂಡ್ ಅಪ್ಲೈ ವಿಧಾನ:
- ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಮಾಡಿ.
- ಇದು ರೂಫ್ ಟಾಪ್ ಸೋಲಾರ್ ಪವರ್ ಅರ್ಜಿ ತೋರಿಸುತ್ತದೆ. ಅರ್ಜಿಯಲ್ಲಿ ಸಂಪೂರ್ಣ ವಿವರ ತುಂಬಬೇಕು.
ಅರ್ಜಿ ಪರಿಶೀಲನೆ:
- ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ಸ್ಥಳೀಯ ವಿದ್ಯುತ್ ವಿತರಣಾ ಕಂಪನಿ (ಡಿಸ್ಕಾಂ) ಅರ್ಜಿಯನ್ನು ಪರಿಶೀಲಿಸುತ್ತದೆ.
- ಇದರ ಅನುಮೋದನೆಗೆ ಕೆಲವು ವಾರಗಳು ಬೇಕಾಗುತ್ತವೆ.
- ಡಿಸ್ಕಮ್‌ನಿಂದ ಯೋಜನೆಯ ಅನುಮೋದನೆಗಾಗಿ ನಿರೀಕ್ಷಿಸಿ.
ಸೌರ ಫಲಕಗಳ ಅಳವಡಿಕೆ:
- ಡಿಸ್ಕಾಂನಿಂದ ಅನುಮೋದನೆ ಪಡೆದ ನಂತರ ನೀವು ನಿಮ್ಮ ಡಿಸ್ಕಾಂನ ಲಿಸ್ಟ್ ಮಾಡಿದ ಮಾರಾಟಗಾರರಿಂದ ಮಾತ್ರ ಮನೆಗೆ ಸೋಲಾರ್ ಪ್ಲಾಂಟ್ ಅಳವಡಿಸಬೇಕು.
- ಅನುದಾನ ಪಡೆಯಲು ಈ ಮಾರಾಟಗಾರರ ನೋಂದಣಿ ಅಗತ್ಯ.
ನೆಟ್ ಮೀಟರಿಂಗ್‌ಗೆ ಅರ್ಜಿ ಸಲ್ಲಿಕೆ ಹೇಗೆ?:
- ಸೋಲಾರ್ ಅಳವಡಿಕೆ ಪೂರ್ಣಗೊಳಿಸಿದ ನಂತರ ನೀವು ಪೋರ್ಟಲ್‌ನಲ್ಲಿ ನಿಮ್ಮ ವಿದ್ಯುತ್ ಸ್ಥಾವರದ ವಿವರ ನಮೂದಿಸಬೇಕಾಗುತ್ತದೆ.
- ನಂತರ ನೆಟ್ ಮೀಟರಿಂಗ್‌ಗೆ ಅರ್ಜಿ ಸಲ್ಲಿಸಿ.
- ಈ ಸಾಧನವು ನಿಮ್ಮ ಸೌರ ಫಲಕಗಳಿಂದ ಉತ್ಪತ್ತಿಯಾಗುವ ಕರೆಂಟ್ ಮತ್ತು ಗ್ರಿಡ್ ವಿದ್ಯುತ್ ಸೇವಿಸುವುದನ್ನು ದಾಖಲಿಸುತ್ತದೆ.
- ಈ ಸೆಟಪ್‌ನೊಂದಿಗೆ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು DISCOMಗೆ ಮರಳಿ ಮಾರಾಟ ಮಾಡಬಹುದು.
- ಆದ್ದರಿಂದ ನೀವು ಹೆಚ್ಚುವರಿ ಆದಾಯ ಪಡೆಯಬಹುದು.
ಸಹಾಯಧನ ವಿತರಣೆ:
- ನೆಟ್ ಮೀಟರ್ ಅಳವಡಿಸಿದ ನಂತರ ಡಿಸ್ಕಾಂ ಅಧಿಕಾರಿಗಳು ಪರಿಶೀಲಿಸುತ್ತಾರೆ.
- ಈ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ನಂತರ ಪೋರ್ಟಲ್, ಆಯೋಗದ ಪ್ರಮಾಣಪತ್ರವನ್ನು ನೀಡುತ್ತದೆ.
- ಪ್ರಮಾಣಪತ್ರವನ್ನು ಸ್ವೀಕರಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆಯ ವಿವರ ಮತ್ತು ಕ್ಯಾನ್ಸಲ್ ಚೆಕ್ ಅನ್ನು ಪೋರ್ಟಲ್‌ನಲ್ಲಿ ಸಲ್ಲಿಸಬೇಕು.
- ಅರ್ಜಿದಾರರು 3 kWವರೆಗೆ ರೂಫ್ ಟಾಪ್ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲು ಅಗತ್ಯವಿರುವ ಯಾವುದೇ ಡೌನ್ ಪಾವತಿ ಇಲ್ಲದೆ ಶೇ 7ರವರೆಗೆ ಕಡಿಮೆ ಬಡ್ಡಿಯ ಸಾಲ ಉತ್ಪನ್ನಗಳನ್ನು ಪಡೆಯಬಹುದು.
- ಅಂದರೆ, 3 ಕಿಲೋವ್ಯಾಟ್ ವ್ಯವಸ್ಥೆಗೆ 78 ಸಾವಿರ ರೂ.ವರೆಗೆ ಸಬ್ಸಿಡಿ.
- ಈ ಸಬ್ಸಿಡಿ ಮೊತ್ತವನ್ನು 30 ದಿನಗಳಲ್ಲಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಯೋಜನೆಯ ಪ್ರಯೋಜನಗಳು:
- ಇದು ನಿಮಗೆ ಉಚಿತ ವಿದ್ಯುತ್ ಒದಗಿಸುವುದು ಮಾತ್ರವಲ್ಲದೆ ವಿದ್ಯುತ್ ಬಿಲ್‌ಗಳಲ್ಲಿ ಹಣ ಉಳಿಸುತ್ತದೆ.
- ಉದಾಹರಣೆಗೆ, ತಿಂಗಳಿಗೆ 300 ಯೂನಿಟ್ ವಿದ್ಯುತ್ ಖರ್ಚಾಗುವ 3 kW ಸೋಲಾರ್ ಸಿಸ್ಟಮ್ ಸ್ಥಾಪಿಸುವ ಮೂಲಕ ವರ್ಷಕ್ಕೆ ಸುಮಾರು 15,000 ರೂ. ಉಳಿಸಬಹುದು.
- ಹೆಚ್ಚುವರಿಯಾಗಿ, ಯೋಜನೆಯು 2 kWವರೆಗಿನ ವ್ಯವಸ್ಥೆಗಳಿಗೆ ಶೇ 60 ಸಬ್ಸಿಡಿ ಮತ್ತು 2ರಿಂದ 3 kW ನಡುವಿನ ವ್ಯವಸ್ಥೆಗಳಿಗೆ ಶೇ 40 ಸಬ್ಸಿಡಿಯನ್ನು ಒದಗಿಸುತ್ತದೆ. ಆರಂಭದಲ್ಲಿ ನಿಮ್ಮ ಮನೆಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡುತ್ತದೆ.
- ಇದಕ್ಕೆ ಮೇಲಾಧಾರ ರಹಿತ ಸಾಲವೂ ಲಭ್ಯ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ದೇಶದಲ್ಲಿ ಓಡಲಿದೆ ಏರ್ ಟ್ರೈನ್: ಏನಿದರ ವಿಶೇಷತೆ, ಉದ್ದೇಶ? - Air Train