ನವದೆಹಲಿ: ಪ್ಯಾರೀಸ್ ಮೂಲದ 'ವುಮೆನ್ ಇನ್ ಟೆಕ್' ಸಂಸ್ಥೆ 2030ರ ಹೊತ್ತಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ ಮತ್ತು ಗಣಿತ (ಎಸ್ಟಿಇಎಎಂ- ಸ್ಟೆಮ್)ನಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಿ, ಅವರ ಸಂಖ್ಯೆಯಲ್ಲಿ ಐದು ಮಿಲಿಯನ್ ಮಾಡುವ ಗುರಿ ಹೊಂದಿದೆ.
ವುಮೆನ್ ಇನ್ ಟೆಕ್, ತಂತ್ರಜ್ಞಾನದಲ್ಲಿ ಮಹಿಳೆಯ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಈ ಸಂಸ್ಥೆ ಮಹಿಳಾ ದಿನದಂದು ಭಾರತದಲ್ಲಿ ಕೂಡ ತನ್ನ ಹೊಸ ಅಧ್ಯಯನ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಜೊತೆಗೆ ಮೆಂಟರ್ಶಿಪ್ ಕಾರ್ಯಕ್ರಮ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಗಳ ಮೂಲಕ ಗುರಿ ಸಾಧಿಸುವುದಾಗಿ ತಿಳಿಸಿದೆ.
ಸ್ಟೆಮ್ನಲ್ಲಿ 2030ರ ಹೊತ್ತಿಗೆ 5 ಮಿಲಿಯನ್ ಮಹಿಳೆಯರು ಮತ್ತು ಯುವತಿಯರನ್ನು ಸಬಲಗೊಳಿಸುವ ವುಮೆನ್ ಇನ್ ಟೆಕ್ ಜಾಗತಿಕ ಸಮಗ್ರ ಪ್ರಯತ್ನದಲ್ಲಿ ಭಾರತದಲ್ಲಿನ ಈ ಅಧ್ಯಯನದ ಉದ್ಘಾಟನೆ ಪ್ರಮುಖ ಘಟನೆಯಾಗಿದೆ. ಈ ವೇಳೆ, ಭಾರತದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯ ಚಟುವಟಿಕೆ ಕಾರ್ಯಕ್ರಮವನ್ನು ಹೊಂದಿಸುವ ಅವಶ್ಯತೆ ಇದೆ ಎಂದು ವುಮೆನ್ ಇನ್ ಟೆಕ್ನ ಕಂಟ್ರಿ ಮುಖ್ಯಸ್ಥೆ ರಾಧಿಕಾ ಅಯ್ಯಂಗಾರ್ ತಿಳಿಸಿದ್ದಾರೆ.
ಸ್ಟೆಮ್ ವೃತ್ತಿಯಲ್ಲಿ ಯುವತಿಯರ ಹಿಂದುಳಿಯುವಿಕೆ ದರವೂ ಭಾರತದಲ್ಲಿ ಲಿಂಗ ಅಸಮಾನತೆ ಹೆಚ್ಚಿಸಿದ್ದು, ಇದು ಎಚ್ಚರಿಕೆ ಗಂಟೆಯಾಗಿದೆ. ಈ ಸಮಸ್ಯೆ ಬಗ್ಗೆ ನಮಗೆ ತಿಳಿಸಿದೆ. ಜಾಗತಿಕ ಸಹಭಾಗಿತ್ವದ ಮೂಲಕ ಸ್ಟೆಮ್ನಲ್ಲಿ ಯುವತಿಯರು ಮತ್ತು ಮಹಿಳೆಯರು ಬೆಳವಣಿಗೆಯ ಹಾದಿಯಲ್ಲಿ ಸಾಗಬೇಕಿದೆ. ತಂತ್ರಜ್ಞಾನದ ಬೆಳವಣಿಗೆ ಹಾದಿಯಲ್ಲಿ ಶಿಕ್ಷಣದಲ್ಲಿ, ವೃತ್ತಿಯಲ್ಲಿ ಮತ್ತು ನಿರ್ಧಾರ ರೂಪಿಸುವ ಪಾತ್ರದಲ್ಲಿ ಮಹಿಳೆಯರು ಮತ್ತು ಯುವತಿಯರು ಹೆಚ್ಚು ಸಬಲೀಕರಣಗೊಳಿಸಿ, ಸರಳ ಮಾರ್ಗದ ಮೂಲಕ ಹೆಚ್ಚು ಶ್ರೀಮಂತ ಮತ್ತು ಆನಂದದಾಯಕ ಪ್ರಯಾಣವನ್ನು ಹೊಂದಬೇಕಿದೆ.
ವುಮೆನ್ ಇನ್ ಟೆಕ್ ಇಂಡಿಯಾ ಇದೇ ವೇಳೆ ಗರ್ಲ್ಸ್4ಗರ್ಲ್ಸ್ (ಜಿ4ಜಿ) ಸಹಭಾಗಿತ್ವನ್ನು ಘೋಷಿಸಿದೆ. ಅಮೆರಿಕದ ಹಾರ್ವಡರ್ ಯುನಿವರ್ಸಿಟಿಯಲ್ಲಿ ಜಾಗತಿಕ ಪ್ರಾಜೆಕ್ಟ್ ಇದಾಗಿದೆ. ಒಟ್ಟಾಗಿ ಸಂಘಟನೆಗಳು ಭಾರತದ ಯುವ ಮಹಿಳೆಯರು ಮತ್ತು ಯುವತಿಯರಿಗೆ ಅವರ ನಾಯಕತ್ವದ ಸಾಮರ್ಥ್ಯ ಸಾಧಿಸಲು ಭಾರತದಲ್ಲಿ ಮೆಂಟರಿಂಗ್ ಕಾರ್ಯಕ್ರಮ ಪರಿಚಯಿಸಿದೆ.
ವುಮೆನ್ ಇನ್ ಟೆಕ್ ಇಂಡಿಯಾ ಈಶಾನ್ಯ ಪ್ರದೇಶದಲ್ಲಿನ ಮಹಿಳೆಯರ ದೈನಂದಿನ ಜೀವನ ನಿರ್ವಹಣೆ ಮತ್ತು ಸಣ್ಣ ಉದ್ಯಮಕ್ಕೆ ಪ್ರಯೋಜನವಾಗುವ ಡಿಜಿಟಲ್ ಸಂಪನ್ಮೂಲದ ಬೆಂಬಲವನ್ನು ಒದಗಿಸುವ ಗುರಿ ಹೊಂದಿದೆ. (ಐಎಎನ್ಎಸ್)
ಇದನ್ನೂ ಓದಿ: ಕೇರಳದ ಶಾಲೆಯಲ್ಲಿ ಗಮನ ಸೆಳೆದ AI ಟೀಚರ್: ಹೇಗೆಲ್ಲ ಮಕ್ಕಳ ಮನಸ್ಸು ಕದ್ದಿದ್ದಾಳೆ ಗೊತ್ತಾ ಈ ಶಿಕ್ಷಕಿ