Parental Supervision Feature: ಇನ್ಸ್ಟಾಗ್ರಾಂ.. ಈ ಹೆಸರಿಗೆ ಹೆಚ್ಚು ಪರಿಚಯ ಅಗತ್ಯವಿಲ್ಲ. ಪ್ರತಿಯೊಂದು ಫೋನ್ ಈ ಅಪ್ಲಿಕೇಶನ್ ಹೊಂದಿರುವುದು ಸಾಮಾನ್ಯ. ಈ ಸೋಷಿಯಲ್ ಮೀಡಿಯಾದಲ್ಲಿ ಯುವಕರೆಲ್ಲರೂ ಮುಳುಗಿ ಹೋಗಿದ್ದಾರೆ. ಆದರೂ.. ಮಕ್ಕಳೂ ಇದರಲ್ಲಿ ಕೊಚ್ಚಿ ಹೋಗುತ್ತಿರುವುದು ಅಪಾಯದ ಸಂಗತಿ. ಅದಕ್ಕೇ ಪರಿಸ್ಥಿತಿ ಕೈ ಜಾರದಂತೆ ಇನ್ಸ್ಟಾಗ್ರಾಂ ಹೊಸದೊಂದು ಫೀಚರ್ ಹೊರ ತರುತ್ತಿದೆ.
ಈ ಫೀಚರ್ ಮೂಲಕ ಮಕ್ಕಳು ಯಾವ ರೀತಿಯ ಕಂಟೆಂಟ್ ನೋಡುತ್ತಿದ್ದಾರೆ ಎಂಬುದನ್ನು ಪೋಷಕರು ತಿಳಿದುಕೊಳ್ಳಬಹುದಾಗಿದೆ. ಅದರ ಹೆಸರೇ "ಪೆರೆಂಟಲ್ ಸೂಪರ್ ವಿಸನ್" ಫೀಚರ್. ಈ ವೈಶಿಷ್ಟ್ಯದೊಂದಿಗೆ ಪೋಷಕರು ಇನ್ಸ್ಟಾಗ್ರಾಂನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದಾರೆ? ಯಾವ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಬಹುದು. ಈ ಫೀಚರ್ ಅನ್ನು ಹೇಗೆ ಆ್ಯಕ್ಟಿವೆಟ್ ಮಾಡಿಕೊಳ್ಳಬೇಕೆಂಬುದನ್ನು ತಿಳಿಯಿರಿ..
- ಪೆರೆಂಟಲ್ ಸೂಪರ್ ವಿಸನ್ ಫೀಚರ್ ಅನ್ನು ಆ್ಯಕ್ಟಿವೆಟ್ ಮಾಡ ಬಯಸುವವರು ತಮ್ಮ ಮಕ್ಕಳ ಖಾತೆಗಳಿಂದ ಇನ್ಸ್ಟಾಗ್ರಾಂಗೆ ಮನವಿ ಸಲ್ಲಿಸಬೇಕು..
- ಅದರ ನಂತರ ಪೋಷಕರು ತಮ್ಮ ಮಕ್ಕಳು ಬಳಸುವ ಖಾತೆಗಳಿಗೆ ಪೆರೆಂಟಲ್ ಸೂಪರ್ ವಿಸನ್ ರಿಕ್ವೆಸ್ಟ್ ಕಳುಹಿಸಬೇಕು.
- ಅವರ ಮಕ್ಕಳು ರಿಕ್ವೆಸ್ಟ್ ಆ್ಯಕ್ಸಪ್ಟ್ ಮಾಡಿಕೊಂಡ್ರೆ ಪೋಷಕರು ತಮ್ಮ ಮಕ್ಕಳ ಇನ್ಸ್ಟಾಗ್ರಾಂ ಖಾತೆಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು.
- ಈ ವೈಶಿಷ್ಟ್ಯದಿಂದಾಗಿ ಯಾವುದೇ ಮಗು ಬೇರೊಬ್ಬರ ಖಾತೆಯ ಬಗ್ಗೆ ದೂರು ನೀಡಿದರೆ, ಪೋಷಕರು ನೋಟಿಫಿಕೇಶನ್ ಪಡೆಯುತ್ತಾರೆ.
Take A Break ಬಗ್ಗೆ ಗೊತ್ತಾ..?: ಪೆರೆಂಟಲ್ ಸೂಪರ್ ವಿಸನ್ ಫೀಚರ್ ಜೊತೆಗೆ ಇನ್ಸ್ಟಾಗ್ರಾಂ ಮತ್ತೊಂದು ವೈಶಿಷ್ಟ್ಯವನ್ನು ಸಹ ತಂದಿದೆ. ಅಷ್ಟೇ.. ಟೇಕ್ ಎ ಬ್ರೇಕ್.. ಬಹುಪಾಲು ಜನರು ಇನ್ಸ್ಟಾಗ್ರಾಂಗೆ ಲಾಗಿನ್ ಆದ ನಂತರ ಅವರು ಎಷ್ಟು ಸಮಯದವರೆಗೆ ಉಪಯೋಗಿಸುತ್ತಾರೆ ಎಂದು ಅವರಿಗೆ ತಿಳಿದಿರುವುದಿಲ್ಲ. ಅವರು ನಿಮಿಷಗಳಿಂದ ಗಂಟೆಗಳವರೆಗೆ ಇನ್ಸ್ಟಾ ಬಳಸುತ್ತಲೇ ಇರುತ್ತಾರೆ. ಈ ಪರಿಸ್ಥಿತಿ ಅತಿಯಾಗುತ್ತಿರುವುದನ್ನು ಮನಗಂಡ ಇನ್‌ಸ್ಟಾಗ್ರಾಮ್ ಸ್ವಯಂ ನಿಯಂತ್ರಣಕ್ಕಾಗಿ 'ಟೇಕ್ ಎ ಬ್ರೇಕ್' ಎಂಬ ಫೀಚರ್ ತಂದಿದೆ.
- ಬಳಕೆದಾರರು ದೀರ್ಘಕಾಲ ಇನ್ಸ್ಟಾಗ್ರಾಂ ನೋಡುತ್ತಿದ್ದರೆ ಫೋನ್ ಪರದೆಯಲ್ಲಿ "ಟೇಕ್ ಎ ಬ್ರೇಕ್" ಎಂಬ ಪಾಪ್ - ಅಪ್ ಸಂದೇಶವು ಕಾಣಿಸಿಕೊಳ್ಳುತ್ತದೆ.
- ನೀವು ಅದರ ಮೇಲೆ ಕ್ಲಿಕ್ ಮಾಡಿದರೆ ಎಷ್ಟು ಸಮಯ ವಿರಾಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಮಯದ ಮಿತಿಗಳನ್ನು ಕಾಣಬಹುದು.
- ಸಮಯವನ್ನು ಆಯ್ಕೆ ಮಾಡಿದ ನಂತರ ಅದು ಕೆಲವು ಸಲಹೆಗಳನ್ನು ನೀಡುತ್ತದೆ.
- ಇನ್ಸ್ಟಾಗ್ರಾಂ ಅದರಲ್ಲಿ ಟೇಕ್ ಎ ಡೀಪ್ ಬ್ರಿತ್, ಬಳಿಕ ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬರೆಯಿರಿ, ನಿಮ್ಮ ಮೆಚ್ಚಿನ ಹಾಡುಗಳನ್ನು ಆಲಿಸಿ ಮತ್ತು ಟು-ಡು ಲಿಸ್ಟ್ನಲ್ಲಿರುವ ಕಾರ್ಯಗಳನ್ನು ಪೂರ್ಣಗೊಳಿಸು ಎಂದು ಸೂಚಿಸುತ್ತದೆ.
ಅ್ಯಕ್ಟಿವಿಟಿ ಸಹ ತಿಳಿಯಬಹುದು:
- ಮಕ್ಕಳು ಇನ್ಸ್ಟಾಗ್ರಾಂನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದಾರೆ ಎಂಬುದನ್ನು ಈ ರೀತಿ ತಿಳಿದುಕೊಳ್ಳಿ.
- ಮೊದಲು ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೊಫೈಲ್ ಓಪನ್ ಮಾಡಿ..
- ನಂತರ ಮೇಲಿನ ಮೆನು ಬಾರ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಆ್ಯಕ್ಟಿವಿಟಿ ಆಯ್ದುಕೊಳ್ಳಿ.
- ದಿನದಿಂದ ದಿನಕ್ಕೆ ಇಡೀ ವಾರಕ್ಕೆ ಇನ್ಸ್ಟಾಗ್ರಾಂ ಅನ್ನು ಎಷ್ಟು ಸಮಯದವರೆಗೆ ಬಳಸಲಾಗಿದೆ ಎಂಬ ವಿವರಗಳನ್ನು ಸ್ಕ್ರೀನ್ ಮೇಲೆ ಕಾಣುತ್ತವೆ.
ಓದಿ: ಆಂಡ್ರಾಯ್ಡ್ ಎಕ್ಸ್ಆರ್ ಪರಿಚಯಿಸಿದ ಗೂಗಲ್ - ಸ್ಯಾಮ್ಸಂಗ್: ಇದರ ಕಾರ್ಯವೇನು ಗೊತ್ತಾ?