ETV Bharat / technology

ಮಾನವ ಸಾಮರ್ಥ್ಯಕ್ಕೆ ಸರಿಸಾಟಿಯಾದ ಹೊಸ 'ಜಿಪಿಟಿ -4ಒ' ಹೊರತಂದ ಓಪನ್​ಎಐ - OpenAI GPT 4o

ಓಪನ್ ಎಐ ತನ್ನ ಹೊಸ ಶಕ್ತಿಶಾಲಿಯಾಗಿರುವ ಚಾಟ್​ಜಿಪಿಟಿ ಆವೃತ್ತಿಯನ್ನು ಅನಾವರಣಗೊಳಿಸಿದೆ.

OpenAI launches new GPT-4o AI model
OpenAI launches new GPT-4o AI model (ians)
author img

By ETV Bharat Karnataka Team

Published : May 14, 2024, 12:23 PM IST

ನವದೆಹಲಿ: ಸ್ಯಾಮ್ ಆಲ್ಟ್ ಮ್ಯಾನ್ ನೇತೃತ್ವದ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಕಂಪನಿ ಓಪನ್ ಎಐ ಸೋಮವಾರ ತನ್ನ ಜಿಪಿಟಿ-4 ಮಾದರಿಯ ಹೊಸ ಆವೃತ್ತಿ 'ಜಿಪಿಟಿ-4 ಒ' (GPT-4o) ಅನ್ನು ಬಿಡುಗಡೆ ಮಾಡಿದೆ. ಇದು ಪಠ್ಯ, ಆಡಿಯೋ ಮತ್ತು ಇಮೇಜ್ ಔಟ್ ಪುಟ್​ಗಳ (Text, Audio, and Image Output) ಯಾವುದೇ ರೀತಿಯ ಸಂಯೋಜನೆಯನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಜಿಪಿಟಿ-4ಒ ಪಠ್ಯ ಮತ್ತು ಇಮೇಜ್ ಸಾಮರ್ಥ್ಯಗಳು ಪ್ರಸ್ತುತ ಎಲ್ಲಾ ಚಾಟ್ ಜಿಪಿಟಿ ಬಳಕೆದಾರರಿಗೆ ಲಭ್ಯವಾಗಲಿವೆ.

"ನಾವು ಜಿಪಿಟಿ-4 ಒ ಅನ್ನು ಉಚಿತವಾಗಿ ಮತ್ತು ಪ್ಲಸ್ ಬಳಕೆದಾರರಿಗೆ 5 ಪಟ್ಟು ಹೆಚ್ಚಿನ ಸಂದೇಶ ಮಿತಿಗಳೊಂದಿಗೆ ಲಭ್ಯವಾಗುವಂತೆ ಮಾಡುತ್ತಿದ್ದೇವೆ" ಎಂದು ಕಂಪನಿಯು ಲೈವ್ ಸ್ಟ್ರೀಮ್ ಈವೆಂಟ್‌ನಲ್ಲಿ ತಿಳಿಸಿದೆ. ಓಪನ್ ಎಐ ಶೀಘ್ರದಲ್ಲೇ ಚಾಟ್ ಜಿಪಿಟಿಯೊಳಗೆ ಆಲ್ಫಾದಲ್ಲಿ ಜಿಪಿಟಿ-4 ಒನೊಂದಿಗೆ ವಾಯ್ಸ್ ಮೋಡ್‌ನ ಹೊಸ ಆವೃತ್ತಿಯನ್ನು ಹೊರತರಲಿದೆ.

"ನಮ್ಮ ಹೊಸ ಮಾದರಿ ಜಿಪಿಟಿ-4 ಒ, ನಮ್ಮ ಅತ್ಯುತ್ತಮ ಜಿಪಿಟಿ ಮಾದರಿಯಾಗಿದೆ. ಇದು ಸ್ಮಾರ್ಟ್ ಹಾಗೂ ವೇಗವಾಗಿದ್ದು, ಮೂಲದಲ್ಲಿ ಮಲ್ಟಿಮೋಡಲ್ ಆಗಿದೆ" ಎಂದು ಸ್ಯಾಮ್ ಆಲ್ಟ್​ ಮ್ಯಾನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಇದು ಉಚಿತ ಯೋಜನೆ ಸೇರಿದಂತೆ ಎಲ್ಲಾ ಚಾಟ್ ಜಿಪಿಟಿ ಬಳಕೆದಾರರಿಗೆ ಲಭ್ಯವಾಗಲಿದೆ. ಇಲ್ಲಿಯವರೆಗೆ, ಜಿಪಿಟಿ-4 ವರ್ಗದ ಮಾಡೆಲ್​ಗಳು ಮಾಸಿಕವಾಗಿ ಚಂದಾದಾರಿಕೆ ಪಡೆದವರಿಗೆ ಮಾತ್ರ ಲಭ್ಯವಿದ್ದವು. ಆದರೆ ಅತ್ಯುತ್ತಮ ಎಐ ತಂತ್ರಜ್ಞಾನಗಳನ್ನು ಎಲ್ಲರಿಗೂ ಸಿಗುವಂತೆ ಮಾಡುವ ನಮ್ಮ ಗುರಿಗೆ ಅನುಗುಣವಾಗಿ ನಾವು ಇದನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತಿದ್ದೇವೆ" ಎಂದು ಅವರು ಎಕ್ಸ್​ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಜಿಪಿಟಿ-4ಒ ಆಡಿಯೊ ಇನ್ಪುಟ್​ಗಳಿಗೆ 232 ಮಿಲಿಸೆಕೆಂಡುಗಳಲ್ಲಿ ಪ್ರತಿಕ್ರಿಯಿಸಬಲ್ಲದು. ಇದರ ಸರಾಸರಿ ಪ್ರತಿಕ್ರಿಯೆ ಸಮಯ 320 ಮಿಲಿಸೆಕೆಂಡ್​ ಆಗಿದ್ದು, ಇದು ಸಂಭಾಷಣೆಯಲ್ಲಿ ಮಾನವನ ಪ್ರತಿಕ್ರಿಯೆ ಸಮಯಕ್ಕೆ ಸಮನಾಗಿದೆ. ಅಸ್ತಿತ್ವದಲ್ಲಿರುವ ಎಐ ಮಾದರಿಗಳಿಗೆ ಹೋಲಿಸಿದರೆ ಜಿಪಿಟಿ-4 ಒ ದೃಷ್ಟಿ ಮತ್ತು ಆಡಿಯೊ ತಿಳುವಳಿಕೆಯಲ್ಲಿ ವಿಶೇಷವಾಗಿ ಉತ್ತಮವಾಗಿದೆ.

ಮುಂಬರುವ ವಾರಗಳಲ್ಲಿ ಎಪಿಐನಲ್ಲಿ ವಿಶ್ವಾಸಾರ್ಹ ಬಳಕೆದಾರರ ಸಣ್ಣ ಗುಂಪಿಗೆ ಜಿಪಿಟಿ-4 ಒನ ಹೊಸ ಆಡಿಯೋ ಮತ್ತು ವೀಡಿಯೊ ಸಾಮರ್ಥ್ಯಗಳಿಗೆ ಬೆಂಬಲವನ್ನು ಪ್ರಾರಂಭಿಸಲು ಕಂಪನಿಯು ಯೋಜಿಸಿದೆ. ಜಿಪಿಟಿ-4 ಒ ನೊಂದಿಗೆ, ಕಂಪನಿಯು ಪಠ್ಯ, ದೃಷ್ಟಿ ಮತ್ತು ಆಡಿಯೊ ಕಂಟೆಂಟ್​ಗಳಾದ್ಯಂತ ಎಂಡ್-ಟು-ಎಂಡ್ ಎಂಬ ಒಂದೇ ಹೊಸ ಮಾದರಿಗೆ ತರಬೇತಿ ನೀಡಿದೆ. ಅಂದರೆ ಎಲ್ಲಾ ಇನ್ಪುಟ್ ಮತ್ತು ಔಟ್ಪುಟ್​ಗಳನ್ನು ಒಂದೇ ನ್ಯೂರಲ್ ನೆಟ್ವರ್ಕ್​ನಿಂದ ಸಂಸ್ಕರಿಸಲಾಗುತ್ತದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ ಪ್ರೊಫೈಲ್ ಪಿಕ್ಚರ್ ಸ್ಕ್ರೀನ್​ಶಾಟ್​ಗೆ ನಿರ್ಬಂಧ: ಶೀಘ್ರವೇ ಬರಲಿದೆ ಹೊಸ ವೈಶಿಷ್ಟ್ಯ - New WhatsApp Feature

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.