ETV Bharat / technology

ಬಹುನಿರೀಕ್ಷಿತ ಒನ್​ ಪ್ಲಸ್​​ ವಾಚ್​-2​ ಶೀಘ್ರ ಬಿಡುಗಡೆ: ಕೇವಲ ರೂ.99 ಗೆ ಬುಕ್ಕಿಂಗ್​ ಸೌಲಭ್ಯ - ಒನ್​ ಪ್ಲಸ್​​ ವಾಚ್ 2

ಒನ್​ ಪ್ಲಸ್​​ ವಾಚ್​ ಬಿಡುಗಡೆಗೆ ತಯಾರಿ ನಡೆದಿದೆ. ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಕ OnePlus ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಲು ಸನ್ನದ್ದವಾಗಿದೆ. ಕಂಪನಿಯು OnePlus Smartwatch-2 ಹೆಸರಿನಲ್ಲಿ ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದರ ವಿಶೇಷತೆಗಳು, ವೈಶಿಷ್ಟ್ಯಗಳು ಹಾಗೂ ಬೆಲೆಗಳ ಬಗ್ಗೆ ತಿಳಿದುಕೊಳ್ಳೋಣ.

OnePlus Watch 2 Launch Date
ಬಹುನಿರೀಕ್ಷಿತ ಒನ್​ ಪ್ಲಸ್​​ ವಾಚ್​-2​ ಶೀಘ್ರ ಬಿಡುಗಡೆ: ಕೇವಲ ರೂ.99 ಗೆ ಬುಕಿಂಗ್ ಸೌಲಭ್ಯ
author img

By ETV Bharat Karnataka Team

Published : Feb 26, 2024, 10:02 AM IST

ಹೈದರಾಬಾದ್​: ಭಾರತೀಯ ಮಾರುಕಟ್ಟೆಯಲ್ಲಿ OnePlus ಗೆ ಸಾಕಷ್ಟು ಬೇಡಿಕೆ ಇದೆ. ಈ ಪ್ರಮುಖ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಹಾಟ್‌ಕೇಕ್‌ಗಳಂತೆ ಮಾರಾಟವಾಗುತ್ತವೆ. OnePlus ಬ್ರ್ಯಾಂಡ್‌ಗೆ ದೇಶ ಹಾಗೂ ವಿದೇಶಗಳಲ್ಲಿ ತುಂಬಾ ಕ್ರೇಜ್ ಇದೆ. ಈ ಹಿನ್ನೆಲೆಯಲ್ಲಿ ಕಂಪನಿ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಅದುವೇ ಒನ್​ ಪ್ಲಸ್​ ಸ್ಮಾರ್ಟ್​ ವಾಚ್​ -2. ಹಾಗಾದರೆ ಈ ವಾಚ್​​ನ ವೈಶಿಷ್ಟ್ಯಗಳೇನು ಅಂತಾ ನೋಡುವುದಾದರೆ,

OnePlus ವಾಚ್ 2ರ ವೈಶಿಷ್ಟ್ಯಗಳು:

ಬ್ರಾಂಡ್ - ಒನ್​ಪ್ಲಸ್​

ವಾಚ್ ಸ್ಕ್ರೀನ್ - 1.43 ಇಂಚು

ಗಾತ್ರ - 46 ಮಿಮೀ

ಡಿಸ್ಪ್ಲೇ ಮೆಟೀರಿಯಲ್ - ಸೈಪರ್​ ಕ್ರಿಸ್ಟಲ್ AMOLED ಡಿಸ್​​ಪ್ಲೇ

ಪ್ರೊಸೆಸರ್ - Qualcomm Snapdragon W5 Gen 1 ಚಿಪ್ಸೆಟ್

ಬ್ಯಾಟರಿ ಬಾಳಿಕೆ - 100 ಗಂಟೆಗಳು (ಒಂದೇ ಬಾರಿ ಚಾರ್ಜ್​ ಮಾಡಿದರೆ)

ಬ್ಯಾಟರಿ ಸಾಮರ್ಥ್ಯ - 402mAh

ವಾಟರ್​ಪ್ರೂಫ್​ - IP68 ರೇಟಿಂಗ್

OS - Google WearOS 4.0

ಬೆಲೆ- ರೂ.16,999 (ಅಂದಾಜು)

ಇಂದು ಬಿಡುಗಡೆ ಸಾಧ್ಯತೆಯಾಗುವ ಸಾಧ್ಯತೆಗಳಿವೆ.

ವಿಶೇಷತೆಗಳು: 5.0 ಬ್ಲೂಟೂತ್ ಆವೃತ್ತಿ, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ. OnePlus 12ರಿಂದ ಪ್ರೇರಿತವಾಗಿದ್ದು, ಎರಡು ರೂಪಾಂತರಗಳಲ್ಲಿ ವಾಚ್​ ಅನ್ನು ಹೊರ ತರಲಾಗುತ್ತಿದೆ. OnePlus ಸ್ಮಾರ್ಟ್‌ವಾಚ್-2 ಸಿಲಿಕೋನ್ ಸ್ಟ್ರಾಪ್‌ನೊಂದಿಗೆ ಸ್ಟೇನ್‌ಲೆಸ್ ಸ್ಟೀಲ್ ಕೇಸ್ ಕೂಡಾ ಹೊಂದಿದೆ. ಏತನ್ಮಧ್ಯೆ 2021ರಲ್ಲೇ ಸ್ಮಾರ್ಟ್ ವಾಚ್-1 ಅನ್ನು ಆವೃತ್ತಿ ಬಿಡುಗಡೆಯಾಗಿ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಪೂರ್ವ ಬುಕಿಂಗ್ ಗೆ ಅವಕಾಶ: OnePlus Smartwatch-2 ಗಾಗಿ ಪೂರ್ವ-ಬುಕ್ಕಿಂಗ್​ ಈಗಾಗಲೇ ಪ್ರಾರಂಭವಾಗಿದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೇವಲ ರೂ.99 ಪಾವತಿಸಿ ಹೊಸ ಮಾದರಿಯ ಈ ವಾಚ್​ಗೆ ಬುಕ್ ಮಾಡಬಹುದು. ಈ ಸ್ಮಾರ್ಟ್ ವಾಚ್ ಅನ್ನು OnePlus ಸ್ಟೋರ್‌ಗಳಿಂದ ಮಾತ್ರವಲ್ಲದೇ Amazon ಮತ್ತು Flipkart ನಂತಹ ಇ-ಕಾಮರ್ಸ್ ಆನ್‌ಲೈನ್ ಸ್ಟೋರ್‌ಗಳಿಂದಲೂ ಬುಕ್ ಮಾಡಬಹುದಾಗಿದೆ.

ಇತರ ರಿಯಾಯಿತಿಗಳು: OnePlus Smartwatch-2 ನ ಬಾಕ್ಸ್ ಬೆಲೆಯಲ್ಲಿ ಕಂಪನಿ 1000 ವರೆಗೆ ತ್ವರಿತ ರಿಯಾಯಿತಿ ನೀಡುವುದಾಗಿ ಹೇಳಿದೆ. Pre Bullet Wireless Z2 Active Noise Cancellation ಇಯರ್‌ಬಡ್‌ಗಳನ್ನು ವಾಚ್‌ನೊಂದಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ. ಈ ಉಚಿತ ಇಯರ್‌ಬಡ್ಸ್ ಕೂಪನ್ ಕೊಡುಗೆ ಮಾರ್ಚ್ 31 ರವರೆಗೆ ಮಾತ್ರ ಲಭ್ಯ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ವಾಚ್​ ಖರೀದಿಗೆ ಆಸಕ್ತಿ ಹೊಂದಿರುವವರು, OnePlus ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಪಾಸ್ ಲಿಂಕ್ ಖರೀದಿಸಬಹುದು. ಇದರ ಸಹಾಯದಿಂದ ನೀವು ಬೇರೆಯವರಿಗಿಂತ ಮೊದಲು ವಾಚ್ ಅನ್ನು ಬುಕ್ ಮಾಡಬಹುದು. ಆದಾಗ್ಯೂ, ಈ ಕೊಡುಗೆಯು ಮೊದಲ 1,500 ವಾಚ್​​ಗಳಿಗೆ ಮಾತ್ರವೇ ಲಭ್ಯ ಇರಲಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ವಿಮಾ ವಲಯಕ್ಕೆ ಬೇಕಿದೆ ಕಾಯಕಲ್ಪ: ಸುಧಾರಣಾ ಕ್ರಮ ಜಾರಿಗೆ ಇದು ಸಕಾಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.