ETV Bharat / technology

ಮದರ್​ಬೋರ್ಡ್​ ವೈಫಲ್ಯ, ಗ್ರೀನ್​ ಲೈನ್ಸ್​ ಸಮಸ್ಯೆ, ಉಚಿತ ಪರಿಹಾರಕ್ಕೆ ಮುಂದಾದ OnePlus​! - ONEPLUS OFFERS FREE REPAIR

OnePlus Offers Free Repair: 8 ಮತ್ತು 9 ಸೀರಿಸ್​ನಲ್ಲಿ ಮದರ್‌ಬೋರ್ಡ್ ವೈಫಲ್ಯ ಮತ್ತು ಗ್ರೀನ್​ ಲೈನ್ಸ್​ ಡಿಸ್​ಪ್ಲೇ ಸಮಸ್ಯೆಗಳ ಬಗ್ಗೆ ಒನ್​ಪ್ಲಸ್​ ಒಪ್ಪಿಕೊಂಡಿದ್ದು, ಪೀಡಿತ ಸಾಧನಗಳಿಗೆ ಉಚಿತ ಪರಿಹಾರವನ್ನು ನೀಡಲು ಮುಂದಾಗಿದೆ.

ONEPLUS  ONEPLUS MOTHERBOARD FAILURE  ONEPLUS OFFERS FREE REPAIR  GREEN LINE DISPLAY ISSUE
ಮದರ್​ಬೋರ್ಡ್​ ವೈಫಲ್ಯ, ಗ್ರೀನ್​ ಲೈನ್ಸ್​ ಸಮಸ್ಯೆ (ETV Bharat)
author img

By ETV Bharat Tech Team

Published : Oct 22, 2024, 7:22 AM IST

OnePlus Offers Free Repair: ಟೆಕ್ ಬ್ರ್ಯಾಂಡ್ ಒನ್‌ಪ್ಲಸ್‌ನ ಅನೇಕ ಸ್ಮಾರ್ಟ್‌ಫೋನ್‌ಗಳು ಸ್ಕ್ರೀನ್​ ಮೇಲೆ ಗ್ರೀನ್​ ಲೈನ್ಸ್​ ಕಾಣಿಸಿಕೊಳ್ಳುವುದು ಮತ್ತು ಮದರ್‌ಬೋರ್ಡ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಈ ನ್ಯೂನತೆಗಳ ಬಗ್ಗೆ ನಿರಂತರವಾಗಿ ದೂರುತ್ತಿದ್ದಾರೆ. ಈಗ FoneArena ಜೊತೆ ಕಂಪನಿ ಮಾತನಾಡುತ್ತಿದ್ದಾಗ, OnePlus ಗುಣಮಟ್ಟ ಮತ್ತು ಬಳಕೆದಾರರ ತೃಪ್ತಿಯು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಖಚಿತಪಡಿಸಿದೆ. ಕಂಪನಿಯು ತನ್ನ ಲೈಫ್‌ಟೈಮ್ ಡಿಸ್‌ಪ್ಲೇ ವಾರಂಟಿ ಪ್ಲಾನ್ ಬಗ್ಗೆಯೂ ಪ್ರಸ್ತಾಪಿಸಿದೆ.

FoneArena ಜೊತೆಗಿನ OnePlus ಕಂಪನಿಯ ಸಂಭಾಷಣೆಯಲ್ಲಿ, ಅದರ ಹಲವು ಸಾಧನಗಳು, ವಿಶೇಷವಾಗಿ OnePlus 8 ಮತ್ತು OnePlus 9 ಸರಣಿಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಒಪ್ಪಿಕೊಂಡರು. ಪರದೆಯ ಮೇಲೆ ಹಠಾತ್ ಗ್ರೀನ್​ ಲೈನ್ಸ್​ ಕಾಣಿಸಿಕೊಳ್ಳುವ ಸಮಸ್ಯೆ OnePlus ಸಾಧನಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಸಮಸ್ಯೆ ಇಡೀ ಮೊಬೈಲ್​ ಉದ್ಯಮವು ಎದುರಿಸುತ್ತಿದೆ. ಒನ್‌ಪ್ಲಸ್ ತನ್ನ ಪೂರೈಕೆದಾರರೊಂದಿಗೆ ಸುಧಾರಣೆಗಳ ಕುರಿತು ಕೆಲಸ ಮಾಡುತ್ತಿದೆ ಮತ್ತು ಪೂರೈಕೆ ಸರಪಳಿಗೆ ಸಂಬಂಧಿಸಿದ ಸವಾಲುಗಳನ್ನು ಸಹ ಪರಿಹರಿಸಲಾಗುತ್ತಿದೆ ಎಂದು ಬ್ರ್ಯಾಂಡ್ ಹೇಳಿದೆ.

ಸಾಫ್ಟ್‌ವೇರ್ ಅಪ್​ಡೇಟ್​ಗಳ ನಂತರ ಆಯ್ದ OnePlus ಸ್ಮಾರ್ಟ್‌ಫೋನ್‌ಗಳು ಮದರ್‌ಬೋರ್ಡ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಕಂಪನಿ ಒಪ್ಪಿಕೊಂಡಿದೆ. ಬಳಕೆದಾರರು ಈ ಹಾರ್ಡ್‌ವೇರ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸಿದರೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಈ ಸಮಸ್ಯೆಗಳನ್ನು ಎದುರಿಸುತ್ತಿರುವ ಬಳಕೆದಾರರು ಅದನ್ನು ಹತ್ತಿರದ ಸೇವಾ ಕೇಂದ್ರಕ್ಕೆ ವರದಿ ಮಾಡಬೇಕು ಮತ್ತು ಅವರ ಸಾಧನವನ್ನು ಉಚಿತವಾಗಿ ರಿಪೇರಿ ಮಾಡಲಾಗುತ್ತದೆ ಎಂದು ಬ್ರ್ಯಾಂಡ್ ಹೇಳಿದೆ.

ಬಳಕೆದಾರರು ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಇದಲ್ಲದೆ, ಅವರು ಹೊಸ ಸಾಧನವನ್ನು ಖರೀದಿಸಲು ಬಯಸಿದರೆ ಅವರಿಗೆ ರಿಯಾಯಿತಿ ದರದಲ್ಲಿ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತದೆ. ಅಷ್ಟೇ ಅಲ್ಲ ಲೈಫ್‌ಟೈಮ್​ ಡಿಸ್‌ಪ್ಲೇ ವಾರಂಟಿಯನ್ನು ನೀಡುತ್ತಿದೆ. ಇದನ್ನು ಮಾಡಿದ ಉದ್ಯಮದಲ್ಲಿ ಮೊದಲ ಸ್ಮಾರ್ಟ್‌ಫೋನ್ ತಯಾರಕ ಎಂದು ಕಂಪನಿ ಹೇಳಿಕೊಳ್ಳುತ್ತದೆ. ಈ ವಾರಂಟಿಯು ಒಂದು ವರ್ಷಕ್ಕಿಂತ ಹೆಚ್ಚು ಹಳೆಯದಾದ ಮತ್ತು ಖಾತರಿಯಿಲ್ಲದ ಸಾಧನಗಳಿಗೆ ಸಹ ಅನ್ವಯಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಓದಿ: ಐಫೋನ್ ಹೋಮ್ ಸ್ಕ್ರೀನ್ ಕಸ್ಟಮೈಸ್ ಮಾಡುವುದು ಹೇಗೆ?; ಅಬ್ಬಾ! ಏನೆಲ್ಲಾ ಬದಲಾಯಿಸಬಹುದು!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.