ನವದೆಹಲಿ: ಸ್ಮಾರ್ಟ್ಫೋನ್ ಬ್ರಾಂಡ್ ಐಕ್ಯೂ ಗುರುವಾರ ತನ್ನ ನಿಯೋ ಸರಣಿಯ ಅಡಿ ಡ್ಯುಯಲ್ ಚಿಪ್ ಮತ್ತು 50 ಎಂಪಿ ಕ್ಯಾಮೆರಾ ಹೊಂದಿರುವ ಐಕ್ಯೂ ನಿಯೋ 9 ಪ್ರೊ ಮಾಡೆಲ್ನ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನಿಯೋ 9 ಪ್ರೊ 8ಜಿಬಿ +256 ಜಿಬಿ ಮಾಡೆಲ್ 34,999 ರೂ. ಬೆಲೆಯಲ್ಲಿ ಮತ್ತು 12 ಜಿಬಿ + 256 ಜಿಬಿ ಮಾಡೆಲ್ 36,999 ರೂ.ಗೆ ಫೆಬ್ರವರಿ 22 ರಿಂದ ಅಮೆಜಾನ್ ಡಾಟ್ ಇನ್ನಲ್ಲಿ ಮತ್ತು ಐಕ್ಯೂ ಇ-ಸ್ಟೋರ್ನಲ್ಲಿ ಪ್ರೀ-ಬುಕ್ ಬಳಕೆದಾರರಿಗೆ ಮಾರಾಟಕ್ಕೆ ಲಭ್ಯವಿದೆ.
8 ಜಿಬಿ + 128 ಜಿಬಿ ಮಾಡೆಲ್ಗೆ 33,999 ರೂ.ಗಳ ಬೆಲೆಯಲ್ಲಿ ಮಾರ್ಚ್ನಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ನಿಯೋ9 ಪ್ರೊ ಸ್ಮಾರ್ಟ್ ಫೋನ್ ಫಿಯರಿ ರೆಡ್ ಮತ್ತು ಕಾಂಕ್ವೆರರ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಸಿಗಲಿದೆ. "ಇಂದಿನ ಟೆಕ್ ಪೀಳಿಗೆಯ ಕ್ರಿಯಾತ್ಮಕ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾದ ನಿಯೋ ಸರಣಿಯು ಹೆಚ್ಚಿನ ಕಾರ್ಯಕ್ಷಮತೆ ಮತ್ತು ಅತ್ಯಾಧುನಿಕ ಗೇಮಿಂಗ್ ಸಾಮರ್ಥ್ಯಗಳನ್ನು ಒಳಗೊಂಡಿದೆ‘‘ ಎಂದು ಐಕ್ಯೂ ಇಂಡಿಯಾದ ಸಿಇಒ ನಿಪುನ್ ಮರ್ಯಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪನಿಯ ಪ್ರಕಾರ, ಇದು ಡ್ಯುಯಲ್ ಚಿಪ್ ಶಕ್ತಿಯನ್ನು ಹೊಂದಿರುವ ಪವರ್ ಪ್ಯಾಕ್ಡ್ ಸ್ಮಾರ್ಟ್ಫೋನ್ ಆಗಿದ್ದು, ಅತ್ಯಾಧುನಿಕ ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 8 ಜೆನ್ 2 ಮೊಬೈಲ್ ಪ್ಲಾಟ್ ಫಾರ್ಮ್ನಲ್ಲಿ ಕೆಲಸ ಮಾಡುತ್ತದೆ ಮತ್ತು ಸೂಪರ್ ಕಂಪ್ಯೂಟಿಂಗ್ ಚಿಪ್ ಕ್ಯೂ 1 ಇದರಲ್ಲಿದೆ. ಕ್ಯೂ 1 ಚಿಪ್ ಈ ಸ್ಮಾರ್ಟ್ ಫೋನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಅದ್ಭುತ ಗೇಮಿಂಗ್ ಅನುಭವ, ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.
"ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ಕೊಡುಗೆಗಳೊಂದಿಗೆ, ಐಕ್ಯೂಒ ನಿಯೋ 9 ಪ್ರೊ ಆಕರ್ಷಕ ಕೊಡುಗೆಯಾಗಿದೆ. ಗ್ರಾಹಕರು ವಿವಿಧ ಬ್ಯಾಂಕ್ ಆಫರ್ಗಳು, ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಇತರ ಆರಂಭಿಕ ಪ್ರಯೋಜನಗಳನ್ನು ಪಡೆಯಬಹುದು" ಎಂದು ಅಮೆಜಾನ್ ಇಂಡಿಯಾದ ವೈರ್ ಲೆಸ್ ಮತ್ತು ಹೋಮ್ ಎಂಟರ್ ಟೈನ್ ಮೆಂಟ್ ನಿರ್ದೇಶಕ ರಂಜಿತ್ ಬಾಬು ಹೇಳಿದ್ದಾರೆ.
ನಿಯೋ 9 ಪ್ರೊ 6.78 ಇಂಚಿನ 144 ಹರ್ಟ್ಜ್ ಅಮೋಲೆಡ್ ಡಿಸ್ ಪ್ಲೇ, 1260 × 2800 ರೆಸಲ್ಯೂಶನ್ ಹೊಂದಿದೆ. ಇದು 120 ವ್ಯಾಟ್ ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನದೊಂದಿಗೆ 5160 ಎಂಎಎಚ್ ಬ್ಯಾಟರಿ ಒಳಗೊಂಡಿದೆ. ಕೇವಲ 11 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ : 10 ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ಫೋನ್ ಪಟ್ಟಿಯ ಅಗ್ರ 7 ಸ್ಥಾನದಲ್ಲಿ ಐಫೋನ್