ನವದೆಹಲಿ: ಡೆಲ್ ಟೆಕ್ನಾಲಜೀಸ್ ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧರಿತ ವಾಣಿಜ್ಯ ಬಳಕೆಗಾಗಿ ಸೂಕ್ತವಾದ ಲ್ಯಾಪ್ಟಾಪ್ ಮತ್ತು ಮೊಬೈಲ್ ವರ್ಕ್ ಸ್ಟೇಷನ್ಗಳ ಹೊಸ ಸರಣಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಹೊಸ ಸರಣಿಯು ಲ್ಯಾಟಿಟ್ಯೂಡ್ ಮತ್ತು ಪ್ರಿಸಿಶನ್ ಹೆಸರಿನ ಮಾದರಿಗಳನ್ನು ಒಳಗೊಂಡಿದೆ. ಲ್ಯಾಟಿಟ್ಯೂಡ್ ಸರಣಿಯ ಲ್ಯಾಪ್ಟಾಪ್ಗಳು 1,10,999 ರೂ. ಮತ್ತು ಪ್ರಿಶಿಶನ್ ಸರಣಿಯ ಲ್ಯಾಪ್ಟಾಪ್ಗಳು 2,19,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿವೆ.
"ಹೊಸ ಲ್ಯಾಟಿಟ್ಯೂಡ್ ಮತ್ತು ಪ್ರಿಸಿಶನ್ ಸರಣಿಯ ಲ್ಯಾಪ್ಟಾಪ್ಗಳು ಹೈಬ್ರಿಡ್ ಕೆಲಸದ ಯುಗದಲ್ಲಿ ವ್ಯವಹಾರ ವೃತ್ತಿಪರರಿಗೆ ಎಐ-ವರ್ಧಿತ ಉತ್ಪಾದಕತೆಯ ಅನುಕೂಲತೆಯನ್ನು ನೀಡುತ್ತವೆ" ಎಂದು ಡೆಲ್ ಟೆಕ್ನಾಲಜೀಸ್ ಇಂಡಿಯಾದ ಕ್ಲೈಂಟ್ ಸೊಲ್ಯೂಷನ್ಸ್ ಗ್ರೂಪ್‌ನ ನಿರ್ದೇಶಕ ಮತ್ತು ಜಿ.ಎಂ.ಇಂದ್ರಜಿತ್ ಬೆಳಗುಂಡಿ ಹೇಳಿದರು.
"ಎಐ ಕ್ಷೇತ್ರವು ವಿಕಸನಗೊಳ್ಳುತ್ತಿದ್ದಂತೆ, ನಮ್ಮ ಹೊಸ ವಾಣಿಜ್ಯ ಸರಣಿಯ ಲ್ಯಾಪ್ಟಾಪ್ಗಳು ನಮ್ಮ ಗ್ರಾಹಕರಿಗೆ ಮತ್ತು ಕಂಪನಿಗಳ ಉದ್ಯೋಗಿಗಳಿಗೆ ಕಾರ್ಯಕ್ಷಮತೆ, ಹೆಚ್ಚಿನ ಭದ್ರತೆ, ಪೋರ್ಟಬಿಲಿಟಿ ಮತ್ತು ಸುಸ್ಥಿರತೆಯನ್ನು ನೀಡುತ್ತವೆ" ಎಂದು ಅವರು ಹೇಳಿದರು.
ಲ್ಯಾಟಿಟ್ಯೂಡ್ ಲ್ಯಾಪ್ಟಾಪ್ಗಳು ಇಂಟೆಲ್ ಕೋರ್ ಅಲ್ಟ್ರಾ 7 ಪ್ರೊಸೆಸರ್ಗಳನ್ನು ಹೊಂದಿದ್ದು, 5,000 ಸರಣಿಯು 13 ನೇ ಜೆನ್ ಇಂಟೆಲ್ ಕೋರ್ ಐ 7-1355 ಯು ಪ್ರೊಸೆಸರ್ಗಳ ಕಾನ್ಫಿಗರೇಶನ್ಗಳಲ್ಲಿ ಲಭ್ಯವಿದೆ. ಹೊಸ ಪ್ರಿಸಿಷನ್ ಲ್ಯಾಪ್ಟಾಪ್ಗಳು ಹೆಚ್ಚು ಸಾಮರ್ಥ್ಯದ ಸಾಧನ ಬಯಸುವ ಬಳಕೆದಾರರು, ಡೆವಲಪರ್ಗಳು ಮತ್ತು ಅದರಾಚೆಗಿನ ಕಾರ್ಯಕ್ಷಮತೆಯ ಅಗತ್ಯಗಳನ್ನು ಪೂರೈಸುತ್ತದೆ. ಇದು ಇಂಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್ ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.
ಅಂತರ್ ನಿರ್ಮಿತ ಭದ್ರತೆಯು ಅತ್ಯುನ್ನತವಾಗಿರುವುದರಿಂದ ಈ ಎಐ-ಚಾಲಿತ ಸಾಧನಗಳು ಹಾರ್ಡ್ ವೇರ್ ಮತ್ತು ಫರ್ಮ್ ವೇರ್ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಇದು ಆಧುನಿಕ ಸೈಬರ್ ದಾಳಿಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಇದಲ್ಲದೆ ಅಂತರ್ ನಿರ್ಮಿತ ದೋಷ ಪತ್ತೆ ವೈಶಿಷ್ಟ್ಯವು ಸಾರ್ವಜನಿಕವಾಗಿ ವರದಿಯಾದ ಭದ್ರತಾ ನ್ಯೂನತೆಗಳನ್ನು ಸ್ಕ್ಯಾನ್ ಮಾಡಲು ಮತ್ತು ಸಲಹೆಗಳನ್ನು ನೀಡಲು ಸಾಧನಕ್ಕೆ ಅನುಮತಿಸುವ ಮೂಲಕ ರಕ್ಷಣೆಯನ್ನು ಮತ್ತಷ್ಟು ಸುಧಾರಿಸುತ್ತದೆ.
ಡೆಲ್ ಟೆಕ್ನಾಲಜೀಸ್ ಇಂಕ್ (ಡೆಲ್) ಇದು ಡೆಸ್ಕ್ ಟಾಪ್ ಪರ್ಸನಲ್ ಕಂಪ್ಯೂಟರ್ಗಳು, ಸಾಫ್ಟ್ ವೇರ್ ಮತ್ತು ಪೆರಿಫೆರಲ್ಗಳ ಪೂರೈಕೆದಾರ ಕಂಪನಿಯಾಗಿದೆ. ಕಂಪನಿಯು ಲ್ಯಾಪ್ ಟಾಪ್ಗಳು, ಡೆಸ್ಕ್ ಟಾಪ್ಗಳು, ಮೊಬೈಲ್ಗಳು, ವರ್ಕ್ ಸ್ಟೇಷನ್ಗಳು, ಶೇಖರಣಾ ಸಾಧನಗಳು, ಸಾಫ್ಟ್ ವೇರ್, ಕ್ಲೌಡ್ ಪರಿಹಾರಗಳು ಮತ್ತು ನೋಟ್ ಬುಕ್ಗಳಂತಹ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯವನ್ನು ವಿನ್ಯಾಸಗೊಳಿಸುತ್ತದೆ.
ಇದನ್ನೂ ಓದಿ : ರಿಯಲ್ ಮಿ Narzo 70X 5ಜಿ ಏ.24ರಂದು ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆಗಳೇನು? - Narzo 70X 5G