ನವದೆಹಲಿ: ಎಕ್ಸ್ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅಭಿನಂದಿಸಿದ್ದಾರೆ. ಈ ಕುರಿತು ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಶ್ವದಲ್ಲೇ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಪ್ರಧಾನಿಗೆ ಶುಭಾಶಯ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿದ್ದಾರೆ. ಅವರ ಬೆಂಬಲಿಗರ ಸಂಖ್ಯೆ 100 ಮಿಲಿಯನ್ ಎಂದು ಪಿಎಂಒ ಕಚೇರಿ ಇತ್ತೀಚಿಗೆ ತಿಳಿಸಿತ್ತು.
ಅಮೆರಿಕ ಅಧ್ಯಕ್ಷ ಜೋ ಬೈಡನ್, ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ 11.2 ಮಿಲಿಯನ್ ಮತ್ತು ಪೋಪ್ ಪ್ರಾನ್ಸಿಸ್ 18.5 ಮಿಲಿಯನ್ ಬೆಂಬಲಿಗರನ್ನು ಹೊಂದಿದ್ದಾರೆ. ಇವರನ್ನೆಲ್ಲಾ ಹಿಂದಿಕ್ಕಿರುವ ಪ್ರಧಾನಿ ಮೋದಿ ವಿಶ್ವದ ಅತಿ ಹೆಚ್ಚು ಬೆಂಬಲಿಗರ ಪಡೆಯನ್ನು ಹೊಂದಿದ್ದಾರೆ.
ಇನ್ನು ಪ್ರಖ್ಯಾತ ಜಾಗತಿಕ ಸೆಲಿಬ್ರಿಟಿಗಳ ಪಟ್ಟಿಯಲ್ಲಿ ಟೇಲರ್ ಸ್ವಿಫ್ಟ್ 95.2 ಮಿಲಿಯನ್, ಲೇಡಿ ಗಾಗಾ 83.1 ಮಿಲಿಯನ್ ಮತ್ತು ಕಿಮ್ ಕಾರ್ದಶಿಯಾನ್ 5.2 ಮಿಲಿಯನ್ ಬೆಂಬಲಿಗರನ್ನು ಹೊಂದಿದ್ದಾರೆ.
ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳಲ್ಲಿ ವಿರಾಟ್ ಕೊಹ್ಲಿ 64.2 ಮಿಲಿಯನ್, ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ 63.6 ಮಿಲಿಯನ್ ಮತ್ತು ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 52.9 ಮಿಲಿಯನ್ ಸೇರಿದಂತೆ ಕೆಲವು ಸಕ್ರಿಯ ಫಾಲೋವರ್ಸ್ ಹೊಂದಿದ್ದಾರೆ.
ಭಾರತದ ವಿವಿಧ ರಾಜಕಾರಣಿಗಳಿಗೆ ಹೋಲಿಕೆ ಮಾಡಿದರೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 26.4 ಮಿಲಿಯನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 27.5 ಮಿಲಿಯನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ 19.9 ಮಿಲಿಯನ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 7.4 ಮಿಲಿಯನ್, ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ 6.3 ಮಿಲಿಯನ್, ಅವರ ಪುತ್ರ ತೇಜಸ್ವಿ ಯಾದವ್ 5.2 ಮಿಲಿಯನ್ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ 2.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ, ಪಿಎಂ ಮೋದಿ ಅವರ ಎಕ್ಸ್ ಖಾತೆ ಸಾಮಾಜಿಕ ಜಾಲತಾಣದಲ್ಲಿ 30 ಮಿಲಿಯನ್ ಬಳಕೆದಾರರ ಬೆಳವಣಿಗೆ ಕಂಡಿದೆ. ಈ ಸಂಖ್ಯೆ ಏರಿಕೆ ಕೇವಲ ಎಕ್ಸ್ ಜಾಲತಾಣ ಮಾತ್ರವಲ್ಲ, ಅವರ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಕೂಡ ವಿಸ್ತರಿಸಿದೆ. ಇದರಲ್ಲಿ ಕ್ರಮವಾಗಿ ಸುಮಾರು 25 ಮಿಲಿಯನ್ ಚಂದಾದಾರರನ್ನು ಮತ್ತು 91 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
2009 ಸಾಮಾಜಿಕ ಜಾಲತಾಣ ಪ್ರವೇಶಿಸಿದ ನರೇಂದ್ರ ಮೋದಿ ಅವರು ಸಕ್ರಿಯವಾಗಿ ಇವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ನಾಗರಿಕರೊಂದಿಗೆ ಮಾತುಕತೆ, ಪ್ರಕ್ರಿಯೆ, ಸಂದೇಶವವನ್ನು ಹಂಚಿಕೊಳ್ಳುತ್ತಾರೆ. ಮತ್ತೊಂದು ಮುಖ್ಯ ಅಂಶ ಎಂದರೆ, ಅವರು ಇದುವರೆಗೂ ಸಾಮಾಜಿಕ ಜಾಲತಾಣದಲ್ಲಿ ಯಾರನ್ನು ಬ್ಲಾಕ್ ಮಾಡಿಲ್ಲ. (ಎಎನ್ಐ)
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧದ ಖಾಸಗಿ ದೂರು ರದ್ದುಗೊಳಿಸಿದ ಕೋರ್ಟ್